Ganesh Chaturthi in Idgah Maidan: ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡೋದು ಖಚಿತ: ಅರವಿಂದ್ ಬೆಲ್ಲದ್

ಹುಬ್ಬಳ್ಳಿ: ಸರ್ಕಾರ ಅನುಮತಿ ಕೊಡಲಿ, ಕೊಡದಿರಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡೋದು ಖಚಿತ ಎಂದು‌ ಶಾಸಕ ಅರವಿಂದ್ ಬೆಲ್ಲದ್ ಹೇಳಿದರು.

ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರದ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,
ಕಳೆದ ಬಾರಿ ಗಣೇಶೋತ್ಸವವನ್ನು ಶಾಂತರೀತಿಯಿಂದ ಆಚರಿಸಿದೆವು. ಈ ಬಾರಿಯೂ ಸಹ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕೊಡಬೇಕು. ಸಿದ್ದರಾಮಯ್ಯ ಸರ್ಕಾರ ಅಲ್ಪಸಂಖ್ಯಾತ ತುಷ್ಟೀಕರಣ ಮಾಡುವುದಕ್ಕೆ ಅನುಮತಿ ವಿಳಂಬ ಮಾಡುತ್ತಿದೆ. ಮುಸ್ಲೀಮರು ವರ್ಷದಲ್ಲಿ ಎರಡು ಬಾರಿ ಪ್ರಾರ್ಥನೆ ಮಾಡ್ತಾರೆ.
ಜಗತ್ತಿಗೆ ಬೇಡವಾದ ಟಿಪ್ಪು ಜಯಂತಿಯನ್ನು ಇದೇ ಮೈದಾನದಲ್ಲಿ ಮಾಡ್ತಾರೆ. ಸರ್ಕಾರ ಅನುಮತಿ ಕೊಡಲಿ, ಕೊಡದಿರಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡೋದು ಖಚಿತ. ಅನುಮತಿ ನೀಡದಿದ್ರೆ ಗಣಪತಿ ಭಕ್ತರ ಸಿಟ್ಟಿಗೆ ಕಾರಣ ಆಗಬೇಕಾಗುತ್ತೆ. ಒಂದು ತಿಂಗಳ ಹಿಂದೆ ಡಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ, ಆದರೆ ಇದುವರೆಗೂ ಅನುಮತಿ ಕೊಟ್ಟಿಲ್ಲ. ಈದ್ಗಾ ಪಾಲಿಕೆಯ ಆಸ್ತಿ, ಸರ್ಕಾರದ ಹಸ್ತಕ್ಷೇಪ ಇರೋದಿಲ್ಲ. ಸರ್ಕಾರ ನಡೆಸಿದಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ನಾವು ಜನಪ್ರತಿನಿದಿನಗಳು ಜನರ ಭಾವನೆಯನ್ನು ಸರ್ಕಾರಕ್ಕೆ ಮುಟ್ಟಿಸುವುದು ನಮ್ಮ ಕೆಲಸ.ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಸರ್ಕಾರ ಹೀಗೆ ಮಾಡ್ತಾ ಇದೆ.
ಎಂದು ದೂರಿದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ಸಿಎಂ ಆಗಿರೋದಕ್ಕೆ ಬಹಳ ಜನ‌ ಅಸಮಾಧಾನ ಇದೆ. ಹೊರಗಿನಿಂದ ಬಂದು ಸಿದ್ದರಾಮಯ್ಯ ಸಿಎಂ ಆಗಿದಾರೆ.. ಇದು‌ ಮೂಲ ಕಾಂಗ್ರೆಸ್ ಗರಿಗೆ ಅಸಮಾಧಾನ ಇದ್ದೇ ಇದೆ. ಬಿಕೆ‌ ಹರಿಪ್ರಸಾದ್ ಹಿರಿಯ ನಾಯಕರು. ಕಾಂಗ್ರೆಸ್ ನಲ್ಲಿ ಬೆಳವಣಿಗೆ ಜನ‌ ನೋಡ್ತೀದ್ದಾರೆ. ಹರಿಪ್ರಸಾದ್ ಬಹಳ ವರ್ಷಗಳಿಂದ‌ ಪಕ್ಷದಲ್ಲಿದಾರೆ. ಅವರಿಗೆ ಸ್ಥಾನ ಸಿಗಬೇಕು ಎಂದು ಬಹಳ ಜನ ಮಾತಾಡ್ತಿದ್ದಾರೆ. ಇತ್ತ ಐದು ಗ್ಯಾರಂಟಿ ವಿಚಾರ ಮಾಡಿ ಕೊಟ್ಟಿಲ್ಲ. ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಪೂರೈಸೋಕೆ ಆಗುತ್ತಿಲ್ಲ. ಐದು ಗ್ಯಾರಂಟಿ ಲೋಕಸಭೆ ಚುನಾವಣೆವರೆಗೂ ಅಷ್ಟೇ. ಲೋಕಸಭೆ ಚುನಾವಣೆ ವರೆಗೂ ಜನರ ಮೂಗಿಗೆ ತುಪ್ಪ ಹಚ್ಚುತ್ತಾರೆ ಎಂದು ಕುಟುಕಿದರು.

ಬಿಜೆಪಿ ಶಾಸಕರಲ್ಲಿ ಯಾವ ಅಸಮಾಧಾನ ಇಲ್ಲ.ಸೂಕ್ತ ಸಮಯದಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ
ಆಗಲಿದೆ. ನಾನು ಪಕ್ಷ ಏನೇ ಜವಾಬ್ದಾರಿ ಕೊಟ್ಟರು ನಿಭಾಯಿಸ್ತೀನಿ‌ ಎಂದು ತಿಳಿಸಿದರು. ಇದೇ ವೇಳೆ ಮೈತ್ರಿ ಬಗ್ಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವಕ್ಕಾಗಿ ಪಕ್ಷದ ನಾಯಕರ ತೀರ್ಮಾನಕ್ಕೆ ನಾವು ಬದ್ದ.ಆಂತರಿಕವಾಗಿ ಮೈತ್ರಿ ವಿಚಾರ ಚರ್ಚೆ ಆಗಿರತ್ತೆ. ಪ್ರದೀಪ್ ಶೆಟ್ಟರ್ ವಿಚಾರ ಬೇರೆ ಜಗದೀಶ್ ಶೆಟ್ಟರ್ ವಿಚಾರ ಬೇರೆ..ಶೆಟ್ಟರ್ ಟಿಕೆಟ್ ಸಿಗದೆ ಇರೋ ಕಾರಣಕ್ಕೆ ಕಾಂಗ್ರೆಸ್ ಗೆ ಹೋದ್ರು. ಹಿರಿಯರಿಗೆ ಬೇಡ ಅನ್ನೋ ಕಾರಣಕ್ಕೆ ಮಹೇಶ ಟೆಂಗಿನಕಾಯಿ ಅವರಿಗೆ ಟಿಕೆಟ್ ಕೊಟ್ರು. ಶೆಟ್ಟರ್ ಮುನಿಸಿಕೊಂಡು ಹೋದ್ರು ಎಂದು ತಿಳಿಸಿದರು.

ಇನ್ನು ಚೈತ್ರಾ ಕುಂದಾಪೂರ ವಂಚನೆ ಕುರಿತು ಮಾತನಾಡಿದ ಅವರು, ಅವರು ವಂಚನೆ ಮಾಡಿರೋದು ನನಗೆ ಗೊತ್ತಿಲ್ಲ.. ಇದೆಲ್ಲ ಆನಲೈನ್ ಫ್ರಾಡ್ ಎಂದರು.

More News