ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್ಷಿಪ್‌ನಲ್ಲಿ ಟೀಂ ಇಂಡಿಯಾ ಆಟಗಾರರು ತಮ್ಮ ಅದ್ಭುತ ಬ್ಯಾಟಿಂಗ್‌ನಿಂದ ಮಿಂಚಿದ್ದು, ಕನ್ನಡಿಗ ಕರುಣ್ ನಾಯರ್ ಭರ್ಜರಿ ಶತಕ ಸಿಡಿಸಿದ್ದರೆ, ವೇಗದ ಬೌಲರ್ ಉಮೇಶ್ ಯಾದವ್ ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದಾರೆ.
ಕೌಂಟಿ ಚಾಂಪಿಯನ್ಷಿಪ್‌ನ ಡಿವಿಜನ್ ಒನ್‌ನಲ್ಲಿ ನಾರ್ಥ್‌ಹ್ಯಾಂಪ್ಟನ್‌ಶೈರ್ ಪರವಾಗಿ ಆಡುವ ಅವಕಾಶ ಪಡೆದಿರುವ ಕರುಣ್ ನಾಯರ್, ಸರ್ರೆ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್‌ನಿಂದ ಅಬ್ಬರಿಸಿದರು. ಎದುರಾಳಿ ತಂಡದ ಬೌಲರ್‌ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಕರುಣ್ ನಾಯರ್(ಅಜೇಯ 144*) ರನ್‌ಗಳಿಸಿದರು. ಇದರಲ್ಲಿ 22 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡಿತ್ತು. ಸರ್ರೆ ವಿರುದ್ಧ ಕರುಣ್ ನಾಯರ್ ಗಳಿಸಿದ ಈ ಶತಕ ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ ಅವರ 16ನೇ ಶತಕವಾಗಿದೆ. ಕರುಣ್ ಅವರ ಅಮೋಘ ಶತಕದ ನೆರವಿನಿಂದ ನಾರ್ಥ್‌ಹ್ಯಾಂಪ್ಟನ್‌ಶೈರ್ 9 ವಿಕೆಟ್ ನಷ್ಟಕ್ಕೆ 351 ರನ್‌ಗಳಿಸಿದೆ.

ಉಮೇಶ್ ಅರ್ಧಶತಕದ ಮಿಂಚು:
ಟೀಂ ಇಂಡಿಯಾದ ವೇಗದ ಬೌಲರ್ ಉಮೇಶ್ ಯಾದವ್ ಕೌಂಟಿ ಚಾಂಪಿಯನ್ಷಿಪ್‌ನಲ್ಲಿ ತಮ್ಮ ಅದ್ಭುತ ಬೌಲಿಂಗ್‌ನಿಂದ ಮಿಂಚಿದ್ದಾರೆ. ಎಸೆಕ್ಸ್ ಪರವಾಗಿ ಆಡುತ್ತಿರುವ ಉಮೇಶ್ ಯಾದವ್, ಹ್ಯಾಂಪ್‌ಶೈರ್ ವಿರುದ್ಧ ನಡೆದ ಪಂದ್ಯದಲ್ಲಿ 45 ಬಾಲ್‌ಗಳಲ್ಲಿ 51 ರನ್ ಬಾರಿಸಿದರು. ಇವರ ಈ ಅರ್ಧಶತಕದಲ್ಲಿ 3 ಬೌಂಡರಿ ಹಾಗೂ 4 ಸಿಕ್ಸ್ ಒಳಗೊಂಡಿತ್ತು. ಉಮೇಶ್ ಯಾದವ್ ಅವರ ಅರ್ಧಶತಕದ ನೆರವಿನಿಂದ ಎಸೆಕ್ಸ್ ತಂಡ 9 ವಿಕೆಷ್ಟ್ ನಷ್ಟಕ್ಕೆ 447 ರನ್‌ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಕರುಣ್ ನಾಯರ್, ಉಮೇಶ್ ಯಾದವ್ ಅವರಂತೆ ಈ ಹಿಂದೆ ಕೌಂಟಿ ಚಾಂಪಿಯನ್ಷಿಪ್‌ನಲ್ಲಿ ಆಡಿರುವ ಪೃಥ್ವಿ ಶಾ, ವಾಷಿಂಗ್ಟನ್ ಸುಂದರ್ ಸೇರಿದಂತೆ ಇನ್ನೂ ಹಲವು ಭಾರತೀಯ ಆಟಗಾರರು ತಮ್ಮ ಅತ್ಯುತ್ತಮ ಬ್ಯಾಟಿಂಗ್‌ನಿಂದ ಗಮನ ಸೆಳೆದಿದ್ದರು.




