ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಪ್ರಮುಖ ರಾಜಕೀಯ ಬೆಳವಣಿಗೆ ಆಗೋ ಸಾಧ್ಯತೆ ದಟ್ಟವಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗೋದು ಪಕ್ಕಾ ಎಂಬ ಲೆಕ್ಕಾಚಾರ ಶುರುವಾಗಿದೆ ಈ ಕುರಿತು ನಗರದಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಾವು ಹಿಂದೆ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇ ದೊಡ್ಡ ತಪ್ಪು, ದೊಡ್ಡ ಸಮಸ್ಯೆ ಆಗಿತ್ತು. ಹೀಗಾಗಿ ನಾವು ಇವತ್ತು ಮುಕ್ತವಾಗಿದ್ದೇವೆ. ನಮ್ಮ ಸ್ಟ್ರಾಟರ್ಜಿ ನಾವು ಮಾಡ್ತೇವೆ ಎಂದು ತಿಳಿಸಿದರು.
ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರದ ಕುರಿತು ಮಾತನಾಡಿದ
ಸಚಿವ ದಿನೇಶ್ ಗುಂಡೂರಾವ್, ನಾವು ಹಿಂದೆ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇ ದೊಡ್ಡ ತಪ್ಪು, ದೊಡ್ಡ ಸಮಸ್ಯೆ ಆಗಿತ್ತು. ಹೀಗಾಗಿ ನಾವು ಇವತ್ತು ಮುಕ್ತವಾಗಿದ್ದೇವೆ. ನಮ್ಮ ಸ್ಟ್ರಾಟರ್ಜಿ ನಾವು ಮಾಡ್ತೇವೆ. ಅವರು ತಮ್ಮ ಪ್ರಯತ್ನ ಮಾಡಲಿ, ಆದರೆ ಜನ ನಮ್ಮ ಜೊತೆಗೆ ಇದ್ದಾರೆ. ಆಡಳಿತ ಕೂಡ ಸುಧಾರಣೆ ಮಾಡಿ ಪರಿಣಾಮಕಾರಿ ಕೆಲಸ ನಾವು ಮಾಡ್ತಾ ಇದ್ದೇವೆ.
ರಾಷ್ಟ್ರೀಯ ಚುನಾವಣೆ ಬಂದರೆ ಬೇರೆ ತರಹ ಓಟು ಮಾಡ್ತಾರೆ ಅನ್ನೋದು ಈಗ ಇಲ್ಲ. ಇವರು ಬರೀ ಭಾಷಣ ಮಾಡ್ತಾರೆ ಅನ್ನೋದು ಜನರಿಗೂ ಅರ್ಥವಾಗಿದೆ
ಎಂದು ಕುಟುಕಿದರು.
ರಾಷ್ಟ್ರ ಮಟ್ಟದಲ್ಲಿ ಏನೇನೋ ವಿಷಯಾಂತರ ಮಾಡುವ ಪ್ರಯತ್ನ ಮಾಡ್ತಿದ್ದಾರೆ. ಸನಾತನ ಧರ್ಮದ ಬಗ್ಗೆ ತಕ್ಷಣಕ್ಕೆ ರಿಯಾಕ್ಟ್ ಮಾಡ್ತಾರೆ. ಯಾವುದು ಅಗತ್ಯವಿದೆ ಎನ್ನುವ ವಿಷಯ ಬಗ್ಗೆ ಅವರು ಬಾಯೇ ಬಿಡೋದಿಲ್ಲ. ರಾಜ್ಯದಲ್ಲಿ ಸೋಲಿನ ಬಳಿಕ ಬಿಜೆಪಿ ದಿಗ್ಭ್ರಮೆಯಲ್ಲಿದ್ದಾರೆ. ಯಾರ ಮಾತು ಕೇಳಬೇಕು ಅನ್ನೋದು ಬಿಜೆಪಿ ನಾಯಕರಿಗೇ ಗೊತ್ತಾಗ್ತಾ ಇಲ್ಲ. ಬಿಜೆಪಿ ಯಲ್ಲಿ ಜೆಡಿಎಸ್ ನಲ್ಲಿ ಎಷ್ಟು ಜನ ಉಳಿತಾರೋ ಗೊತ್ತಿಲ್ಲ ಎಂದು ಹೇಳುವ ಮೂಲಕ ಆಪರೇಷನ್ ಹಸ್ತದ ಸೂಚನೆ ನೀಡಿದರು.
