ಬೆಂಗಳೂರು: ಬಿಜೆಪಿ ನಾಯಕ ಆರ್.ಅಶೋಕ್ ಅವರ ಪದ್ಮನಾಭನಗರ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಹಾಗೂ ಡಿ ಕೆ ಸುರೇಶ್ ಮೇಜರ್ ಸರ್ಜರಿಗೆ ಕೈ ಹಾಕಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಭಾಗದಲ್ಲಿ ಕನಿಷ್ಠ ಎರಡು ಕ್ಷೇತ್ರಗಳನ್ನ ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿದ್ದು, ಪದ್ಮನಾಭ ನಗರದ ಬಹುತೇಕ ನಾಯಕರನ್ನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಆರ್ ಅಶೋಕ್ ಆಪ್ತ ಮುಖಂಡರು ಡಿಕೆ ಶಿವಕುಮಾರ್ ರನ್ನ ಹೊಗಳಿ ಅಟ್ಟಕ್ಕೇರಿಸಿದರು.
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಕಬ್ಬಡಿ ಬಾಬು / ಪ್ರಸಾದ್ ಬಾಬು ನನ್ನ ಕೊನೆಯ ಜೀವನ ಡಿಕೆ ಶಿವಕುಮಾರ್ ಅವರ ಜೊತೆ ಇರ್ತೇನೆ ಎಂದು ಶಪತ ಮಾಡಿದರು. ಕೆಪಿಸಿಸಿ ಕಛೇರಿಯಲ್ಲಿ ಮಾತನಾಡಿದ ಅವರು, ಸುಮಾರು ಬಾರೀ ಮಾತುಕತೆ ನಡೆದಿತ್ತು. 2003 ರಲ್ಲಿ ಚೇರ್ ಮೇನ್ ಮಾಡ್ತಿನಿ ಅಂದಿದ್ರು. ಆದರೆ ಬರಕ್ಕೆ ಆಗಲಿಲ್ಲಾ. ಎಂಎಲ್ಸಿ ಮಾಡ್ತೀನಿ ಅಂದ್ರು ನನ್ನ ಹಣೆಬರಹ ಆಗ ಬರಕ್ಕೆ ಆಗಲಿಲ್ಲ. ಡಿಕೆ ಶಿವಕುಮಾರ್, ಡಿಕೆ ಸುರೇಶ್ ಮನೆಗೆ ಹೋದಾಗ ಏನೋ ಮಾತಾಡಕ್ಕೆ ಹೋಗಿ ಏನೋ ಆಯ್ತು. ರಾಜಕಾರಣದಲ್ಲಿ ಸಾಕಷ್ಟು ಅನುಭವ ಇದೆ. ನಮ್ಮನೆಲ್ಲಾ ಗುರುತಿಸಿ ಕರೆತಂದಿದ್ದಾರೆ. ನನ್ನ ಮಗ ಕ್ಯಾಟಗಿರಿ ಮಾತಾಡಕ್ಕೆ ಹೋಗಿದ್ದೆ ಆದ್ರೆ ನಾವು ಪಕ್ಷಕ್ಕೆ ಸೇರಿಕೊಂಡಿದ್ದೀವಿ. ನನ್ನ ಮಗ ಪವನ್ ಸಹ ಸೇರಿಕೊಂಡಿದ್ದಾನೆ. ಇನ್ನೂ ತುಂಬಾ ಜನ ಸೇರ್ಪಡೆಗೊಳ್ಳಲಿದ್ದಾರೆ ಎಂದರು.

ಮುಂದುವರೆಸು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ವನ್ನು ನಾವು ಬಲಪಡಿಸುತ್ತಿದ್ದೇನೆ. ಇದು ನನ್ನ ಕೊನೆಯ ಜೀವನ ಡಿಕೆ ಶಿವಕುಮಾರ್ ಅವರ ಜೊತೆ ಇರ್ತೇನೆ. ನಾನು ಅಂತರಾಷ್ಟ್ರೀಯ ಮಟ್ಟದಲ್ಲಿ ಗೋಲ್ಡ್ ಮೆಡಲ್ ತಂದಿದ್ದೇನೆ. ಕಾಂಗ್ರೆಸ್ ನೋಡಿ ದೇಶದಲ್ಲಿ ಗ್ಯಾರಂಟಿ ಯೋಜನೆ ತಂದಿದ್ದಾರೆ. ತಾವು ಅನುಮತಿ ಕೊಟ್ಟರೇ ಕೇಬಲ್ ಇಂಡಸ್ಟ್ರಿ, ಗ್ಯಾಸ್,ಹಾಲು ಎಲ್ಲ ತೀರ್ಮಾನ ಮಾಡಿದ್ದಾರೆ ಅವರೆಲ್ಲಾ ಕಾಂಗ್ರೆಸ್ ಸೇರುವುದಾಗಿ ತಿಳಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ದೊಡ್ಡಮಟ್ಟದಲ್ಲಿ ಸೇರ್ಪಡೆ ಮಾಡುತ್ತೇವೆ. ರಾಜಕೀಯ ಬೇಡ ಎಂದುಕೊಂಡಿದ್ದೆ ಆದರೆ ಮತ್ತೆ ನಮಗೆ ರಾಜಕೀಯ ಜೀವನ ಕಲ್ಪಿಸಿಕೊಟ್ಟಿದ್ದಾರೆ. ಲೋಕಸಭಾ ಬಹುಮತದಿಂದ ಡಿಕೆ ಸುರೇಶ್ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.
