DONE THE SATTLEMENT: ನನ್ನ ಸುದ್ದಿಗೆ ಬಂದವರ ಸೆಟಲ್‌ಮೆಂಟ್ ಆಗಿದೆ: ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು

ನವದೆಹಲಿ: ನನ್ನ ಸುದ್ದಿಗೆ ಬಂದವರದ್ದು ಒಂದೊಂದೇ ಸೆಟಲ್‌ಮೆಂಟ್ ಆಗಿದೆ. ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಇದೀಗ ಎಲ್ಲಿದ್ದಾರೆ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ʼನೀರಿನ ಕಳ್ಳʼ ಎಂಬ ಹೇಳಿಕೆ ಬಗ್ಗೆ ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು., ಅವರು ಈ ಹಿಂದೆನೂ ಹೀಗೆ ಮಾತನಾಡಿದ್ದನ್ನು ಸ್ಮರಿಸಿದರು.

“ಈಗ ಈಶ್ವರಪ್ಪ ಅವರು ಎಲ್ಲಿದ್ದಾರೆ? ನಾನೆಲ್ಲಿ ಇದ್ದೀನಿ? ವಿಧಾನಸಭೆಯಲ್ಲಿ ನನ್ನ ಅಪ್ಪನ ಬಗ್ಗೆ ಮಾತಾಡಿದ್ದರು. ಈಗ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ, ತೆಗೆದುಕೊಳ್ಳಲಿ ಎಂದು ವ್ಯಂಗ್ಯವಾಡಿದರು.

ಇತ್ತೀಚೆಗೆ ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇಂಡಿಯಾ ಮೈತ್ರಿಕೂಟಕ್ಕೆ ಕಾವೇರಿ ನೀರನ್ನು ಒತ್ತೆ ಇಟ್ಟಿದ್ದಾರೆ, ಅವರು ʼನೀರಿನ ಕಳ್ಳʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ರೀತಿಯಲ್ಲಿ ಸಾಕಷ್ಟು ಮಾತನಾಡಿದ ಅವರಿಗೆ ಪಕ್ಷವೇ ನಿವೃತ್ತಿ ನೀಡಿದೆ ಎಂದು ಕುಹಕವಾಡಿದರು.

More News

You cannot copy content of this page