ಅಪ್ಪು ಅಂತಿಮ ಯಾತ್ರೆಗೆ ರೂಟ್ ಮ್ಯಾಪ್ ಸಿದ್ದಪಡಿಸಿದ ಪೊಲೀಸರು

ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅಂತಿಮ ಯಾತ್ರೆ ನಾಳೋ ಬೆಳಗ್ಗೆ ನಡೆಯಲಿದೆ. ಈ ಸಂಬಂಧ ರೂಟ್ ಮ್ಯಾಪ್ ಅನ್ನು ಸಿದ್ದಪಡಿಸಲಾಗಿದ್ದು, ಕಂಠೀರವ ಸ್ಟೇಡಿಯಂನಿಂದ ಕಂಠೀರವ ಸ್ಟುಡಿಯೋವರೆಗೆ ಹೋಗುವ ಯಾತ್ರೆಗೆ ನಗರ ಪೊಲೀಸರು ರಸ್ತೆಗಳನ್ನು ಆಯ್ಕೆ ಮಾಡಿ,ಪಟ್ಟಿ ಸಿದ್ದಪಡಿಸಿದ್ದಾರೆ.


ಕಂಠೀರವ ಕ್ರೀಡಾಂಗಣದಿಂದ ಹೊರಡುವ ಅಂತಿಮ ಯಾತ್ರೆಯು ಕಾರ್ಪೋರೇಶನ್ ಮಾರ್ಗವಾಗಿ ಮೈಸೂರು ಬ್ಯಾಂಕ್ ಸರ್ಕಲ್ಗೆ ಸೇರಲಿದೆ, ಮೈಸೂರ್ ಬ್ಯಾಂಕ್ ಸರ್ಕಲ್ ನಿಂದ ಚಾಲುಕ್ಯ ಸರ್ಕಲ್, ವಿಂಡ್ಸನ್ ಮ್ಯಾನರ್ ವೃತ್ತ, ಕಾವೇರಿ ಜಂಕ್ಷನ್ ತಲುಪಲಿದೆ.
ನಂತರ ಅಲ್ಲಿಂದ ಸ್ಯಾಂಕಿ ಕೆರೆ, ಸರ್ಕಲ್ ಮಾರಮ್ಮ, ಯಶವಂತಪುರ ಮಾರ್ಗವಾಗಿ ಗೋವರ್ಧನ್, ಆರ್ಎಂಸಿ ಯಾರ್ಡ್, ಗೊರಗುಂಟೆಪಾಳ್ಯ ಅಂದರೆ, ತುಮಕೂರು ರಸ್ತೆ ಮೂಲಕ ಕಂಠೀರವ ಸ್ಟುಡಿಯೋಗೆ ಪುನೀತ್ ಅಂತಿಮ ಯಾತ್ರೆ ತಲುಪಲಿದೆ.
ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಲಾಗುತ್ತಿದ್ದು, ವರನಟ ಡಾ. ರಾಜ್ ಕುಮಾರ್, ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಸಮಾಧಿ ಸಮೀಪವೇ ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ ನಡೆಯಲಿದೆ.

More News