Bigg Boss Season 10: ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳು ನೀವೇ..!

ಬೆಂಗಳೂರು: ನಿಜ ಜೀವನದಲ್ಲಿ ಸೆಲೆಬ್ರಿಟಿಗಳು ಹೇಗಿರ್ತಾರೆ.. ಏನ್ ಮಾಡ್ತಿರ್ತಾರೆ..? ಅನ್ನೋ ಕುತೂಹಲ ತಣಿಸಿದ ಶೋ ಅಂದ್ರೆ ಅದು ಬಿಗ್ ಬಾಸ್… ಸ್ಯಾಂಡಲ್ ವುಡ್ ಕಿಚ್ಚ ಅಲಿಯಾಸ್ ಸುದೀಪ್ ನೇತೃತ್ವದಲ್ಲಿ ನಡೆಯುತ್ತಿದ್ದ ಬಿಗ್ ಬಾಸ್ ಕಾರ್ಯಕ್ರಮ ಭಾರೀ ಜನ ಮೆಚ್ಚುಗೆ ಪಡೆಯಿತು.

ಸೆಲೆಬ್ರಿಟಿಗಳನ್ನೆಲ್ಲ ಜನ ಸಂಪರ್ಕವೇ ಇಲ್ಲದ ಮನೆಯೊಳಗೆ ಒಟ್ಟಿಗೆ ಸೇರಿಸಿ ನಡೆಸ್ತಿದ್ದ ಕಾರ್ಯಕ್ರಮ ಬಿಗ್ ಬಾಸ್ ಥೀಮ್ ಬಾರೀ ಕ್ಲಿಕ್ ಆಗಿತ್ತು. ಪ್ರಾರಂಭದಲ್ಲಿ ಸಿನಿಮಾ ಇಂಡಸ್ಟ್ರಿ ಸ್ಟಾರ್ ಗಳನ್ನ ಕರೆಸಿ ಆಡಿಸುತ್ತಿದ್ದ ಆಟ ಬರು ಬರುತ್ತಾ “ಕಿರಿಕ್ ಪಾರ್ಟಿ” ಗಳನ್ನ ತೆರೆ ಮೇಲೆ ತಂದಿತ್ತು. ಒಂದೊಂದು ಸೀಸನ್ ನಲ್ಲಿ ಬದಲಾಗ್ತಿದ್ದ ಬಿಗ್ ಬಾಸ್ ಶೋ ಈಗ ಹೊಸ ಟಾಸ್ಕ್ ಹೊತ್ತು ಬರ್ತಿದೆ.

ನಟ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಬಿಗ್ ಬಾಸ್ ಸೀಸನ್ 10 ರ ಪ್ರೋಮೋವೊಂದು ಬಿಡುಗಡೆ ಕಂಡಿದೆ. ಸಾಮನ್ಯವಾಗಿ ಪ್ರತೀ ಸೀಸನ್ ನಲ್ಲೂ ನಟ ಸುದೀಪ್ ಎಂಟ್ರಿ ಕೊಟ್ಟು ಭಿನ್ನ ಭಿನ್ನವಾದ ಡೈಲಾಗ್ ಹೊಡೆದು ಕಾಣಿಸಿಕೊಳ್ತಿದ್ದ ಪ್ರೋಮೋ ಈಗ ಕಂಪ್ಲೀಟ್ಲೀ ಬದಲಾಗಿದೆ. ಅಲ್ಲಿ ಸುದೀಪ್ ಮತ್ತು ಸೆಲೆಬ್ರಿಟಿ ಬದಲಾಗಿ ನೀವಿರಲಿದ್ದೀರಿ..

ಹೌದು, ಈಗ ಬಿಗ್ ಬಾಸ್ ಕನ್ನಡದ 10ನೇ ಸೀಸನ್‌ಗೆ ರೆಡಿಯಾಗುತ್ತಿದೆ. ಸಾಮಾನ್ಯವಾಗಿ ಯಾವಾಗಲೂ ಬಿಗ್ ಬಾಸ್ ಮನೆಯೊಳಗೆ ಕ್ಯಾಮರಾ ಇಟ್ಟು ಸ್ಪರ್ಧಿಗಳ ಚಲನವಲನಗಳನ್ನು ಸೆರೆ ಹಿಡಿಯಲಾಗುತ್ತಿತ್ತು. ಆದ್ರೀಗ ಬಿಗ್ ಬಾಸ್ 10ನೇ ಸೀಸನ್‌ನಲ್ಲಿ ಮನೆಯೊಳಗಿನ ಕ್ಯಾಮರಾ, ಬೀದಿಗೆ ಬಂದಿದೆ. ರಸ್ತೆಯಲ್ಲಿ ಜನರು ಓಡಾಡುವುದನ್ನು ತೋರಿಸಲಾಗಿದೆ. ಹಾಗೇ ಕಟ್ಟಡಗಳಲ್ಲೂ ಸಿಸಿಟಿವಿ ಅಳವಡಿಸಿದ್ದನ್ನು ತೋರಿಸಲಾಗಿದೆ. ಅಲ್ಲದೆ ಕೊನೆಯಲ್ಲಿ ಸಮ್‌ಥಿಂಗ್ ಸ್ಪೆಷಲ್ ಎಂದು ಹೇಳಿದ್ದು, ಕಿರು ತೆರೆ ವೀಕ್ಷಕರಲ್ಲಿ ಕುತೂಹಲ ದುಪ್ಪಟ್ಟಾಗಿಸಿದೆ.

More News