DEAR CITIZENS ARE YOU OKAY WITH THIS..? ಪ್ರೀತಿಯ ಪ್ರಜೆಗಳೆ, ಇದು ಭವಿಷ್ಯದ ಸಾಧ್ಯತೆ. ‘ತನಾತನಿ ಸಂಸತ್ತು’ ನಿಮಗಿದು ಒಪ್ಪಿಗೆಯೇ : ನಟ ಪ್ರಕಾಶ್ ರಾಜ್ ಟ್ವೀಟ್

ಬೆಂಗಳೂರು : ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟ್ಯಾಲಿನ್ ಅವರ ಪುತ್ರ ಉದಯನಿಧಿ ಸ್ಟ್ಯಾಲಿನ್ ಅವರು ನೀಡಿರುವ ಹೇಳಿಕೆ ಸನಾತನ ಧರ್ಮ ನಿರ್ಮೂಲನೆ ಕುರಿತು ನಟ ಪ್ರಕಾಶ್ ರಾಜ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಿನ್ನೆಯಷ್ಟೇ ಸನಾತನಿಗಳನ್ನು ‘ತನಾತನಿಗಳು’ ಎಂದು ಗೇಲಿ ಮಾಡಿದ್ದ ನಟ ಪ್ರಕಾಶ್ ರಾಜ್ ಇಂದು ಮತ್ತೊಂದು ವಿವಾದಿತ ಟ್ವೀಟ್ ಮಾಡಿ, ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತಿತರ ಕೇಂದ್ರ ಸಚಿವರು ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ.
ಪ್ರೀತಿಯ ಪ್ರಜೆಗಳೇ ಇದು ಭವಿಷ್ಯದ ಸಾಧ್ಯತೆ, ತನಾತನಿ ಸಂಸತ್ತು, ನಿಮಗಿದು ಒಪ್ಪಿಗೆಯೇ ಎಂದು ಪ್ರಕಾಶ್ ರಾಜ್ ತಮ್ಮ ಟ್ವೀಟರ್ ನಲ್ಲಿ ಪ್ರಶ್ನಿಸಿದ್ದಾರೆ.

ನಿನ್ನೆಯಷ್ಟೇ ಅವರು ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ತುಣುಕನ್ನು ಹಂಚಿಕೊಳ್ಳುವ ಮೂಲಕ ನೀವು ಇದನ್ನು ಒಪ್ಪುತ್ತೀರಾ ಎಂದಿದ್ದರು.

More News