ಹಾವೇರಿ: ಒನ್ ಟೈಮ್ ಸೆಟ್ಲಮೆಂಟ್ ಸೌಲಭ್ಯದಿಂದ ವಂಚಿತನಾದ ರೈತ ಬ್ಯಾಂಕ್ ನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾ. ಮಾಕನೂರಿನ ಯೂನಿಯನ್ ಬ್ಯಾಂಕ್ ನಲ್ಲಿ ನಡೆದಿದೆ.
ಸಂಜಿವ ಕುರುಬರ ಆತ್ಮಹತ್ಯೆಗೆ ಯತ್ನಿಸಿದ ರೈತ. ಒಳ್ಳೆ ಫಸಲು ಬೆಳೆದು, ಕೈ ತುಂಬಾ ಹಣ ಮಾಡುವ ಆಸೆಯಲ್ಲಿ ಇದ್ದ ರೈತ ಸಂಜಿವ, ಬ್ಯಾಂಕ್ ನಲ್ಲಿ 3.45 ಲಕ್ಷ ಬೆಳೆ ಸಾಲ ಮಾಡಿ ಫಸಲನ್ನ ಬೆಳೆದಿದ್ದಾರೆ. ನಂಬಿ ಬಂದ ರೈತನಿಗೆ ಭೂ ತಾಯಿಯೂ ಕೈ ಹಿಡ್ದಿದ್ದಾಳೆ. ವರ್ಷಪೂರ ಸಾಲ ಕಟ್ಟೋದ್ಯಾಕೆ ಒನ್ ಟೈಮ್ ಸೆಟ್ಲಮೆಂಟ್ ಮಾಡಿಬಿಡುವ ಎಂದು ಬ್ಯಾಂಕ್ ಗೆ ಬಂದ ರೈತ ಸಂಜಿವಗೆ ಆಘಾತ ಎದುರಾಗಿದೆ.

ಸಾಲ ಕೊಂಡೋಗಿದ್ದೀನಿ. ಪಡೆದ ಸಾಲ ಅಷ್ಟೂ ಒಮ್ಮೆಲೇ ತೀರಿಸಿ ಬಿಡುತ್ತೇನೆ ಎಂದು ಬ್ಯಾಂಕ್ ಗೆ ಬಂದ ಸಂಜಿವಗೆ ಒನ್ ಟೈ ಸೆಟಲ್ಮೆಂಟ್ ಪಡೆಯಲು ಬ್ಯಾಂಕ್ ಸಿಬ್ಬಂದಿ
ಒಪ್ಪಿಲ್ಲ. ಪಡೆದ ಸಾಲವನ್ನ ತಿಂಗಳು ತಿಂಗಳು ಕಟ್ಟುವಂತೆ ಸೂಚಿಸಿದ್ದಾರೆ. ಇದರಿಂದ ಬೇಸತ್ತ ರೈತ ಸಂಜಿವ ಸ್ಥಳದಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ್ದಾರೆ.
ಘಟನೆ ನಡೆದ ತಕ್ಷಣ ತಾಲೂಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ರಾಣೇಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.