“ಬಿಜೆಪಿಯಲ್ಲಿ ಬೆನ್ನಿಗೆ ಚೂರಿ ಹಾಕಿದರು”

ವಿ ಬಾಲಕೃಷ್ಣ ಮಾತನಾಡಿ, ಬಿಜೆಪಿ ಯಲ್ಲಿ ಸಾಕಷ್ಟು ಕಷ್ಟ ಪಟ್ಟು, ಹೋರಾಟ ಮಾಡಿದ್ದೀವಿ. ನಾವು ಯಾರನ್ನು ನಂಬಿದ್ವೋ ಅವರು ಮೋಸ ಮಾಡಿದ್ದಾರೆ. ಆದರೆ ಡಿಕೆ ಶಿವಕುಮಾರ್ ನಾನು ಇದ್ದೀನಿ ಕಾಂಗ್ರೆಸ್ ಗೆ ಬಾ ಎಂದಿದ್ರು ಎಂದು ಡಿಕೆ ಶಿವಕುಮಾರ್ ರನ್ನ ನೂತನ ಮುಖಂಡ ಹಾಡಿ ಹೊಗಳಿದರು. ನಮಗೆ ಬಿಜೆಪಿಯಲ್ಲಿ ಬೆನ್ನಿಗೆ ಚೂರಿ ಹಾಕಿದ್ದಾರೆ. ಬಿಜೆಪಿ ಯಿಂದ ಎಲ್ಲರನ್ನು ಕರೆದುಕೊಂಡು ಕಾಂಗ್ರೆಸ್ ಸೇರಿಸುತ್ತೇನೆ. ಇಲ್ಲವಾದ್ರೆ ನಾನು ಆತ್ಮೆಹತ್ಯೆ ಮಾಡಿಕೊಳ್ಳುತ್ತೀನಿ ಎಂದು ಭಾವುಕರಾಗಿ ಡಿಕೆ ಶಿವಕುಮಾರ್ ಮುಂದೆ ವಿ ಬಾಲಕೃಷ್ಣ ಪ್ರಮಾಣ ಮಾಡಿದರು.
“ಅಶೋಕ್ ನಮ್ಮನ್ನು ಕೀಳುಮಟ್ಟದಿಂದ ನೋಡಿಕೊಂಡಿದ್ದಾರೆ”
ಇದೇ ವೇಳೆ ಮಾತನಾಡಿದ ಮಾಜಿ ಕಾರ್ಪೋರೇಟರ್ ಅಂಜಿನಪ್ಪ, 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಕೊಡಿಸುತ್ತಿದ್ವಿ. ಗಿಡನೆಟ್ಟು ಒಳ್ಳೆ ಫಲ ಎಂದು ನಂಬಿದ್ವಿ ಆದರೆ ಅದು ಮುಳ್ಳಿನ ಗಿಡ. ಸುಮಾರು ಬಾರೀ ಡಿಕೆ ಶಿವಕುಮಾರ್ ಕಾಂಗ್ರೆಸ್ ಬರುವಂತೆ ಕರೆಯುತ್ತಿದ್ರು. ಕಾಲ ಬರಲೀ ಎಂದಿದ್ದೆ. ಅಶೋಕ್ ಅವರನ್ನು ಜಯಶೀಲರನ್ನಾಗಿ ಮಾಡಿದ್ವಿ. ಆದರೆ ನಮ್ಮನ್ನು ಕೀಳುಮಟ್ಟದಿಂದ ನೋಡಿಕೊಂಡಿದ್ದಾರೆ. ಅಶೋಕ್ ಅವರ ಮೇಲೆ ಬೇಸರ ದಿಂದ ನಾವು ಕಾಂಗ್ರೆಸ್ ಸೇರುತ್ತಿದ್ದೀವಿ. ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ನಿಷ್ಠೆ ಯಿಂದ ಸೇವೆ ಸಲ್ಲಿಸುತ್ತೇವೆ ಎಂದು ಹೇಳಿದರು.

