BJP-JDS ALLIANCE: ಮೈತ್ರಿ ವಿಳಂಬವಾದ್ರೆ ಅಡ್ಡಪರಿಣಾಮ ಆಗ್ಬಹುದು..!: ಸಿಟಿ ರವಿ ಎಚ್ಚರಿಕೆ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ರಣ ಕಹಳೆ ಮೊಳಗಿಸಿರುವ ದಳ ಮತ್ತು ಕಮಲ ದೋಸ್ತಿಗೆ ಮುಂದಾಗಿದೆ. ಶತ್ರುವಿನ ಶತ್ರು ಮಿತ್ರ ಎಂಬ ಸ್ಟ್ರ್ಯಾಟರ್ಜಿ ಯನ್ನ ಲೋಕ ಸಭಾ ಚುನಾವಣೆಯಲ್ಲಿ ಪ್ಲೇ ಮಾಡಲು ಮುಂದಾಗಿದೆ. ಆದ್ರೆ ಪಕ್ಷದ ನಾಯಕರ ಹೇಳಿಕೆ ಮೈತ್ರಿ ಬಂಧಕ್ಕೆ ಕಸಿವಿಸಿ ಉಂಟು ಮಾಡ್ತಿದೆ.

ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸದ್ದು ಮಾಡ್ತಿದೆ. ನಿಮ್ಮ ಅಭಿಪ್ರಾಯ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ ಸಿಟಿ ರವಿ ಮೈತ್ರಿ ಬಗ್ಗೆ ಯಾವುದೇ ಮಾಹಿತಿ ಇಲ್ಲ ನನಗೆ ಎಂದಿದ್ದಾರೆ..! ಮುಂದುವರೆದು ಮಾತನಾಡಿದ ಅವರು, ಮೈತ್ರಿ ಆಗುವುದಿದ್ರೆ ಬೇಗ.. ಶೀಘ್ರವಾಗಿ ಆಗಲಿ. ಆದ್ರೆ ವಿಳಂಭವಾದ್ರೆ ಅಡ್ಡ ಪರಿಣಾಮವಾಗುತ್ತೆ ಅನ್ನೋದು ನನ್ನ ಕಾಳಜಿ ಎಂದು ಪರೋಕ್ಷವಾಗಿ ತಮ್ಮ ಅಸಮಧಾನ ವನ್ನ ಹೈಕಮಾಂಡ್ ನಾಯಕರಿಗೆ ಮುಟ್ಟಿಸಿದ್ದಾರೆ.

“ಸುಪ್ರೀಂ ತೀರ್ಪು ಗಾಯದ ಮೇಲೆ ಬರೆ”

ಕಾವೇರಿ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾವು ಇದರಲ್ಲಿ ರಾಜಕೀಯ ಮಾಡ್ತಾ ಇಲ್ಲ. ಆದರೆ ನಮ್ಮ ರಾಜ್ಯ ಸರ್ಕಾರದ ತಪ್ಪುಗಳನ್ನು ಎತ್ತಿ ಹೇಳಬೇಕಿದೆ. ತಮಿಳು ನಾಡು ಕೇಳುವ ಮೊದಲೇ ಕರ್ನಾಟಕ ನೀರು ಬಿಟ್ಟಿತು. ನಮ್ಮ ನೆರವಿಗೆ cwrc ಬರಲಿಲ್ಲ. ಸುಪ್ರೀಂ ನಲ್ಲೂ ಈಗ ತೀರ್ಪು ಬಂತು. ಕೇಳುವ ಮೊದಲೇ ನೀರು ಬಿಟ್ಟಿದ್ದು ಯಾಕೆ..? ಯಾರ ಭಯಕ್ಕೆ ಬಿಟ್ಟಿದ್ರು..? ಡಿಎಂಕೆ ನಿಮಗೆ ಬೆದರಿಕೆ ಹಾಕಿರಬಹುದು.‌ನಿಮ್ಮ ಇಂಡಿಯಾ ಭಾಗ ಆಗಬೇಕು ಎಂದರೆ ನೀರು ಬಿಡಿ ಎಂದಿರಬಹುದು.
ಅಥವಾ ನಿಮ್ಮ ಹೈಕಮಾಂಡ್ ನಿಮಗೆ ನೀರು ಬಿಡಲು ಸೂಚನೆ ನೀಡಿರಬಹುದು. ಈಗ ನೀರು ಬಿಟ್ಟು ಸಭೆ ಕರೆಯುವ ಹೊಸ ಸಂಪ್ರದಾಯ ಶುರು ಮಾಡಿದ್ದೀರಿ
ನೀರು ಬಿಟ್ಟ ಮೇಲೆ ಸಂಸದರ ಸಭೆ ಮಾಡಿದ್ರಿ.
ನೀರು ಬಿಟ್ಟ ಮೇಲೆ ವಾದ ಶುರು ಮಾಡಿದ್ರಿ ಎಂದು
ಸಿಟಿ ರವಿ ಕುಟುಕಿದರು.

More News