ಮುಂದುವರೆದು ಮಾತನಾಡಿದ ಅವರು, ಮೈತ್ರಿ ಬಗ್ಗೆ ಅಧಿಕೃತ ವಾಗಿ ಬಿಜೆಪಿ ಅಧ್ಯಕ್ಷ ಕಟೀಲ್, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಹೇಳಿಕೆ ನೀಡಿಲ್ಲ. ರಾಜಕೀಯವಾಗಿ ಅವರವರ ನಿಲುವುಗಳು ಅವರಿಗೆ ಬಿಟ್ಟಿದ್ದು. ನಮ್ಮದೇನೂ ತಕರಾರಿಲ್ಲ. ಕಾಂಗ್ರೆಸ್ ಬಹಳ ಬಲಿಷ್ಟವಾಗಿದೆ ಅನ್ನೋದು ಇದರಲಿ ಎದ್ದು ಕಾಣುತ್ತಿದೆ. ನಮ್ಮ ಕಾರ್ಯಕ್ರಮ ಅನುಷ್ಟಾನದ ಆದಾರದ ಮೇಲೆ ನಾವು ಚುನಾವಣೆಗೆ ಹೋಗ್ತೇವೆ ಎಂದು ತಿಳಿಸಿದರು.

ಮುಂದೆ ಏನೇನು ತೀರ್ಮಾನಗಳಾಗುತ್ತದೆಯೋ ಗೊತ್ತಿಲ್ಲ.
20 ಸೀಟುಗಿಂತ ನಾವು ಹೆಚ್ಚು ಗೆದ್ದೇ ಗೆಲ್ತೇವೆ. ಜೆಡಿಎಸ್ ಹಿಂದೆಯೂ ಕೂಡ ಬಿಜೆಪಿ ಜೊತೆಗೆ ಸರ್ಕಾರ ಮಾಡಿದೆ. ಜಾತ್ಯಾತೀತ ಸಿದ್ದಾಂತಕ್ಕೆ ಕಟಿ ಬದ್ದರಾಗಿಯೇನೂ ಜೆಡಿಎಸ್ ಇಲ್ಲ. ಅನುಕೂಲ ಸಿಂಧೂ ರಾಜಕಾರಣ ಮಾಡುವುದಕ್ಕೆ ಹೊರಟಿದ್ದಾರೆ. ತತ್ವ ರಹಿತ ರಾಜಕಾರಣ ಜೆಡಿಎಸ್ ನದ್ದು.
ಬಿಜೆಪಿಯವರ ಫಲಿತಾಂಶ ಕೂಡ ಮೋದಿ ಠಿಕಾಣಿ ಹೂಡಿದರೂ ಶೂನ್ಯ ಆಯ್ತು.. ಪಾರ್ಲಿಮೆಂಟ್ ಸದಸ್ಯರೇ ಚುನಾವಣೆಗೆ ಈ ಬಾರಿ ನಿಲ್ಲಲು ಹಿಂದೇಟು ಹಾಕ್ತಿದ್ದಾರೆ
ಅವರನ್ನು ಉಳಿಸಿಕೊಳ್ಳಲು ಯಡಿಯೂರಪ್ಪ ರೇವಣ್ಣ ಹೇಳಿಕೆ ಕೊಡ್ತಿರಬಹುದು. ಬಿಜೆಪಿ ಜೆಡಿಎಸ್ ನವರು ದಿಕ್ಕಾಪಾಲಾಗಿದ್ದಾರೆ. ಮೈತ್ರಿಯಿಂದ ನಮಗೆ ಸವಾಲೇನೂ ಇಲ್ಲ. 20 ಕ್ಕೂ ಹೆಚ್ಚು ಸೀಟು ನಾವು ಗೆಲ್ಲುವುದಕ್ಕೆ ಕಾಂಗ್ರೆಸ್ ಗೆ ಹೆಚ್ಚು ಅನುಕೂಲ ಆಗುವ ಸಾಧ್ಯತೆಯೇ ಇದೆ ಎಂದು ಹೇಳಿದರು.




