MURDER: ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಚಾಕುವಿನಿಂದ ಇರಿದು ವ್ಯಕ್ತಿ ಓರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅಸ್ಲಂ ಮಖಾಂದಾರ್ (30) ಎಂಬಾತನ ಕೊಲೆಗಿಡಾದ ವ್ಯಕ್ತಿ.

ಮಂಜುನಾಥ್ ಜೋನಲ್ಲಿ ಎಂಬಾತನೆ ಹಲ್ಲೆ ನಡೆಸಿ ಅಸ್ಲಂ ಎದೆ ಬಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ರಕ್ತದ ಮಡಿಲಲ್ಲಿ ಬಿದ್ದ ಅಸ್ಲಂನನ್ನು ಕೂಡಲೇ ಆತನ ಸ್ನೇಹಿತರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿಸ್ತೆ ಫಲಿಸದೆ ಅಸ್ಲಂ ಕೊನೆಯುಸಿರೆಳೆದಿದ್ದಾನೆ.

ಮಾಹಿತಿ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಕೇಶ್ವಪೂರ್ ಠಾಣೆ ಹಾಗೂ ವಿದ್ಯಾನಗರ ಪೊಲೀಸರು ಕೊಲೆ ಮಾಡಿದ ಆರೋಪಿಯನ್ನು ಕೆಲವೇ ನಿಮಿಷದಲ್ಲಿ ಬಂಧಿಸಿದ್ದಾರೆ.

ಕಿಮ್ಸ್ ಆಸ್ಪತ್ರೆಗೆ ಎಸಿಪಿ ಬಾಳಪ್ಪ ನಂದಗನ್ವಿ, ಕೇಶ್ವಪೂರ್ ಠಾಣೆ ಪಿಐ ಸಾತೆನಲ್ಲಿ, ಪಿ ಎಸ್ ಐ , ಸದಾಶಿವ ಕನಟ್ಟಿ, ವಿದ್ಯಾನಗರ ಠಾಣೆಯ ಪಿ ಎಸ್ ಐ ಶ್ರೀಮಂತ ಅವರು ಬೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

More News