GOVERNOR’S FAKE FACEBOOK ACCOUNT: ರಾಜ್ಯ ರಾಜ್ಯಪಾಲರಿಗೂ ಸೈಬರ್ ವಂಚಕರ ಹಾವಳಿ: ನಕಲಿ ಫೇಸ್ ಬುಕ್ ಖಾತೆ ತೆರೆದ ದುಷ್ಕರ್ಮಿಗಳು

ಬೆಂಗಳೂರು : ಸೈಬರ್ ವಂಚಕರು ಕರ್ನಾಟಕ‌ ರಾಜ್ಯ ರಾಜ್ಯಪಾಲರನ್ನು ಬಿಟ್ಟಿಲ್ಲ. ರಾಜ್ಯಪಾಲರ ಹೆಸರು ಬಳಸಿ ನಕಲಿ ಫೇಸ್ ಬುಕ್ ಖಾತೆ ತೆರೆದು ವಂಚಿಸಲು ಮುಂದಾಗಿರುವ ಘಟನೆ ವರದಿಯಾಗಿದೆ.
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆಯನ್ನು ತೆರೆದು, ಅದರಲ್ಲಿ ರಾಜ್ಯಪಾಲರ ಪೋಟೋ ಮತ್ತು ಹೆಸರು ಬಳಕೆ ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

ರಾಜ್ಯಪಾಲರ ವಿಶೇಷ ಕಾರ್ಯದರ್ಶಿಯಿಂದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದ್ದು, ಈ ಸಂಬಂಧ ಎಫ್ ಐ ಆರ್ ದಾಖಲಾಗಿದೆ. ಪೊಲೀಸರು ಈ ನಕಲಿ ಖಾತೆಯನ್ನು ಯಾರು ತೆರೆದಿದ್ದಾರೆ ಎನ್ನುವುದರ ಕುರಿತು ತನಿಖೆ ಕೈಗೊಂಡಿದ್ದಾರೆ.

More News