DK Shivakumar request: ಕೋಪ ಇದ್ರೆ ಏನೇನ್ ಬೇಕೋ ಬೈಯಿರಿ. ಬಂದ್ ಕೈ ಬಿಡಿ: ಡಿಸಿಎಂ ಡಿಕೆ ಶಿವಕುಮಾರ್ ಮನವಿ

ಬೆಂಗಳೂರು: ಮಂಡ್ಯ ಬಂದ್ ನಿಂದ ಪ್ರಯೋಜನ ಆಗಲ್ಲ. ಲಾ ಅಂಡ್ ಆರ್ಡರ್ ಪ್ರಾಬ್ಲಂ ಆದ್ರೆ ಕಷ್ಟ. ಕೋರ್ಟ್ ಗಳೆಲ್ಲಾ ಇದಾವೆ..
ನಾವು ರೈತರಿಗೋಸ್ಕರವೇ ಹೋರಾಟ ಮಾಡ್ತಿರೋದು..
ಜನರಿಗೆ ತೊಂದರೆ ಆಗೋದು ಬೇಡ. ಬಂದ್ ಕೈ ಬಿಡಿ. ಕೋಪ ಇದ್ರೆ ಏನೇನ್ ಬೇಕೋ ಬೈಯಿರಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

“ಎಲ್ಲದಕ್ಕೂ ಪರಿಹಾರ ಮೇಕೆದಾಟು”..?

ಕಾವೇರಿ ನೀರಿನ ವಿವಾದದ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಒಂದು ಬಿಲ್ ಇದೆ, ಮೇಲ್ಮನೆಯಲ್ಲಿ ಪಾಸ್ ಆಗಬೇಕಿದೆ. ಮೇಕೆದಾಟು ಯೋಜನೆಗೆ ದಿನೆ ದಿನೇ ಕಾಸ್ಟ್ ಜಾಸ್ತಿಯಾಗ್ತಿದೆ. ಪಿಎಂ ಗೆ ಮನವಿ ಮಾಡಿದ್ದೇವೆ. ಇದಕ್ಕೆಲ್ಲಾ ಮೇಕೆದಾಟು ಯೋಜನೆ ಒಂದೇ ಪರಿಹಾರ ಎಂದು ತಿಳಿಸಿದರು.

ಮುಂದುವರೆದು ಮಾತನಾಡಿದ ಅವರು, ಕಾವೇರಿ ನೀರಿನ ವಿಚಾರವಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೀವಿ. ನಮ್ಮ ರೈತ ಸಂಘಟನೆಗಳು ಅರ್ಜಿ ಹಾಕಿದ್ರು, ತಮಿಳುನಾಡು ರೈತರೂ ಹಾಕಿದ್ರು. ತ‌ಮಿಳುನಾಡು ಅಪೀಲ್ ಹಾಗೂ ನಮ್ಮ ಅಪೀಲ್ ಕೂಡ ಡಿಸ್ಮಿಸ್ ಮಾಡಿದ್ದಾರೆ. 27 ನೇ ತಾರೀಖಿನ ವರೆಗೆ ಬಿಡಬೇಕು ಅಂತಾ ಕೋರ್ಟ್ ಹೇಳಿದೆ. ಹಿಂದೆಯೂ ಕೃಷ್ಣ, ಬಂಗಾರಪ್ಪ, ದೇವೇಗೌಡ್ರ ಕಾಲದಲ್ಲೂ ಇದೇ ರೀತಿ ಆಗಿತ್ತು.. ಹಿಂದೆ ಹತ್ತು ಸಾವಿರ ಕ್ಯೂಸೆಕ್ಸ್ ಬಿಡೋದಕ್ಕೆ ಬಿಜೆಪಿಯೇ ಅಫಿಡವಿಟ್ ಹಾಕಿತ್ತು.. ನಾನು ರಾಜಕಾರಣ ಮಾಡೋಕೆ ಹೋಗಲ್ಲ.. ಹೆಚ್ ಡಿ ಕುಮಾರಸ್ವಾಮಿ, ಬೊಮ್ಮಾಯಿ, ಯಡಿಯೂರಪ್ಪ ಯಾವ ಲಾಯರ್ ಗಳನ್ನ ಇಟ್ಟಿದ್ರೋ ಅವ್ರನ್ನೇ ನಾವು ಇಟ್ಟಿರೋದು. ಈಗ ಸುಪ್ರೀಂ ಕೋರ್ಟ್ ಕಮಿಟಿ ಮುಂದೆಯೇ ಹೋಗಿ ಎಂದಿದೆ ಎಂದು ತಿಳಿಸಿದರು.

