ನಾ ತುಂಬಾ ಅಮಾಯಕ.. ನನ್ನೊಂದಿಗೆ ಮೋಸ ನಡೆದು ಬಿಟ್ಟಿದೆ. ವಿಧಾನಸಭೆ ಚುನಾವಣೆ ಟಿಕೆಟ್ ಕೊಡಿಸುತ್ತೇನೆಂದು ಮೋಸ ಮಾಡಿಬಿಟ್ಟಿದ್ದಾರೆ ಎಂದು ಠಾಣೆ ಮೆಟ್ಟಿಲೇರಿದ್ದ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಕೇಸ್ ರಿವರ್ಸ್ ಹೊಡೆಯುವ ಸಾಧ್ಯತೆ ದಟ್ಟವಾಗಿ ದೆ.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸುತ್ತೇನೆಂದು ನಂಬಿಸಿ 7 ಕೋಟಿ ರೂ ಪಡೆದಿದ್ದಾರೆ ಎಂದು ಉದ್ಯಮಿ ಗೋವಿಂದ ಪೂಜಾರಿ ಠಾಣೆ ಮೆಟ್ಟಿಲೇರಿದ್ದರು. ಅದರ ಬೆನ್ನಲ್ಲೇ ಚೈತ್ರಾ ಕುಂದಾಪುರ ಗ್ಯಾಂಗ್ ನ ಹೆಡೆಮುರಿಯನ್ನ ಪೊಲೀಸರು ಕಟ್ಟಿದರು. ಇದೀಗ ಉದ್ಯಮಿ ಗೋವಿಂದ ಪೂಜಾರಿ ಅಷ್ಟೊಂದು ಹಣ
ಸಂಪಾದಿಸಿದ್ದಾದರೂ ಹೇಗೆ ಎಂಬ ಚರ್ಚೆ ಎದ್ದ ಬೆನ್ನಲ್ಲೇ
ಉದ್ಯಮಿ ವಿರುದ್ಧ ಹವಾಲಾ ಟ್ರಾನ್ಸಾಕ್ಷನ್ ನಡೆಸಿರುವ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಇಡಿ ನಿರ್ದೇಶಕರಿಗೆ ದೂರು ನೀಡಿರುವ ಹಿರಿಯ ವಕೀಲ ನಟರಾಜ ಶರ್ಮಾ, ಗೋವಿಂದ ಬಾಬು ಪೂಜಾರಿ ಹವಾಲಾ ವ್ಯವಹಾರ ನಡೆಸಿದ ಬಗ್ಗೆ ಸುಳಿವು ನೀಡಿದ್ದು, ಹೈಕೋರ್ಟ್ಗೂ ದೂರು ಸಲ್ಲಿಸಿದ್ದಾರೆ. ಚೇಫ್ ಟಾಲ್ಕ್ ಪುಡ್ & ಹಾಸ್ಪಿಟಾಲಿಟಿ ಒಡೆತನದ ಗೋವಿಂದ ಪೂಜಾರಿ 5 ಕೋಟಿ ಕ್ಯಾಶ್ ವ್ಯವಹಾರ ನಡೆಸಿದ್ದಾರೆ. ಬಿಜೆಪಿ ಟಿಕೆಟ್ ಪಡೆಯಲು 5 ಕೋಟಿ ಕ್ಯಾಶ್ ಕೊಟ್ಟಿದ್ದಾರೆ. 2 ಲಕ್ಷಕ್ಕಿಂತ ಹೆಚ್ಚು ಕ್ಯಾಶ್ ವ್ಯವಹಾರ ಮಾಡುವಂತಿಲ್ಲ. ಆದರೂ 5 ಕೋಟಿ ಕ್ಯಾಶ್ ವ್ಯವಹಾರ ಮಾಡಿದ್ದಾರೆ ಎಂದ ಶರ್ಮಾ ನೀಡಿದ ದೂರಿನ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ಅಷ್ಟೇ ಅಲ್ಲದೇ, “ಉದ್ಯಮಿ ಗೋವಿಂದ ಬಾಬು ಪೂಜಾರಿ
ಮುಂಬೈನಲ್ಲಿ ವ್ಯವಹಾರ ಹೊಂದಿದ್ದಾರೆ. ಮುಂಬೈ ಮನಿ ಆ್ಯಕ್ಟಿವಿಟಿಗಳ ಹಬ್ ಪ್ರದೇಶ. ಇವರಿಗೆ ಹವಾಲಾ ದಂಧೆಕೋರರ ಜೊತೆ ಸಂಪರ್ಕ ಇರೋ ಸಾಧ್ಯತೆ ಇದೆ. ಈ ಬಗ್ಗೆ ತುಂಬಾ ಆಳವಾದ ತನಿಖೆ ಮಾಡುವುದು ಸೂಕ್ತ. ಹೀಗಾಗಿ ಇವರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ” ಎಂದು ಒತ್ತಾಯಿಸಿದ್ದಾರೆ.
“ಹವಾಲಾ ದಂಧೆ ಆದಾಯ ತೆರಿಗೆ ಕಾಯ್ದೆ ಸೆ. 269 ಅಡಿಯಲ್ಲಿ ಅಪರಾಧವಾಗಿದೆ. ಅಲ್ಲದೇ ಫೈನಾನ್ಸ್ ಆಕ್ಟ್ ಅಡಿಯಲ್ಲಿಯೂ ಅಪರಾಧವಾಗತ್ತೆ. ಇಷ್ಟು ದೊಡ್ಡ ಮಟ್ಟದ ಕ್ಯಾಶ್ ವ್ಯವಹಾರ ಮಾಡಿದ್ದಾರೆ. ಬಂಡೆಪಾಳ್ಯದಲ್ಲಿ FIR ಆಗುವ ಮುನ್ನ ಇದು ಸಿವಿಲ್ ಕೇಸ್. ಆದರೆ ಈಗ ಆದಾಯ ತೆರಿಗೆ ಇಲಾಖೆ ವ್ಯಾಪ್ತಿಗೂ ಸಹ ಬರುತ್ತೆ. ಅಲ್ಲದೇ ಬ್ಲಾಕ್ ಮನಿ ವ್ಯವಹಾರ ಹವಾಲಾ ಟ್ರಾನ್ಸಾಕ್ಷನ್ ಆಗುತ್ತೆ” ಎಂದು ದೂರಿದರು.




