ಬೆಂಗಳೂರು : ಸಚಿವ ಸುಧಾಕರ್ ವಿರುದ್ಧ FIR ದಾಖಲಾಗಿರುವ ಹಿನ್ನೆಲೆಯಲ್ಲಿ ಅವರನ್ನು ಕರೆದು ಮಾಹಿತಿ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ನಿಂದನೆ ಕೇಸ್ ದಾಖಲಾಗಿದ್ಯಾ..? ಎಂದು ಮರುಪ್ರಶ್ನಿಸಿದರಲ್ಲದೆ, ಅವರನ್ನ ಕರೆದು ಮಾತನಾಡುತ್ತೇನೆ. ಅವರ ಮೇಲೆ ಕೇಸ್ ರಿಜಿಸ್ಟರ್ ಆಗಿದೆ. ನಾನು ಪತ್ರಿಕೆಯಲ್ಲಿ ನೋಡಿದ್ದೇನೆ. ಏನಾಗಿದೆ ಎಂದು ಕರೆದು ಮಾತನಾಡುತ್ತೇನೆ ಎಂದು ತಿಳಿಸಿದರು.

ಬಿಜೆಪಿಯವರ ಕುತಂತ್ರ- ಇದೊಂದು ಸಿವಿಲ್ ಡಿಸ್ಪೂಟ್
ಸಚಿವ ಸುಧಾಕರ್ ವಿರುದ್ಧ ದೂರು ದಾಖಲಾಗಿರುವ ಸಂಬಂಧ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್, ಬಿಜೆಪಿಯವರು ಏನು ಬೇಕಾದರೂ ಕುತಂತ್ರ ಮಾಡಲಿ, ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದಿವೆ, ಇದೊಂದು ಸಿವಿಲ್ ಡಿಸ್ಪೂಟ್ ಎಂದರು.
ಅವರ ವಿರುದ್ಧ ದೂರು ಕೊಟ್ಟಿದ್ದಾರೆ, ಅದೊಂದು ಸುಳ್ಳು ಕೇಸ್ ಎಂದೂ ಗೊತ್ತಾಗಿದೆ, ಸುಧಾಕರ್ ರಾಜೀನಾಮೆ ನೀಡ್ತಾರೆ ಎಂದು ಬಿಜೆಪಿಯವರು ಕನಸು ಕಾಣೋದು ಬೇಡ, ಆಪೀಸರ್ಸ್ ಹೇಳಿದಾರೆ, ಚೆಕ್ ಮಾಡಿದೀನಿ, ಡಾಕುಮೆಂಟ್ಸ್ ತರಿಸಿರುವೆ ಎಂದು ಸಮಜಾಯಿಸಿ ನೀಡಿದರು.
ಸಚಿವ ಸುಧಾಕರ್ ವಿರುದ್ಧ ಸುಳ್ಳು ಕೇಸ್ ದಾಖಲಾಗಿದೆ ಎಂದು ಡಿಸಿಎಂ ಪ್ರಬಲವಾಗಿ ಸಮರ್ಥನೆ ಮಾಡಿಕೊಂಡರು.

ವರದಿ ಬಂದ ಬಳಿಕ ಮುಂದಿನ ಕ್ರಮ – ಗೃಹ ಸಚಿವ
ಡಿ ಸುಧಾಕರ್ ವಿರುದ್ಧ ಎಫ್ ಐ ಆರ್ ದಾಖಲು ವಿಚಾರ ಗೃಹ ಸಚಿವ ಪರಮೇಶ್ವರ್ ಮಾತನಾಡಿ, ಪ್ರಕರಣದ ಬಗ್ಗೆ ವರದಿ ಕೇಳಿದ್ದೇನೆ, ಅಧಿಕಾರಿಗಳಿಗೆ ಬ್ರಿಫಿಂಗ್ ಕೊಡಲು ಹೇಳಿದ್ದೇನೆ, ವರದಿ ಬಂದ ಬಳಿಕ ಮುಂದಿನ ಕ್ರಮದ ಚರ್ಚೆ ಮಾಡ್ತೀವಿ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.

ವಿಷಯ ಏನು ಅಂತ ರಿಪೋರ್ಟ್ ತಗೋಬೇಕು, ರಿಪೋರ್ಟ್ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಎಂದು ತಿಳಿಸಿದ ಅವರು, ಬಿಜೆಪಿ ಅವರಿಂದ ಸಚಿವರ ವಜಾಕ್ಕೆ ಆಗ್ರಹ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರು ಹೇಳಲಿ, ಅವರು ಹೇಳೋದನ್ನ ಬೇಡ ಅನ್ನೋಕೆ ಆಗೊಲ್ಲ ಎಂದರು.
ವಿಪಕ್ಷಗಳು ಕೇಳೋದೇ ಅವರ ಸ್ವಾಭಾವ ಅವರು ಕೇಳಲಿ, ಕೇಸಿನ ಬಗ್ಗೆ ಹೆಚ್ಚಿನ ಮಾಹಿತಿ, ವರದಿ ಕೇಳಿದ್ದೇನೆ. ವರದಿ ಬಂದ ಬಳಿಕ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು.