ನಾನು ಹಿಂದೆ ದೇವಸ್ಥಾನಕ್ಕೆ ಹೋದಾಗ ಗೇಲಿ ಮಾಡಿದ್ರು..
ಅವ್ರು ಹೋಮ ಎಲ್ಲಾ ಮಾಡಿಸಿದ್ರು ನಾನು ಅದೆಲ್ಲಾ ಹೇಳೋಕೆ ಹೋಗಲ್ಲ.. ಎಲ್ಲರಿಗೂ ಉತ್ತರ ಕೊಡೋ ಶಕ್ತಿ‌ ನನಗೆ ಇದೆ.. ಹೆಚ್ ಡಿ ಕುಮಾರಸ್ವಾಮಿ, ಬೊಮ್ಮಾಯಿಗೆಲ್ಲಾ ನಿಂತಲ್ಲೇ ಹೇಳೋಕೆ ಗೊತ್ತಿದೆ.
ಕನ್ನಡಪರ ಸಂಘಟನೆಗಳಿಗೆ ರೋಷ ಬಂದಿದೆ.
ಸ್ವಾಮೀಜಿಗಳು ಬಂದಿದ್ದಾರೆ.. ನಾನು ಮೇಕೆದಾಟು ಪಾದಯಾತ್ರೆ ಮಾಡಿದಾಗ ಎಲ್ಲೋಗಿದ್ರು..ಬಿಜೆಪಿ ಫ್ರೆಂಡ್ಸ್ ಗೆ ಅಪೀಲ್ ಮಾಡ್ತೀನಿ.. ಒಳಗಡೆ ಏನೋ‌ ಮಾತಾಡಿದ್ರು, ಹೊರಗೆ ಮೀಡಿಯಾಗಳಿಗೆ ಇನ್ನೇನೋ‌ ಮಾತಾಡಿದ್ರು..
ಎಂದು ದೂರಿದರು.

ಮಂಡ್ಯ ಬಂದ್ ನಿಂದ ಪ್ರಯೋಜನ ಆಗಲ್ಲ. ಲಾ ಅಂಡ್ ಆರ್ಡರ್ ಪ್ರಾಬ್ಲಂ ಆದ್ರೆ ಕಷ್ಟ. ಕೋರ್ಟ್ ಗಳೆಲ್ಲಾ ಇದಾವೆ..
ನಾವು ರೈತರಿಗೋಸ್ಕರವೇ ಹೋರಾಟ ಮಾಡ್ತಿರೋದು..
ಜನರಿಗೆ ತೊಂದರೆ ಆಗೋದು ಬೇಡ, ಪ್ರತಿಭಟನೆ ಹೋರಾಟ ಮಾಡಿಕೊಳ್ಳಲಿ. ರಾಜ್ಯಕ್ಕೂ ಧಕ್ಕೆ ಆಗ್ತದೆ, ಬಂದ್ ಕೈ ಬಿಡಿ ಎಂದು ಮನವಿ ಮಾಡ್ತೀವಿ.ಕೋಪ ಇದ್ರೆ ಏನೇನ್ ಬೇಕೋ ಬೈಯಿರಿ. ಮೇಲ್ಮನವಿ ನಾವೂ‌ ಸಲ್ಲಿಸಿದ್ವಿ
ಎರಡೂ ರಾಜ್ಯಗಳನ್ನ ಕರೆದು ಮಾತಾಡಿ ಅಂತ ಕೇಳಿದ್ವಿ.
ನಮ್ ಕೈಲಿ ಏನ್ ಆಗುತ್ತೋ ಅದನ್ನ ಮಾಡ್ತೀವಿ ಎಂದು ತಿಳಿಸಿದರು.

More News