ಸಾರಿಗೆ ಮುಷ್ಕರ ಹಿನ್ನಲೆ ಅಮಾಯಕರ ಮೇಲೆ ದಾಳಿ ಮಾಡಿದ ನಾಲ್ಕು ಜನರನ್ನ ಬಂಧನ ಮಾಡಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.
ಬೆಂಗಳೂರು ಬಂದ್ ಕುರಿತು ನಗರದಲ್ಲಿ ಮಾತನಾಡಿದ ಅವರು, ನಿನ್ನೆ ರಾತ್ರಿ ಟೌನ್ ಹಾಲ್ ಸರ್ಕಲ್ ನಲ್ಲಿ ಆಟೋ ಮೇಲೆ ದಾಳಿ ಮಾಡಿದವರನ್ನ ಬಂಧಿಸಲಾಗಿದೆ.
ಬೇರೆ ಬೇರೆ ಹಂತದಲ್ಲಿ ಪೊಲೀಸರು ಕ್ರಮ ತೆಗೆದುಕೊಳ್ತಾರೆ. ಖಾಸಗಿ ಸಾರಿಗೆ ಮಾಲೀಕರು ಬೆಂಗಳೂರು ಬಂದ್ ಮಾಡಬೇಕು ಎಂಬ ಮಾಹಿತಿ ಬಂದ ಮೇಲೆ ಸ್ವಾಭಾವಿಕ ವಾಗಿ ಪೊಲೀಸ್ ಇಲಾಖೆ ಅಲರ್ಟ್ ಆಗಲೇ ಬೇಕು. ಅಹಿತಕರ ಘಟನೆಗಳು ಯಾವುದೂ ಆಗಬಾರದು. ಕಾನೂನಿನ ವಿರುದ್ಧ ಸಾರ್ವಜನಿಕ ಆಸ್ತಿ, ಸರ್ಕಾರಿ ಆಸ್ತಿಗಳಿಗೆ ಹಾನಿಯಾಗದಂತೆ ಕ್ರಮ ತೆಗೆದುಕೊಳ್ಳುವುದು ಸ್ವಾಭಾವಿಕ ಮಾಡಲಾಗುತ್ತೆ. ನಿನ್ನೆ ಇವತ್ತು ಕ್ರಮ ತೆಗೆದುಕೊಳ್ಳಬೇಕು ಎಂಬ ಸೂಚನೆ ಕೊಟ್ಟಿದ್ದೆ. ಇಲಾಖಾ ಎಸ್ ಪಿಗಳು ಅಲರ್ಟ್ ಆಗಿದ್ದಾರೆ. ಕ್ರಮ ತೆಗೆದುಕೊಂಡಿದ್ದಾರೆ. ಎಲ್ಲಿಯೂ ದೊಡ್ಡ ಗಲಾಟೆ ಆಗಿಲ್ಲ. ಒಂದೆರಡು ಕಡೆ ಸಣ್ಣ ಪುಟ್ಟ ಬಂದ್ ಮಾಡುವ ಬಿಡುವ ವಿಚಾರದಲ್ಲಿ ಗಲಾಟೆಗಳಾಗಿವೆ. ಅವರಲ್ಲಿಯೇ ಎರಡು ಗುಂಪುಗಳಾಗಿ ಗಲಾಟೆ ಆಗಿವೆ ಎಂದು ತಿಳಿಸಿದರು.
ನಿರಂತರವಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡ್ತಿದ್ದಾರೆ. ದೊಡ್ಡ ಗಲಾಟೆಗಳಾದ ಸಂದರ್ಭದಲ್ಲಿ ನನಗೆ ತಿಳಿಸುತ್ತಾರೆ ಸಣ್ಣ ಪುಟ್ಟ ಗಲಾಟೆ ಆದ್ರೆ ಪೊಲೀಸ್ ಅಧಿಕಾರಿಗಳೇ ಹ್ಯಾಂಡಲ್ ಮಾಡ್ತಾರೆ ಎಂದರು.
