OUR GOVERNMENT IS STABLE: ಬಿಜೆಪಿಯಲ್ಲಿಯೇ ಕಾಂಗ್ರೆಸ್ ಸರ್ಕಾರ ಇರಲಿ ಅನ್ನೋರು ಇದ್ದಾರೆ: ಸಂತೋಷ್ ಹೇಳಿಕೆಗೆ ಅವರ ಪಕ್ಷದಲ್ಲಿಯೇ ವಿರೋಧವಿದೆ: ಸಚಿವ ಜಾರಕಿಹೊಳಿ

ಬೆಳಗಾವಿ : ಬೆಳಗಾವಿಯಲ್ಲಿ ಸಂಸದ ಸ್ಥಾನದ ಟಿಕೆಟ್ ಗಾಗಿ ಮುಸುಕಿನ ಗುದ್ದಾಟ ಏನೂ ನಡೆಯುತ್ತಿಲ್ಲ. ಯಾರಾದ್ರೂ ಒಬ್ಬರು ಅಭ್ಯರ್ಥಿಯಾಗಲೇ ಬೇಕಲ್ವಾ, ಪ್ರಯತ್ನ ಮೊದಲಿನಿಂದಲೂ ನಡೀತಾ ಇದೆ, ಪರೋಕ್ಷವಾಗಿ ಮಕ್ಕಳಿಗೆ ಟಿಕೆಟ್ ಡಿಮ್ಯಾಂಡ್ ಇಟ್ಟಿರೋದಾಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಕೂಡ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧಾರ ಮಾಡಿದ್ದೆ, ಒಂದ್ಬೇಳೆ ಪಕ್ಷ ಅಧಿಕಾರಕ್ಕೆ ಬಾರದೇ ಇದ್ದಿದಿದ್ರೆ ಸ್ಪರ್ಧಿಸುತ್ತಿದ್ದೆ ಎಂದು ಹೇಳಿದ ಅವರು, ಅದನ್ನ ನಾನು ಮುಂಚೆಯೇ ಹೇಳಿದ್ದೆ ಎಂದರು.

ಈಗ ಇಲ್ಲೇ ಇರೋ ಅವಕಾಶ ಸಿಕ್ಕಿದೆ ಇಲ್ಲೇ ಇದ್ದೀನಿ, ಮುಂದೆ ನೋಡೋಣ ಎಂದು ಹೇಳಿದ ಜಾರಕಿಹೊಳಿ, ಬೆಳಗಾವಿ ಪಾಲಿಕೆಯಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲಾ ನನ್ನ ಅಂಡರ್ ನಲ್ಲೇ ಬರಬೇಕು ಅಂತಲ್ಲ, ಯಾವುದೋ ಒಂದು ಪೋಸ್ಟ್ ವಿಚಾರ ಅಷ್ಟೇ, ಯಾರೇ ಬಂದ್ರೂ ಕೆಲಸ ಮಾಡಬೇಕು ಅಷ್ಟೇ, ಅವರಿಗಾಗಿ ಕೆಲಸ ಮಾಡಿದವರನ್ನ ಹಾಕಿಸಿಕೊಂಡಿದ್ದರು. ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸತೀಶ್ ಜಾರಕಿಹೊಳಿ ಅಸಮಧಾನ ವ್ಯಕ್ತಪಡಿಸಿದರು.
40 ಶಾಸಕರನ್ನು ತೆಗೆದುಕೊಂಡು ಏನು ಮಾಡುತ್ತಾರೆ..?
40 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರ್ತಾರೆ ಅನ್ನೋ ಬಿ.ಎಲ್ ಸಂತೋಷ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ಸನ್ನಿವೇಶಕ್ಕೆ ಈ ಮಾತು ಸರಿಯಲ್ಲ, ರಾಷ್ಟ್ರ ಮಟ್ಟದ ರಾಜಕಾರಣ ಮಾಡೋರು ಅವರು, 40 ಜನರನ್ನು ತೆಗೆದುಕೊಂಡು ಏನು ಮಾಡ್ತಾರೆ, ಯಾವುದೇ ಸರ್ಕಾರ ಬೀಳುತ್ತೆ ಅನ್ನೋದು ಸರಿಯಲ್ಲ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದು ಮೂರು ತಿಂಗಳಾಗಿದೆ, ಸರ್ಕಾರ ಬೀಳುತ್ತೆ ಅಂತ ಐದು ವರ್ಷದವರೆಗೂ ಈ ಮಾತು ಇದ್ದೇ ಇರುತ್ತದೆ, ಆದರೆ ಆ ಕಾರ್ಯದಲ್ಲಿ ಬಿಜೆಪಿಯವರು ಸಫಲ ಆಗೋಲ್ಲ ಎಂದರು.
ಅವರ ಪಾರ್ಟಿಯಲ್ಲಿ ಸಂತೋಷ್ ವಿರುದ್ಧವೇ ಮಾತನಾಡುತ್ತಾ ಇದ್ದಾರೆ, ಬಿಜೆಪಿಯಲ್ಲಿ ಕೆಲವರು ಕಾಂಗ್ರೆಸ್ ಸರ್ಕಾರ ಇರಲಿ ಅಂತ ಬಯಸ್ತಾ ಇದ್ದಾರೆ, ಅವರ ಆಶೀರ್ವಾದ ಇರಲಿ ನಮ್ಮ ಮೇಲೆ ಎಂದು ಹೇಳಿದರು. ಬೆಳಗಾವಿ ಭಾಗದಲ್ಲಿ ಕಾಂಗ್ರೆಸ್ ಗೆ ಬರುವ ವಿಚಾರ, ಆ ಭಾಗದಲ್ಲಿ ಸದ್ಯಕ್ಕೆ ಯಾರೂ ಇಲ್ಲ, ಇದ್ದರೆ ನೇರವಾಗಿ ಸಿಎಂ, ಡಿಸಿಎಂ ಭೇಟಿ ಮಾಡ್ತಾರೆ ಎಂದರು.

More News