ಬೆಂಗಳೂರು : ಕಂಠೀರವ ಸ್ಟುಡಿಯೋದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ನಾಳೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಸ್ಥಳ ಪರಿಶೀಲನೆ ನಡೆಸಿದರು.
ಪೊಲೀಸ್ ಅಧಿಕಾರಿಗಳೊಂದಿಗೆ ಕಂಠೀರವ ಸ್ಟುಡಿಯೋಗೆ ತೆರಳಿ, ಸಕಲ ಸಿದ್ದತೆಗಳನ್ನು ಪರಿಶೀಲನೆ ನಡೆಸಿದರು. ಹಾಗೆಯೇ, ಸೂಕ್ತ ಬಂದೋಬಸ್ತ್ ಮಾಡಲು ಸೂಚನೆ ನೀಡಿದರು.

ಗಣ್ಯರು ಯಾವ ರೀತಿಯಲ್ಲಿ ಅಂತ್ಯಕ್ರಿಯಲ್ಲಿ ಪಾಲ್ಗೊಳ್ಳಬೇಕು, ಇನ್ನಿತರರು ಯಾವ ರೀತಿಯಲ್ಲಿ ತೆರಳಬೇಕು ಎನ್ನುವುದರ ಕುರಿತ ಸಮಗ್ರ ಮಾಹಿತಿ ಪಡೆದುಕೊಂಡರು.




