ಮೈಸೂರು: ಮೈಸೂರು ಸಾಮೂಹಿಕ ಅತ್ಯಚಾರ ಪ್ರಕರಣದ ತನಿಖೆಗೆ ಸಂತ್ರಸ್ತೆ ಸಹಕಾರ ನೀಡುತ್ತಿಲ್ಲವೆ ನ್ನುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅತ್ಯಾಚಾರ ಆರೋಪಿಗಳ ಪತ್ತೆಗೆ ಎಲ್ಲಾ ಕ್ರಮ ವಹಿಸಲಾಗಿದೆ.ಆರೋಪಿಗಳ ಪತ್ತೆಗೆ ಸಂತ್ರಸ್ಥೆ ಸಹಕರಿಸಬೇಕಾಗು ತ್ತದೆ.ಸದ್ಯಕ್ಕೆ ಸಂತ್ರಸ್ಥೆ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಮಾಹಿತಿ ಇದೆ.ಘಟನೆಯಿಂದ ಶಾಕ್ ಗೆ ಒಳಗಾಗಿದ್ದು ಪೊಲೀಸರ ಮಾಹಿತಿ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ.ಯುವತಿ ಅವರ ಕುಟುಂಬ ಸದಸ್ಯರ ಜೊತೆಗೆ ಮಾತನಾಡಿರಬಹುದು.ಈ ಬಗ್ಗೆ ಪೊಲೀಸ್ ಅಧಿಕಾರಿಗಳು ತಮಗೆ ಮಾಹಿತಿ ನೀಡಿದ್ದಾರೆ.ಆದರೂ ಎಲ್ಲಾ ಆಯಾಮಗಳಲ್ಲು ತನಿಖೆ ನಡೆಸಲಾಗುತ್ತಿದೆ.ಆರೋಪಿಗಳನ್ನು ಆದಷ್ಟು ಶೀಘ್ರದಲ್ಲಿ ಪತ್ತೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಂತ್ರಸ್ಥೆ ಯಾರ ಜೊತೆಯು ಮಾತನಾಡುವುದಿಲ್ಲ ಎಂದು ನೇರವಾಗಿ ಹೇಳುತ್ತಿದ್ದಾಳೆ.ಆಕೆಯ ತಂದೆ ತಾಯಿ ಸಹ ಯಾರನ್ನೂ ಭೇಟಿ ಮಾಡುವುದಿಲ್ಲ ಎಂದು ಪತ್ರ ಬರೆದಿದ್ದಾರೆ.ಗೃಹಸಚಿವರು ಸಮರ್ಥ ರಿದ್ದಾರೆ.ಆರೋಪಿಗಳನ್ಮು ಬಂಧಿಸಿ ಶಿಕ್ಷಿಸಲು ಎಲ್ಲಾ ರೀತಿಯ ಕ್ರಮ ವಹಿಸಿದ್ದಾರೆ ಅವರು ಹೇಳಿದರು.
ಅತ್ಯಾಚಾರ ಪ್ರಕರಣದ ಬಗ್ಗೆ ಸಚಿವರು,ಸಂಸದರು,ಶಾಸಕರ ವ್ಯತಿರಿಕ್ತ ಹೇಳಿಕೆ ನೀಡುವು ಮೂಲಕ ಪೊಲೀಸರ ವೈಫಲ್ಯವನ್ನು ಮುಚ್ಚಿಕೊಳ್ಳುವ ಯತ್ನ ನಡೆಸಿದ್ದಾರೆ.ಸಚಿವರ ವೈರುದ್ಯದ ಹೇಳಿಕೆ ಸಾರ್ವಜನಿಕರು ಹಾಗೂ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.