BAN HOOKAH BAR..? ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧಕ್ಕೆ ಸಚಿವರ ಚಿಂತನೆ: ಶೀಘ್ರದಲ್ಲೇ ಸಿಎಂ ನಿರ್ಧಾರ

ಬೆಂಗಳೂರು : ಬೇರೆ, ಬೇರೆ ರಾಜ್ಯಗಳಲ್ಲಿ ಹುಕ್ಕಾ ಬಾರ್ ನಿಷೇಧಿಸಲಾಗಿದೆ, ಅದೇ ರೀತಿಯಲ್ಲಿ ರಾಜ್ಯದಲ್ಲೂ ಹುಕ್ಕಾ ಬಾರ್ ನಿಷೇಧ ಮಾಡಲು ಚಿಂತನೆ ನಡೆಸಲಾಗಿದ್ದು, ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕ್ರೀಡಾ ಸಚಿವ ನಾಗೇಂದ್ರ ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಅವರು, ಆರೋಗ್ಯ ಇಲಾಖೆ ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳ ಜತೆ ಜಂಟಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಯುವಜನತೆ ಹುಕ್ಕಾಬಾರ್ ಗಳಿಗೆ ಅಡಿಕ್ಟ್ ಆಗುತ್ತಿದ್ದಾರೆ. ಇದನ್ನ ತಪ್ಪಿಸಲು ನಾವು ನಿರ್ಧರಿಸಿದ್ದೇವೆ, ವಿನಾಕಾರಣ ಮಾದಕವಸ್ತುಗಳಿಗೆ ಬಲಿಯಾಗಬಾರದು ಅದರಲ್ಲೂ ಯುವಕರು ಬಲಿಯಾಗಬಾರದು, ಈಗಾಗಲೇ ಈ ಸಂಬಂಧ ವರದಿ ನಮಗೆ ಸಲ್ಲಿಕೆಯಾಗಿದೆ, ಇದನ್ನ ಹೇಗೆ ತೊಲಗಿಸಬೇಕೆಂದು ಸಭೆ ನಡೆಸಿದ್ದೇವೆ ಎಂದರು.

ಹುಕ್ಕಾಬಾರ್ ಮುಕ್ತ ಮಾಡಲು ಕ್ರಮ ಕೈಗೊಳ್ತೇವೆ ಎಂದು ತಿಳಿಸಿದ ಸಚಿವ ನಾಗೇಂದ್ರ, ಬಹಳ ಜನ ಯುವಕರು ಹಾಳಾಗುತ್ತಿದ್ದಾರೆ, ವ್ಯಸನಿಗಳಾಗುತ್ತಿದ್ದಾರೆ, ಇದನ್ನ ಮುಕ್ತ ಮಾಡಲು ಕ್ರಮ ಕೈಗೊಳ್ಳುತ್ತೇವೆ, ಈ ಕುರಿತು ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಲಿದೆ ಎಂದರು.
ಇದೇ ಸಂದರ್ಭದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಆ್ಯಕ್ಟ್ ಮಾಡಲು ಚಿಂತನೆ ನಡೆಸಲಾಗಿದೆ. ಹುಕ್ಕಾಬಾರ್ ನಿಷೇಧವೂ ನಮ್ಮ ಮುಂದಿದೆ, ಕೆಲವು ಕಡೆ ಪರ್ಮಿಶನ್ ಕೊಡಲಾಗುತ್ತಿದೆ, ಪೊಲೀಸರು ದಾಳಿ ನಡೆಸುತ್ತಿದ್ದಾರೆ, ಆದರೂ ಇದರ ಹಾವಳಿ ತಪ್ಪುತ್ತಿಲ್ಲ ಎಂದರು.

ಕೇಂದ್ರ ಸರ್ಕಾರ ಜಾರಿ ಮಾಡಿರುವ ಮಹಿಳಾ ಮೀಸಲಾತಿ
ಕೇಂದ್ರ ಸರ್ಕಾರ ಇಂದು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದೆ, ಈ ಸಂಬಂಧ ಪ್ರತಿಕ್ರಿಯೆ ನೀಡಿದ ಸಚಿವ ದಿನೇಶ್ ಗುಂಡೂರಾವ್, ನಾವೇ ಇದನ್ನ ಮೊದಲಿಗೆ ದಾರಿಗೆ ತಂದಿದ್ದೆವು, ನಾವು ಈ ಮಹಿಳಾ ಮೀಸಲಾತಿ ಪರ ಇದ್ದೇವೆ ಎಂದರು.
ಪ್ರಧಾನಿ ಮೋದಿಯವರು ಯಾಕಿಷ್ಟು ವಿಳಂಬ ಮಾಡಿದ್ದಾರೆ ತಿಳಿಯುತ್ತಿಲ್ಲ ಎಂದು ಹೇಳಿದ ಅವರು, ಲೋಕಸಭೆ, ರಾಜ್ಯ ಸಭೆಯಲ್ಲಿ ಅವರದ್ದೇ ಬಹುಮತವಿತ್ತು, ಯಾವ ಕಾರಣಕ್ಕೆ ವಿಳಂಬ ಮಾಡಿದ್ರೋ ‌ಗೊತ್ತಿಲ್ಲ, ರಾಜಕಾರಣಕ್ಕಾಗಿ ವಿಳಂಬ ಮಾಡಿದ್ರೋ ತಿಳಿಯುತ್ತಿಲ್ಲ ಎಂದರು.

More News