Abhishek Nama Is Criticised Vijay Deverakonda: ದೇವರಕೊಂಡರಿಂದ ನಂಗೆ ನಷ್ಟ ಆಗಿದೆ. ತುಂಬಿ ಕೊಡ್ತಾರಾ..?: ನಿರ್ಮಾಪಕ ಅಭಿಷೇಕ್ ನಾಮಾ ಪ್ರಶ್ನೆ

ಖುಷಿ ಗೆಲುವಿನಲ್ಲಿ ತೇಲುತ್ತಿರುವ ಲವರ್ ಬಾಯ್ ವಿಜಯ್ ದೇವರಕೊಂಡ, ತಮ್ಮ ಗೆಲುವಿನ ಸಂತಸವನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಮುಂದಾಗಿದ್ದಾರೆ. ಒಂದು ಕೋಟಿ‌ ರೂಪಾಯಿಯನ್ನ ಅಗತ್ಯ ಕುಟುಂಬಕ್ಕೆ ಒಂದೊಂದು ಲಕ್ಷ ಎಂಬಂತೆ ತಲುಪಿಸಲು ನಿರ್ಧರಿಸಿದ ಬೆನ್ನಲ್ಲೇ ವರ್ಲ್ಡ್ ಫೇಮಸ್ ಲವರ್ ಚಿತ್ರದ ವಿತರಕ ಮತ್ತು ನಿರ್ಮಾಪಕ ಅಭಿಷೇಕ್ ನಾಮಾ ತಕರಾರು ತೆಗೆದಿದ್ದಾರೆ.

ವಿಜಯ್ ನಟನೆಯ ವರ್ಲ್ಡ್ ಫೇಮಸ್ ಲವರ್ ಚಿತ್ರದಿಂದ ನನಗೆ ಬರೋಬ್ಬರಿ 8 ಕೋಟಿ ರೂಪಾಯಿ ನಷ್ಟವಾಗಿದೆ.
ಈ ನಷ್ಟವನ್ನು ವಿಜಯ್‌ ದೇವರಕೊಂಡ ಭರಿಸಬಹುದೇ ಎಂದು ನಿರ್ಮಾಪಕ ಅಭಿಷೇಕ್ ನಾಮಾ ಪ್ರಶ್ನೆ ಹಾಕಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಜಯ್ ದೇವರಕೊಂಡ ತಂದೆ ಗೋವರ್ಧನ ರಾವ್, ವಿಜಯ್ ವರ್ಲ್ಡ್ ಫೇಮಸ್ ಲವರ್ ಸಿನಿಮಾಗೆ ಮಾತನಾಡಿದ್ದಕ್ಕಿಂತ ಕಡಿಮೆ ಸಂಭಾವನೆ ಪಡೆದಿದ್ದಾರೆ. ವರ್ಲ್ಡ್ ಫೇಮಸ್ ಲವರ್ ಮತ್ತು ಖುಶಿ ಚಿತ್ರಗಳು ವಿಭಿನ್ನ ಕಥಾ ಹಂದರದೊಂದಿಗೆ ತೆರೆಗೆ ಬಂದ ಚಿತ್ರ. ಎರಡೂ ಕೂಡ ವಿಭಿನ್ನ ಸಿನಿಮಾ. ಹಾಗಾಗಿಯೇ ಗಲ್ಲಾಪೆಟ್ಟಿಗೆಯಲ್ಲಿ ಹಣ ಮಾಡಿದೆ. ಇದೆನ್ನೆಲ್ಲಾ ಪ್ರಶ್ನೆ ಹಾಕ್ಬಾರ್ದು ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ದೇವರಕೊಂಡ ಇನ್ಮೇಲಿಂದ ನಿರ್ಮಾಪಕ ಅಭಿಷೇಕ್ ರೊಂದಿಗೆ ಕೆಲಸ ಮಾಡದಿರಲು ನಿರ್ಧರಿಸಿದ್ದಾರೆ ಎಂಬ ಮಾಹಿತಿಯನ್ನ ತಿಳಿಸಿದ್ದಾರೆ. ಮಗ ವಿಜಯ್ ಮುಂದೆ ದಿಲ್ ರಾಜು, ಮೈತ್ರಿ ಮೂವಿ ಮೇಕರ್ಸ್ ಮತ್ತು ಗೀತಾ ಆರ್ಟ್ಸ್‌ನಂತಹ ಯಶಸ್ವಿ ತೆಲುಗು ನಿರ್ಮಾಪಕರ ಜೊತೆ ಕೆಲಸ ಮಾಡುತ್ತಾರೆ. ಆದರೆ ಕೆಲ ಕಾರಣಗಳಿಂದ ವಿಜಯ್ ವೃತ್ತಿಜೀವನದಲ್ಲಿ ಮತ್ತೆ ಅಭಿಷೇಕ್ ನಾಮಾ ಜೊತೆಗೆ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

More News