ಕೊಲಂಬೊ: ಏಷ್ಯಾಕಪ್ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿರುವ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಅಭಿಮಾನಿಯೊಬ್ಬರು ವಿಶೇಷ ಉಡುಗೊರೆಯೊಂದನ್ನ ನೀಡಿದ್ದಾರೆ.
ಕೊಲಂಬೊದಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರನ್ನ ಭೇಟಿಯಾದ ಅಭಿಮಾನಿ, ಸ್ವತಃ ತಾವೇ ಬಿಡಿಸಿದ ಪೋರ್ಟ್‌ರೇಟ್ ಪೇಟಿಂಗ್‌ವೊಂದನ್ನ ಉಡುಗೊರೆಯಾಗಿ ನೀಡಿದ್ದಾರೆ. ಇನ್ನೂ ತಮ್ಮನ್ನು ಭೇಟಿಯಾಗಲು ಆಗಮಿಸಿದ ಅಭಿಮಾನಿ ಯುವತಿಯನ್ನ ಆತ್ಮೀಯವಾಗಿ ಸ್ವಾಗತಿಸಿದ ವಿರಾಟ್, ಆಕೆಯಿಂದ ವಿಶೇಷ ಉಡುಗೊರೆ ಪಡೆಯುವ ಜೊತೆಗೆ ಆಕೆಯೊಂದಿಗೆ ಫೋಟೋಗಳನ್ನ ತೆಗೆಸಿಕೊಂಡಿದ್ದಾರೆ.

ಒಂದೆಡೆ ಏಷ್ಯಾಕಪ್ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನ ರಂಜಿಸಿರುವ ಕಿಂಗ್ ಕೊಹ್ಲಿ, ಇದೀಗ ಶ್ರೀಲಂಕಾದ ಕೊಲಂಬೊದಲ್ಲಿ ಯುವ ಅಭಿಮಾನಿಯನ್ನ ಭೇಟಿಯಾಗಿ ವಿಶೇಷ ವಾಗಿ
ಕಳೆದಿದ್ದಾರೆ.

ಪ್ರಸಕ್ತ ಏಷ್ಯಾಕಪ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ, ಟೀಂ ಇಂಡಿಯಾದ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ. ಟೂರ್ನಿಯ ಸೂಪರ್-4 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಅಬ್ಬರಿಸಿದ ವಿರಾಟ್, 94 ಬಾಲ್‌ಗಳಲ್ಲಿ 122* ರನ್‌ಗಳಿಸಿ ಮಿಂಚಿದ್ದರು. ಕೊಹ್ಲಿ ಹಾಗೂ ರಾಹುಲ್ ಅವರ ಅದ್ಭುತ ಶತಕದ ನೆರವಿನಿಂದ ಟೀಂ ಇಂಡಿಯಾ, 228 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಪ್ರಾಬಲ್ಯ ಸಾಧಿಸಿತ್ತು. ಅಲ್ಲದೇ ಏಕದಿನ ಕ್ರಿಕೆಟ್‌ನಲ್ಲಿ 47ನೇ ಶತಕ ದಾಖಲಿಸಿದ ಚೇಸ್ ಮಾಸ್ಟರ್ ಇದೇ ವೇಳೆ 13 ಸಾವಿರ ರನ್‌ಗಳನ್ನ ಸಹ ಪೂರೈಸಿದರು.