ಇದೇ ವೇಳೆ ಲೋಕಾಸಭೆಗೆ ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರದ ಕುರಿತು ಮಾತನಾಡಿದ ಅವರು, ಅವರು ಮೈತ್ರಿ ಮಾಡಿಕೊಳ್ತೀನಿ ಎಂದು ಯಾಕೆ ಹೋಗ್ತಿದ್ದಾರೆ ಅಂದ್ರೆ ಅವರು ವೀಕ್ ಆಗಿದ್ದಾರೆ. ಅವರು ಸ್ಟ್ರಾಂಗ್ ಆಗಿದ್ದಾಗ ಮೈತ್ರಿ ವಿಚಾರ ಬರಲ್ಲ. ಬಿಜೆಪಿಯವರು ಕಳೆದ ಬಾರಿ ಮೈತ್ರಿ ಬಗ್ಗೆ ಮಾತಾಡಿಲ್ಲ. ಅವರೇ ಚುನಾವಣೆಗೆ ಹೋದ್ರು 25 ಕ್ಷೇತ್ರ ಗೆದ್ರು. ಈ ಬಾರಿ ಬಿಜೆಪಿಗೆ ಹೆಚ್ಚು ಕಾನ್ಪಡೆನ್ಸ್ ಇಲ್ಲ. ಅದಕ್ಕೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಹೆಚ್ಚು ಸೀಟು ಗೆಲ್ಲಬೇಕು ಎಂದು ಹೋಗ್ತಿದ್ದಾರೆ. ಸೀಟ್ ಶೇರಿಂಗ್ ಆಗಿಲ್ಲ, ಫೈನಲ್ ಆಗಿಲ್ಲ ಘೋಷಣೆ ಮಾಡ್ಲಿ. ಅಲ್ಲಿಯವರೆಗೆ ನಾವು ವಾಚ್ ಮಾಡ್ತೀವಿ. ಕಾಂಗ್ರೆಸ್ ಗೆ ಫಿಕ್ಸ್ ವ್ಯೂಟರ್ಸ್ ಇದ್ದಾರೆ. ಕಾಂಗ್ರೆಸ್ ಗೆ ದಲಿತರು, ಮುಸ್ಲಿಮರು, ಹಿಂದುಳಿದವರು ಮತದಾರರು ಇದ್ದಾರೆ. ಅದನ್ನು ನಾವು ಮೈಂಟೇನ್ ಮಾಡ್ತೀವಿ. ಆತಂಕ ಪಡುವ ಅವಶ್ಯಕತೆ ಇಲ್ಲ
ಎಂದರು.

ಹಿಂದುಳಿದವರನ್ನ ಬಳಸಿಕೊಂಡು ಗುರುತಿಸಲ್ಲವೆಂಬ ಬಿ.ಕೆ.ಹರಿಪ್ರಸಾದ್ ಆರೋಪದ ವಿಚಾರದ ಕುರಿತು ಮಾತನಾಡಿದ ಪರಮೇಶ್ವರ್ ಅವರು, ಹೈಕಮಾಂಡ್ ಸಾಂದರ್ಭಿಕ ವಾಗಿ ತೀರ್ಮಾನ ಮಾಡ್ತಾರೆ. ಹರಿಪ್ರಸಾದ್ ಅವರ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದ್ರೆ ಈ ಬಾರಿ ಹೈಕಮಾಂಡ್ ಎಲ್ಲವೂ ಗಮನದಲ್ಲಿ ಇಟ್ಟುಕೊಂಡು ಮಾಡಿದ್ದಾರೆ. ಸಿದ್ದರಾಮಯ್ಯ ಹಿಂದುಳಿದ ವರ್ಗಕ್ಕೆ ಸೇರಿದವರು. ಲಿಂಗಾಯತ, ಒಕ್ಕಲಿಗರಿಗೂ ಸಹಾಯ ಮಾಡಿದ್ದಾರೆ. ಡಿಕೆ ಶಿವಕುಮಾರ್ ಅಧ್ಯಕ್ಷರು ಇದ್ದಾರೆ. ನಾವು ಒಟ್ಟಿಗೆ ತೆಗೆದುಕೊಂಡು ಹೋಗೋದೆ ಕಾಂಗ್ರೆಸ್ ನ ಶಕ್ತಿ ಅಲ್ವ. ಹಾಗಾಗಿ ಪರಿಸ್ಥಿತಿಯಲ್ಲಿ ಯಾವುದೇ ಆತಂಕ ಇಲ್ಲ. ದಲಿತ ಸಿಎಂ ಚರ್ಚೆನೇ ಬೇಡ
ಈಗ ಸಿಎಂ ಸಿದ್ದರಾಮಯ್ಯ ಇದ್ದಾರೆ ಅಲ್ವ.? ಅದರ ಬಗ್ಗೆ ಚರ್ಚೆ ಮಾಡಿ ಏನು ಪ್ರಯೋಜನಾ ಎಂದು ಹೇಳಿದರು.




