ಬೆಂಗಳೂರು : ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಮೇಲೆ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಒಂದು ಲಕ್ಷಕ್ಕಿಂತ ಅಧಿಕ ಮೊಬೈಲ್ ಗಳು ಮಾಯವಾಗಿವೆ ಎಂದು ತಿಳಿದುಬಂದಿದೆ.
ಆಗಸ್ಟ್ ತಿಂಗಳು ಮೊಬೈಲ್ ಕಳ್ಳರಿಗೆ ಸರ್ಕಾರದ ಶಕ್ತಿ ಯೋಜನೆ ಸುಗ್ಗಿಯಾಗಿದ್ದು, ಮಹಿಳೆಯರು ಸೀಟ್ ಹಿಡಿಯೋದ್ದರಲ್ಲಿ ತಲ್ಲೀನರಾಗಿರುವ ಸಂದರ್ಭದಲ್ಲಿ ಅವರ ಮೊಬೈಲ್ ಎಗರಿಸೋದ್ದರಲ್ಲಿ ಕಳ್ಳರು ಬಿಝಿಯಾಗಿದ್ದಾರೆ.

ಮಹಿಳೆಯರು ಮಾತ್ರವಲ್ಲ ಪುರುಷರ ಮೊಬೈಲ್ ಕೂಡಾ ಕಳವವಾಗಿದ್ದು, ಮಹಿಳೆಯರು ಸೀಟ್ ಗಾಗಿ ನಡೆಸೋ ನೂಕು ನುಗ್ಗಲೇ ಕಳ್ಳರಿಗೆ ವರದಾನವಾಗಿದೆ. ಆಗಸ್ಟ್ ಒಂದು ತಿಂಗಳಲ್ಲೇ ಒಂದು ಲಕ್ಷದ ಹದಿಮೂರು ಸಾವಿರದ ಎಂಟುನೂರ ಹನ್ನೊಂದು ಮೊಬೈಲ್ ಕಳವುವಾಗಿದೆ.

CEIR ನೀಡಿರೋ ವರದಿಯಲ್ಲಿ ಇದು ಬಹಿರಂಗವಾಗಿದ್ದು, ಕೇಂದ್ರದಿಂದ ಬಂದಿರೋ ವರದಿಯಲ್ಲಿ ಬಹಿರಂಗವಾಗಿದೆ. ಸಿಟಿಜನ್ ಸೆಂಟ್ರಿಕ್ ಪೋರ್ಟಲ್ ಡಿಪಾರ್ಟ್ಮೆಂಟ್ ಆಫ್ ಟೆಲಿ ಕಮ್ಯೂನಿಕೇಷನ್ ವರದಿ ಬಹಿರಂಗಪಡಿಸಿದೆ.
ಉಳಿದ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲೇ ಅತೀ ಹೆಚ್ಚು ಕಳವುವಾಗಿದ್ದು, ಮೊಬೈಲ್ ಕಳುವಿನ ಬಗ್ಗೆ ಪೊಲೀಸರಿಗೆ ಸಾಕಷ್ಟು ದೂರುಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ, ಕಳುವಾದ 1, 13, 811 ಮೋಬೈಲ್ ಗಳಲ್ಲಿ ಕಳೆದ ತಿಂಗಳು 18,090 ಮೊಬೈಲ್ ಗಳನ್ನು ಪೊಲೀಸರು ಟ್ರೇಸ್ ಮಾಡಿದ್ದಾರೆ.




