Cabinet Meeting: ಮಂಡ್ಯ, ಬೆಂಗಳೂರು, ಮೈಸೂರಿಗೂ ಜಲಕ್ಷಾಮ: ಸಚಿವ ಸಂಪುಟದಲ್ಲಿ ಮುಂದಿನ ನಡೆ ತೀರ್ಮಾನ..?

ಬೆಂಗಳೂರು: ಸುಪ್ರೀಂ ಕೋರ್ಟ್ ತಮಿಳುನಾಡಿಗೆ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ನಿರ್ದೇಶನ ನೀಡಿದೆ. ಇತ್ತ ಕೆಆರ್​​ಎಸ್ ಜಲಾಶಯ ಬತ್ತಿ ಹೋಗಿದ್ದು, ಕುಡಿಯುವ ನೀರಿಗೂ ಆಹಾಕಾರ ಉಂಟಾಗುವ ಆತಂಕ ಇದೆ. 15 ದಿನ ತಮಿಳುನಾಡಿಗೆ ಕಾವೇರಿ ನೀರು ಬಿಡೋದ್ರಿಂದ ಮಂಡ್ಯ ಅಷ್ಟೇ ಅಲ್ಲ ಬೆಂಗಳೂರು, ಮೈಸೂರಿಗೂ ಜಲಕ್ಷಾಮ ಫಿಕ್ಸ್ ಎನ್ನಲಾಗ್ತಿದ್ದು, ಇಂದು ಸಂಜೆ 6 ಗಂಟೆಗೆ ವಿಧಾನಸೌಧದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಂಜೆ 6 ಗಂಟೆಗೆ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಕಾವೇರಿ ಬಿಕ್ಕಟ್ಟಿನ ಬಗ್ಗೆ ಚರ್ಚೆಯಾಗಲಿದೆ. ಪ್ರಸ್ತುತ KRS ಡ್ಯಾಂನಲ್ಲಿರೋದು ಕೇವಲ 20 ಟಿಎಂಸಿ ನೀರು ಮಾತ್ರ. ಮುಂದಿನ 15 ದಿನ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಿದ್ರೆ ಬರೋಬ್ಬರಿ 7 ಟಿಎಂಸಿ ನೀರು ಖಾಲಿಯಾಗಲಿದೆ. ಅಲ್ಲಿಗೆ ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ಉಳಿಯೋದು ಕೇವಲ 13 ಟಿಎಂಸಿ ನೀರು ಮಾತ್ರ. ಆ 13 ಟಿಎಂಸಿ ನೀರಲ್ಲಿ 5 ಟಿಎಂಸಿ ನೀರು ಡೆಡ್ ಸ್ಟೋರೇಜ್. ಉಳಿಯೋದು ಕೇವಲ 8 ಟಿಎಂಸಿ ನೀರು. ಹೀಗಾಗಿ ಮೈಸೂರು, ಬೆಂಗಳೂರು, ಚಾಮರಾಜನಗರ, ರಾಮನಗರ ಜನತೆಗೆ ಆತಂಕ ಇದೆ. 2024 ಮೇವರೆಗೆ ಬೆಂಗಳೂರು ಮಹಾನಗರ ಒಂದಕ್ಕೆ 18 ರಿಂದ 20 ಟಿಎಂಸಿ ನೀರು ಬೇಕಿದೆ. ಇತ್ತ ಕೋರ್ಟ್ ಆದೇಶದಿಂದ ರೊಚ್ಚಿಗೆದ್ದಿರುವ ರೈತರು, ಕನ್ನಡಪರ ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ರೈತರು ಬೀದಿಗಿಳಿದು ಹೋರಾಟ ತೀವ್ರಗೊಳಿಸಿದ್ದು, ಯಾವ ರೀತಿ ರೈತರನ್ನು ಸಮಾಧಾನಪಡಿಸುವುದು ಎಂಬ ಬಗ್ಗೆಯೂ ಸಂಪುಟದಲ್ಲಿ ಚರ್ಚಿಸುವ ಸಾಧ್ಯತೆ ಇದೆ.

