AMIT SHAH ON JANASHIRWAD YATRA: ಪ್ರಧಾನಿ ಮೋದಿ ಸರ್ಕಾರದಲ್ಲಿ ಆದಿವಾಸಿಗಳು ಮತ್ತು ದಲಿತರಿಗೆ ದೇಶದ ಸಂಪನ್ಮೂಲಗಳ ಮೊದಲ ಹಕ್ಕಿದೆ: ಅಮಿತ್ ಶಾ

ಮಧ್ಯಪ್ರದೇಶ : ಕಾಂಗ್ರೆಸ್ ಸದಾ ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕಾರಣದಲ್ಲಿ ಮುಳುಗಿದ್ದು, ಸಾಮಾಜಿಕ ನ್ಯಾಯವನ್ನು ನಾಶಪಡಿಸಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ.
ಮಧ್ಯಪ್ರದೇಶದ ಮಂಡ್ಲಾದಲ್ಲಿ ಬಿಜೆಪಿಯ ಜನಾಶೀರ್ವಾದ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು, ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಅಲ್ಪಸಂಖ್ಯಾತರಿಗೆ ಇದೆ ಎಂದು ಹೇಳಿದ್ದರು. 2014ರಲ್ಲಿ ಮೋದಿಯವರು ಪ್ರಧಾನಿಯಾದಾಗ ತಮ್ಮ ಸಿದ್ಧಾಂತವನ್ನು ಬದಲಾಯಿಸಿ ದಲಿತರು, ಆದಿವಾಸಿಗಳು, ಬಡವರು ಮತ್ತು ವಂಚಿತರಿಗೆ ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಎಂದರು.
ಆದಿವಾಸಿಗಳು, ಹಿಂದುಳಿದವರು, ದಲಿತರು ಮತ್ತು ಬಡವರ ನೆರವಿಗೆ ಮೋದಿ ಸರಕಾರ ಸದಾ ಕೆಲಸ ಮಾಡುತ್ತದೆ ಎಂಬುದು ಕಳೆದ 9 ವರ್ಷಗಳಲ್ಲಿ ಸಾಬೀತಾಗಿದೆ. ಉದಾಹರಣೆಗೆ, ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು. ಮೋದಿಯವರ ದೂರದೃಷ್ಟಿ ಮತ್ತು ಅಮಿತ್ ಶಾ ಅವರ ದಕ್ಷ ನಿರ್ವಹಣೆಯ ಅಡಿಯಲ್ಲಿ, ಬಿಜೆಪಿ ಸರ್ಕಾರವು ಯಾವಾಗಲೂ ಬುಡಕಟ್ಟು ಸಮಾಜದ ಕಲ್ಯಾಣ ಮಾಡಿ ಗೌರವವನ್ನು ಹೆಚ್ಚಿಸಿದೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಬಿಜೆಪಿ ಸರ್ಕಾರದ 51 ಯೋಜನೆಗಳನ್ನು ನಿಲ್ಲಿಸಿದ್ದನ್ನು ಮಧ್ಯಪ್ರದೇಶದ ಜನರು ನೋಡಿದ್ದಾರೆ. ಆದರೆ ಬಿಜೆಪಿ ಸರ್ಕಾರವು ರಚನೆಯಾದಾಗಿನಿಂದ ರಾಜ್ಯವು ಅಭಿವೃದ್ಧಿಯ ಪಥದ ಮೇಲೆ ಸಾಗುತ್ತಾ ಮುಂಚೂಣಿಯಲ್ಲಿದೆ. ಕಳೆದ 9 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಡಬಲ್ ಇಂಜಿನ್ ಬಿಜೆಪಿ ಸರ್ಕಾರವು ಮಧ್ಯಪ್ರದೇಶವನ್ನು ದೇಶದ ನಂಬರ್ ಒನ್ ರಾಜ್ಯವನ್ನಾಗಿ ಮಾಡುವತ್ತ ಸಾಗುತ್ತಿದೆ.
ಮೋದಿಯವರ ನಾಯಕತ್ವ ಮತ್ತು ಶಾ ಅವರ ಅವಿರತ ಪ್ರಯತ್ನದಿಂದಾಗಿ PESA ಕಾನೂನನ್ನು ಜಾರಿಗೊಳಿಸುವ ಪ್ರಯತ್ನ ನಡೆಸಿದ ಮೊದಲ ರಾಜ್ಯ ಮಧ್ಯಪ್ರದೇಶವಾಗಿದೆ. ಕಾಂಗ್ರೆಸ್ ತಮ್ಮ ಆಡಳಿತದ ಅವಧಿಯಲ್ಲಿ, ಬುಡಕಟ್ಟು ಸಮಾಜಕ್ಕಾಗಿ ನೀರು, ಅರಣ್ಯ ಮತ್ತು ಭೂಮಿಯನ್ನು ರಕ್ಷಿಸುವ ಘೋಷಣೆಗಳಲ್ಲಿ ತೊಡಗಿತ್ತು, ಆದರೆ ಅದು ಎಂದಿಗೂ ಕಾರ್ಯರೂಪಕ್ಕೆ ಬರಲಿಲ್ಲ.
‘ಜನಾಶೀರ್ವಾದ ಯಾತ್ರೆ’ ಎಂಬುದು ಎಲ್ಲರ ಆಶೀರ್ವಾದ ಪಡೆಯುವ ಯಾತ್ರೆಯಾಗಿದೆ. ಇಂತಹ ಐದು ಯಾತ್ರೆಗಳು ಮಧ್ಯ ಪ್ರದೇಶದ 210 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಭೋಪಾಲ್ ತಲುಪಲಿವೆ. ಇದೇ ವೇಳೆ, ಕಾಂಗ್ರೆಸ್‌ಅನ್ನು ಗುರಿಯಾಗಿಸಿಕೊಂಡು ಟೀಕಿಸಿದ ಅಮಿತ್ ಶಾ, ಕಮಲ್ ನಾಥ್ ಅವರಿಗೆ ‘ಕರಪ್ಷನ್ ನಾಥ್ ’ ಎಂಬ ಬಿರುದು ನೀಡಿದರೆ, ದಿಗ್ವಿಜಯ್ ಸಿಂಗ್ ಅವರನ್ನು ‘ಮಿ. ಬಂಟಧರ್’ ಎಂದು ಟೀಕಿಸಿದರು.

More News