BJP MLA Yatnal Taunt: ಡಿಕೆ ಶಿವಕುಮಾರ್, ಶಿವಾನಂದ ಪಾಟೀಲ್ ಆತ್ಮಹತ್ಯೆ ಮಾಡ್ಕೊಳ್ಳಿ. ಪರಿಹಾರ ‌ಕೊಡ್ತೀನಿ: ಯತ್ನಾಳ್

ಕೊಪ್ಪಳ: ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಶಿವಾನಂದ ಪಾಟೀಲ್ ಆತ್ಮಹತ್ಯೆ ಮಾಡ್ಕೊಳ್ಳಿ. ಡಿಕೆ ಶಿವಕುಮಾರ್ ಗೆ 25 ಕೋಟಿ, ಶಿವಾನಂದ ಪಾಟೀಲ್ ಗೆ 5 ಕೋಟಿ ರೂ. ಕೊಡ್ತಿನಿ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿವಾದ್ಮಾಕ ಹೇಳಿಕೆ ನೀಡಿದ್ದಾರೆ.

ರೈತರ ಆತ್ಮಹತ್ಯೆ ಬಗ್ಗೆ ಡಿಕೆ ಶಿವಕುಮಾರ್ ಮತ್ತು ಶಿವಾನಂದ ಪಾಟೀಲ್ ನಿರ್ಲಕ್ಷ್ಯದ ಹೇಳಿಕೆ ವಿಚಾರದ ಕುರಿತು ಕೊಪ್ಪಳದಲ್ಲಿ ಮಾತನಾಡಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಡಿಕೆ ಶಿವಕುಮಾರ್ ಮತ್ತು ಶಿವಾನಂದ ಪಾಟೀಲ್ ಅವ್ರು ಆತ್ಮಹತ್ಯೆ ಮಾಡಿಕೊಳ್ಳಲಿ. ಡಿಕೆ ಶಿವಕುಮಾರ್ ಗೆ 25 ಕೋಟಿ, ಶಿವಾನಂದ ಪಾಟೀಲ್ ಗೆ 5 ಕೋಟಿ ರೂ. ಕೊಡ್ತಿನಿ ಎಂದು ಗರಂ ಆದರು.

ರೈತರು ಯಾಕೆ ಆತ್ಮಹತ್ಯೆ ಮಾಡಿಕೊಳ್ತಾರೆ ಎನ್ನುವ ಕಾಮನ್ ಸೆನ್ಸ್ ಇಲ್ವಾ ಇವರಿಗೆ..? ಯಾವುದೇ ರೈತ ಸುಖಾ ಸುಮ್ಮನೆ ಆತ್ಮಹತ್ಯೆ ಮಾಡಿಕೊಳ್ತಾರಾ..? ಜೀವನದಲ್ಲಿ ಜಿಗುಪ್ಸೆಗೊಂಡು ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ.
ಡಿಸಿಎಂ ಡಿ.ಕೆ‌ ಶಿವಕುಮಾರ್ ದುರಹಂಕಾರದಿಂದ ಮಾತನಾಡುತ್ತಿದ್ದಾರೆ. 135 ಸೀಟು ಬಂದಿವೆ ಎನ್ನುವ ದುರಹಂಕಾರದಲ್ಲಿ ಇದ್ದಾರೆ. ಬಿಜೆಪಿ ಅಧಿಕಾರದಲ್ಲಿ ಇರಬೇಕಿತ್ತು‌ ಎನ್ನುವ ಭಾವನೆ ಜನರಲ್ಲಿ ಬರ್ತಿದೆ ಎಂದರು.

More News