XL bully dog banned: ಬುಲ್ಲಿ ಡಾಗ್ ಹಾವಳಿಗೆ ರೋಸಿಹೋದ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್: ಬ್ಯಾನ್ ಮಾಡಿ ಆದೇಶ

ಬುಲ್ಲಿ ಡಾಗ್‌ ಹಾವಳಿಗೆ ರೋಸಿ ಹೋದ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅಮೆರಿಕಾದಲ್ಲಿ ಬುಲ್ಲಿ ಡಾಗ್ಸ್‌ಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದ್ದಾರೆ.

ಇತ್ತೀಚೆಗೆ ಇಂಗ್ಲೆಂಡ್‌ನ ಕೆಲ ಬೀದಿಗಳಲ್ಲಿ ಬುಲ್ಲಿ ಡಾಗ್ಸ್ ಭಯಾನಕ ದಾಳಿ ಶ್ವಾನ ಪ್ರೇಮಿಗಳನ್ನ ದಂಗಾಗುವಂತೆ ಮಾಡಿದೆ. ಬೀದಿ ಬದಿಯಲ್ಲಿ ಓಡಾಡೋ ಮಕ್ಕಳಿಂದ ಹಿಡಿದು, ಹಿರಿಯರನ್ನೂ ಬಿಡದೆ ದಾಳಿಗೆ ಮುಂದಾಗ್ತಿರುವ ಬುಲ್ಲಿ ಡಾಗ್ಸ್ ಗೆ ಜನ ಕಂಗಾಲಾಗಿ ಹೋಗಿದ್ದಾರೆ. ಬುಲ್ಲಿ ಡಾಗ್ ದಾಳಿಯಿಂದ ಒಂದು ಜೀವ ಹೋದ ಬೆನ್ನಲ್ಲೇ ರಿಷಿ ಸುನಕ್ ಮಹತ್ವದ ಘೋಷಣೆ ಹೊರಡಿಸಿದ್ದಾರೆ.

ಮಾನವರ ಮೇಲೆ ಬುಲ್ಲಿ ಡಾಗ್ಸ್ ನ ಸರಣಿ ದಾಳಿ ವರದಿ ಕಂಡು ಕಂಗಾಲಾದ ಪ್ರಧಾನಿ ರಿಷಿ ಸುನಕ್, ಬ್ಯಾನ್ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ತಿಳಿಸಿದ ಅವರು, ಅಮೆರಿಕದ XL ಬುಲ್ಲಿ ಡಾಗ್‌ಗಳು ನಮ್ಮ ಸಮುದಾಯಗಳಿಗೆ, ವಿಶೇಷವಾಗಿ ನಮ್ಮ ಮಕ್ಕಳಿಗೆ ಅಪಾಯಕಾರಿ. ಈ ನಾಯಿಗಳ ನಡವಳಿಕೆ ಮತ್ತು ಕೆಟ್ಟ ತರಬೇತಿ ಭಯಾನಕವಾಗಿದೆ. ಹೀಗಾಗಿ ಅಮೆರಿಕದ ಎಕ್ಸ್‌ಎಲ್ ಬುಲ್ಲಿ ನಾಯಿಗಳನ್ನು ನಿಷೇಧಿಸಲಾಗುವುದು ಎಂದು ಅಧಿಕೃತವಾಗಿ ಘೋಷಿಸಿದ್ದಾರೆ

ಒಂಟಿತನದಿಂದ ದೂರ ಇರಲು, ಪ್ರೇಮವನ್ನ ಬಯಸಿ ಮನೆಗೆ ಕರೆ ತರೋ ಶ್ವಾನಗಳೇ ಜೀವ ತೆಗೆಗ್ಬಿಡುವ ಹಂತಕ್ಕೆ ಹೋಗಿಬಿಟ್ಟರೆ ಹೇಗೆ..!? ಹೀಗಾಗಿ ಇಂಗ್ಲೆಂಡ್‌ನಲ್ಲಿ ಇದುವರೆಗೂ ಇದೇ ರೀತಿಯ ಭಯಾನಕ ತಳಿಗಳಾದ ಪಿಟ್ಬುಲ್ ಟೆರಿಯರ್, ಜಪಾನೀಸ್ ಟೋಸಾ, ಡೋಗೊ ಅರ್ಜೆಂಟಿನೋ ಮತ್ತು ಫಿಲಾ ಬ್ರೆಸಿಲಿರೊ ಎಂಬ ನಾಲ್ಕು ತಳಿಗಳನ್ನ ಬ್ಯಾನ್ ಮಾಡಲಾಗಿದ್ದು, . ಇದೀಗ 5 ನೇ ಶ್ವಾನ ತಳಿ XL ಬುಲ್ಲಿ ಡಾಗ್‌ಗಳನ್ನು ಬ್ಯಾನ್ ಮಾಡಿ ಆದೇಶಿಸಲಾಗಿದೆ.

More News