ಬೆಂಗಳೂರು : ಬೆಂಗಳೂರು ನಗರದಲ್ಲಿ ವಿಚಿತ್ರ ಮಂಕಿ ಕ್ಯಾಪ್ ಕಳ್ಳರು ಕಾಲಿಟ್ಟಿದ್ದು, ಮೆಡಿಕಲ್ ಸ್ಟೋರ್ ಗಳೇ ಇವರ ಟಾರ್ಗೆಟ್ ಕೇಂದ್ರಗಳಾಗಿವೆ. ಮೆಡಿಕಲ್ ಸಿಬ್ಬಂದಿ ಒಳಗಿದ್ದಾಗಲೇ ಶೆಟರ್ ಮುರಿದು ಒಳಗೆ ಎಂಟ್ರಿ ಕೊಡುವ ಇವರು ಮಿಂಚಿನಂತೆ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದಾರೆ.
ಮಂಕಿ ಕ್ಯಾಪ್ ಕಳ್ಳರ ಗುಂಪಿನಲ್ಲಿ ಒಬ್ಬ ರೋಡ್ ನಲ್ಲಿ ಯಾರು ಬರುತ್ತಾರೆ ಹೋಗುತ್ತಾರೆ ಎನ್ನುವುದನ್ನು ಅಬ್ಸರ್ವ್ ಮಾಡುತ್ತಿರುತ್ತಾನೆ, ಮತ್ತೊಬ್ಬ ಶೆಟರ್ ಮುರಿತಾನೆ ಇದು ಅವರ ಹೈಟೆಕ್ ಕಳ್ಳತನವಾಗಿದೆ.
ಮಂಕಿ ಕ್ಯಾಪ್ ಕಳ್ಳರು ಮಧ್ಯರಾತ್ರಿಯೇ ಟೂಲ್ಸ್ ಕಿಟ್ ಹಿಡಿದು ಕಾರ್ಯಾಚರಣೆ ಆರಂಭಿಸುತ್ತಾರೆ, ಒಂದೇ ರಾಡ್ ನಲ್ಲಿ ಶೆಟರ್ ಲಾಕ್ ಬ್ರೇಕ್ ಮಾಡಿ, ಸೆಕೆಂಡ್ ಗಳಲ್ಲಿ ಮಿಂಚಿನಂತೆ ಕಳ್ಳತನ ಮಾಡಿ ಪರಾರಿಯಾುಗತ್ತಿದ್ದಾರೆ. ಇದು ನಗರ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಸಿಸಿಟಿವಿಯಲ್ಲಿ ಈ ಮಂಕಿ ಕ್ಯಾಪ್ ಕಳ್ಳರ ಕಳ್ಳತನ ಸೆರೆಯಾಗಿದ್ದು, ಬೈಕ್ ಗಳಲ್ಲಿ ಬರುವ ಇವರು ಕ್ಷಣಾರ್ಧದಲ್ಲಿ ಶೆಟರ್ ಮುರಿದು, ಕಳ್ಳ ಬೆಕ್ಕಿನಂತೆ ಮೆಡಿಕಲ್ ಮಳಿಗೆಯಲ್ಲಿ ಕೈಚಳಕ ತೋರಿಸಿ ಪರಾರಿಯಾಗುತ್ತಿದ್ದಾರೆ.
ವಿಜಯನಗರದ ಮೆಡಿಕಲ್ ಸ್ಟೋರ್ ನಲ್ಲಿ ಕಳ್ಳರ ಕಳೆದ 31 ನೇ ತಾರೀಖಿನ ಮಧ್ಯರಾತ್ರಿ ಕೈ ಚಳಕ ತೋರಿಸಿದ್ದು, ಸಿನಿಮೀಯ ರೀತಿಯಲ್ಲಿ ಹಣ ಕದ್ದು ಎಸ್ಕೇಪ್ ಆಗಿದ್ದಾರೆ. ಅಂಗಡಿಯಲ್ಲಿ ಸಿಬ್ಬಂದಿ ಮಲಗಿದ್ದರೂ ಶೆಟರ್ ಮುರಿದಿದ್ದಾರೆ. ಒಳಗಡೆ ಅಂಗಡಿ ಸಿಬ್ಬಂದಿ ಕಂಡು ಕಳ್ಳರು ಪರಾರಿಯಾಗಿದ್ದಾರೆ.
ವಿಜಯನಗರದಲ್ಲಿ ಹೆಚ್ಚಾಗಿರೋ ಈ ಕಳ್ಳರ ಹಾವಳಿಯಾಗಿದ್ದು, 31ನ ತಾರೀಖಿನಂದು ನಡೆದ ಘಟನೆ ಸಂಬಂಧ ಗೋವಿಂದರಾಜನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.




