BS Yediyurappa Reaction: ಮೋದಿ ಅಮಿತ್ ಶಾ ಅವರ ಮನಸ್ಸಲ್ಲಿ ಏನಿದೆಯೊ ಗೊತ್ತಿಲ್ಲ: ಬಿಎಸ್ ಯಡಿಯೂರಪ್ಪ

ಬೆಂಗಳೂರು: ಮೈತ್ರಿ ಕುರಿತು ವರಿಷ್ಠರು ಏನು ತೀರ್ಮಾನ ಮಾಡುತ್ತಾರೋ ನೋಡಬೇಕು. ನನ್ನ ವೈಯಕ್ತಿಕ ಅಭಿಪ್ರಾಯ ಏನೂ ಇರುವುದಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.

ದೆಹಲಿ ಭೇಟಿ ಬಳಿಕ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದ ಬಳಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ರಾಜ್ಯ ರಾಜಕೀಯದ ಬಗ್ಗೆ, ಮೈತ್ರಿ ಬಗ್ಗೆ ಏನೂ ಚರ್ಚೆ ಆಗಲಿಲ್ಲ. ಅವರಾಗಿ ಏನು ಪ್ರಸ್ತಾಪ ಮಾಡಲಿಲ್ಲ. ನಾನಾಗಿ ಏನು ಕೇಳಲಿಲ್ಲ. ಮೋದಿ ಅಮಿತ್ ಶಾ ಅವರ ಮನಸ್ಸಲ್ಲಿ ಏನಿದೆಯೊ ಗೊತ್ತಿಲ್ಲ. ಎಲ್ಲವನ್ನೂ ಅವರೇ ತೀರ್ಮಾನ ಮಾಡ್ತಾರೆ ಎಂದು ತಿಳಿಸಿದರು.

ನಿಮ್ಮ ಮತ್ತು ರಾಜ್ಯ ನಾಯಕರ ಸಹಮತ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಶ್ನೆಯೆ ಇಲ್ಲ, ಕೇಂದ್ರ ನಾಯಕರು ಮಾಡುವ ತೀರ್ಮಾನಕ್ಕೆ ಸಹಮತ ಇರುತ್ತದೆ.
ರಾಜ್ಯ ನಾಯಕರ ಮನಸ್ಸಲ್ಲಿ ಏನಿದೆ ಗೊತ್ತಿಲ್ಲ…
ನಾನು ವೈಯಕ್ತಿಕವಾಗಿ ತೀರ್ಮಾನ ಮಾಡೋದಕ್ಕೆ ಆಗೋದಿಲ್ಲ ಎಂದು ಹೇಳಿದರು.

More News