RIGHT OF WOMEN SCHEME : ಮನೆಯೊಡತಿಗೆ ಮಾಸಿಕ 1,000/-: ಮಹತ್ವದ ಯೋಜನೆ ಜಾರಿ ಮಾಡಿದ ತಮಿಳುನಾಡು ಸಿಎಂ ಸ್ಟಾಲಿನ್

ಕಾಂಚೀಪುರಂ: ಮಾಜಿ ಮುಖ್ಯಮಂತ್ರಿ ಸಿ ಎನ್ ಅಣ್ಣಾದೊರೈ ಅವರ ಜನುಮದಿನವಾದ ಇಂದು ತಮಿಳುನಾಡು ಸರ್ಕಾರದ ಬಹುನಿರೀಕ್ಷಿತ ಯೋಜನೆಯನ್ನು ಜಾರಿಮಾಡಲಾಯಿತು.

ಮನೆಯೊಡತಿಗೆ ಮಾಸಿಕ ಒಂದು ಸಾವಿರ ರೂಪಾಯಿ ರೂಪಾಯಿ ಆರ್ಥಿಕ ನೆರವು ನೀಡುವ ಯೋಜನೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಚಾಲನೆ ನೀಡಿದರು. ಇದು ಡಿಎಂಕೆ ಸರ್ಕಾರದ ಪ್ರಮುಖ ಯೋಜನೆಯಾಗಿದೆ ಎಂದು ಬಣ್ಣಿಸಿದರು.
ಇಂದು ನಡೆದ ಕಾರ್ಯಕ್ರಮದಲ್ಲಿ ಹಲವು ಫಲಾನುಭವಿಗಳಿಗೆ ಬ್ಯಾಂಕ್ ಡೆಬಿಟ್ ಕಾರ್ಡ್ ವಿತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಲಾಯಿತು. ತಮಿಳುನಾಡು ರಾಜ್ಯ ಸರ್ಕಾರ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಆಯಾ ಜಿಲ್ಲೆಯಲ್ಲಿ ಈ ಯೋಜನೆಗೆ ಚಾಲನೆ ನೀಡಿದರು.

ಯೋಜನೆಯಡಿಯಲ್ಲಿ 1.06 ಕೋಟಿ ಮಹಿಳೆಯರು ಫಲಾನುಭವಿಗಳಾಗಿದ್ದು. ಇವರಿಗೆ ಇಂದಿನಿಂದ ಈ ಯೋಜನೆಯ ಲಾಭ ದೊರೆಯಲಿದೆ. ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲುಪಲಿದೆ. ಅವರು ಅದನ್ನು ನಗದೀಕರಣ ಮಾಡಲು ಅವರಿಗೆ ಎಂಟಿಎಂ ಕಾರ್ಡ್ ಅನ್ನು ಇಂದು ವಿತರಿಸಲಾಯಿತು. ಈ ಯೋಜನೆ ಮಹಿಳೆಯರ ಹಕ್ಕು ಎಂದು ತಮಿಳುನಾಡು ಸರ್ಕಾರ ಕರೆದಿದೆ.

More News