ಮಾಜಿ ಡೆಪ್ಯೂಟಿ ಮೇಯರ್ ಶ್ರೀನಿವಾಸ್ ಮಾತನಾಡಿ,
ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇವೆ
ಅಧ್ಯಕ್ಷರು,ಸಚಿವರ ನೇತೃತ್ವದಲ್ಲಿ ಸೇರ್ಪಡೆಯಾಗಿದ್ದೇವೆ.
33 ವರ್ಷಗಳ ಕಾಲ ಸೇವೆ ಮಾಡಿದ್ದೇವೆ. ಪದ್ಮನಾಭ ಕ್ಷೇತ್ರ ರಾಜ್ಯಕ್ಕೆ ಹೆಸರು ವಾಸಿ. ಈಗ ನಾವೆಲ್ಲರು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ಧೇವೆ. ಗೌರವ ಇಲ್ಲದ ಜಾಗದಲ್ಲಿ ನಾವು ಯಾಕೆ ಇರಬೇಕೆಂದು ತೀರ್ಮಾನ ಮಾಡಿದ್ದೆ. ಮೇಯರ್ ಮಾಡಬೇಕೆಂದು ಅಶೋಕ್ ಅವರನ್ನು ಕೇಳಿದ್ದೆ. ನೋಡೋಣಾ ಮಾಡೋಣಾ ಎಂದಿದ್ರು. ಶಾಸಕರು ಪೋನ್ ಮಾಡಿ ಶ್ರೀನಿವಾಸ್ ಮೇಯರ್ ಮಾಡಲ್ಲ. ಪಕ್ಷ ಬಿಟ್ಟು ಕಾಂಗ್ರೆಸ್ ಗೆ ಹೋಗು ಎಂದಿದ್ರು ಅಶೋಕ್ . ನಾವು ಯಾರಿಗೆ ಅನ್ಯಾಯ ಮಾಡಿಲ್ಲ ಅಂದರೂ ಸಂಘದ ಚುನಾವಣೆಯ ಲೀಸ್ಟ್ ನಲ್ಲಿ ನನ್ನ ಹೆಸರು ಇಲ್ಲ. ಕೇಳಿದ್ದಕ್ಕೆ ಸುಮ್ಮನೇ ಕುಳಿತುಕೋ ಎಂದಿದ್ರು. ಆದರೆ ಶಿವಕುಮಾರ್ ಅವರು, ರಾಮಲಿಂಗಾರೆಡ್ಡಿ ಒಳ್ಳೆಯ ಸಹಕಾರ ಕೊಟ್ಟರು.
ನನ್ನನ್ನು ಬಿಜೆಪಿ ಸೋಲಿಸಲು ಪ್ರಯತ್ನ ಪಡುತ್ತಿದೆ ಎಂದು ಅರ್ಥ ಆಯ್ತು. ಆದರೆ ಹಠ ಮಾಡಿ ಚುನಾವಣೆ ಗೆದಿದ್ದೆ. ಆದರೆ ಅವರಿಗೆ ಸಂತೋಷ ಇಲ್ಲ. ಈ ನನ್ನಮಗ ಗೆದ್ದು ಬಿಟ್ಟ ಅಂದ್ರು. ನಾನು ಡಿಕೆ ಶಿವಕುಮಾರ್ ಮತ್ತು ರಾಮಲಿಂಗಾರೆಡ್ಡಿ ಅವರಿಗೆ ಚಿರರೃಣಿ. ಅವರಿಗೆ ಮಾತುಕೊಟ್ಟಂತೆ ಇಂದು ಸೇರ್ಪಡೆಗೊಂಡಿದ್ದೇವೆ.
ಕಾಂಗ್ರೆಸ್ ಪಕ್ಷವನ್ನು ನಾವೆಲ್ಲಾ ಒಟ್ಟಿಗೆ ಸೇರಿ ಬಲ ಪಡಿಸಬೇಕಾಗಿದೆ . ಅ15 ರಂದು ದೊಡ್ಡ ಸಂಖ್ಯೆಯಲ್ಲಿ ದೊಡ್ಡ ಕಾರ್ಯಕ್ರಮ ಮಾಡಲಾಗುತ್ತದೆ. ಕಾರ್ಯಕ್ರಮಕ್ಕೆ ಸಿಎಂ,ಡಿಸಿಎಂ ಸಚಿವರು ಶಾಸಕರು ಬರಬೇಕು ಎಂದು ಮನವಿ ಮಾಡಿದರು.