ಸುಪ್ರೀಂಕೋರ್ಟ್ ತೀರ್ಪೀನಿಂದ‌ ಉದ್ಬವಿಸಿರುವ ಪರಿಸ್ಥಿತಿಗಳ ಬಗ್ಗೆ ಚರ್ಚೆ, ಸದ್ಯ ಸಂಕಷ್ಟ ಸೂತ್ರ ಸಿದ್ಧಪಡಿಸುವಂತೆ ಕೇಂದ್ರ ಜಲಶಕ್ತಿ ಸಚಿವರ ಮೂಲಕ ಒತ್ತಡ ಹೇರಿ, ನೀರು ಬಿಡುಗಡೆಯಿಂದ ಎದುರಾಗಬಹುದಾದ ಪರಿಸ್ಥಿತಿ, ಸಂಕಷ್ಟ ಎದುರಿಸುವ ಪರ್ಯಾಯ ಮಾರ್ಗಗಳ ಹುಡುಕಾಟ ದ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ಉಳಿದಂತೆ ಮಂಗಳೂರು ಮೀನುಗಾರಿಕೆ ಬಂದರಿನ 3 ನೇ ಹಂತದ ವಿಸ್ತರಣೆ ಕಾಮಗಾರಿ ಪೂರ್ಣ ಗೊಳಿಸಲು 49.50 ಕೋಟಿ ರೂ.ಪರಿಷ್ಕೃತ ಅಂದಾಜು ಅನುಮೋದನೆ ಸಾಧ್ಯತೆ ಇದೆ. ಜೊತೆಗೆ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಗೆ ನ್ಯಾ. ಭಕ್ತವತ್ಸಲ ಆಯೋಗದ ಎರಡನೇ ವರದಿ ಬಗ್ಗೆ ಚೆರ್ಚೆ ನಡೆಯಲಿದೆ. ಕಡಗರು ಎಂಬುದನ್ನು ಕೊಡವ ಎಂದು ಬದಲಾವಣೆ ಮಾಡುವ ಸಾಧ್ಯತೆ ಇದೆ.

ಅಲ್ಲದೇ, ಕೇಂದ್ರ ಹಿಂದುಳಿದ ವರ್ಗಗಳ (ಒಬಿಸಿ)ಪಟ್ಟಿಗೆ ಕುಂಚಿಟಿಗರ ಸಮುದಾಯ(ವರ್ಗ) ಸೇರ್ಪಡೆಗೆ ಶಿಫಾರಸು
ಮಾಡುವ ಸಾಧ್ಯತೆ ಇದೆ. ಕೆಎಸ್‌ಎಸ್‌ಐಡಿಸಿ ವತಿಯಿಂದ ಏಳು ಕೈಗಾರಿಕಾ ವಸಾಹತು ಸ್ಥಾಪನೆ ಚಿತ್ತಾಪುರ, ಕೋಡ್ಕಣಿ, ಕಣಗಾಲ, ಬದನಗುಪ್ಪೆ, ಇಂಡಿಯಲ್ಲಿ ಸ್ಥಾಪನೆಗೆ 166 ಕೋಟಿ ರೂ.ಹುಬ್ಬಳ್ಳಿ ಮತ್ತು ಶಹಪೂರದಲ್ಲಿ ಭೂ ಸ್ವಾಧೀನಕ್ಕೆ ಸಮ್ಮತಿ ಸೂಚಿವುದು, ಲೋಕಾಯುಕ್ತದಲ್ಲಿ ಕೆಲಸ ನಿರ್ವಹಿಸುತ್ತಿರುವ 6 ಸರ್ಕಾರಿ ಅಭಿಯೋಜಕರ ಸೇವೆ ಒಂದು ವರ್ಷ ಮುಂದುವರಿಕೆ ಅನುಮೋದನೆ‌ ಜೊತೆಗೆ ಕೆಪಿಎಸ್‌ಸಿ ಅಧ್ಯಕ್ಷ ಮತ್ತು ಸದಸ್ಯರಿಗೆ ನಿವೃತ್ತಿ ವೇತನಕ್ಕೆ ಕಾಯ್ದೆ ತಿದ್ದುಪಡಿ ಕೆಪಿಎಸ್‌ಸಿ ವರದಿ ಮಂಡನೆ ಮಾಡುವ ಸಾಧ್ಯತೆ ಇದೆ.

ಮುಂದುವರೆದು ಕಾನೂನು ಮಾಪನ ಇಲಾಖೆಯ ನೇಮಕಾತಿ ನಿಯಮಗಳಿಗೆ ತಿದ್ದುಪಡಿ, ಆಶಾಕಿರಣ ಯೋಜನೆಯಲ್ಲಿ ಕಣ್ಣಿನ ತಪಾಸಣೆ, ಕನ್ನಡಕ ವಿತರಣೆಗೆ ಚಿತ್ರದುರ್ಗ, ರಾಯಚೂರು, ಉತ್ತರ ಸಂಚ ಮಂಡ್ಯ ಜಿಲ್ಲೆಯಲ್ಲಿ ಜಾರಿಗೆ 29.14 ಕೋಟಿ ರೂ. ಯೋಜನೆ, ಬೆಂಗಳೂರಿನ ಬಿಟಿಎಂ ಬಡಾವಣೆಯಲ್ಲಿ 2.17 ಎಕರೆಯಲ್ಲಿ ಪ್ರಯಾಣಿಕರ ತಂಗುದಾಣ 67.62
ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುವುದರ ಬಗ್ಗೆ ಚರ್ಚೆ ನಡೆಯಲಿದೆ.

More News