ಬೆಂಗಳೂರು: ಕೋಟಿ ಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಸೋ ಕಾಲ್ಡ್ ಹಿಂದೂ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಗೆ ವಿಚಾರಣಾಧೀನ ಕೈದಿ ನಂಬರ್ ನ್ನ ಜೈಲಾಧಿಕಾರಿಗಳು
ನೀಡಿದ್ದಾರೆ.
ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ಟಿಕೆಟ್ ಹೆಸರಿನಲ್ಲಿ ವಂಚನೆ ಮಾಡಿರುವ ಚೈತ್ರಾ ಕುಂದಾಪುರ ಸೇರಿದಂತೆ 7 ಮಂದಿ ಆರೋಪಿಗಳಿಗೆ ಮುಂದಿನ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಸೂಚಿಸಲಾಗಿದೆ. ಅಕ್ಟೋಬರ್ 6 ವರೆಗೂ ನ್ಯಾಯಾಂಗ ಬಂಧನ ಮುಂದುವರೆಸುವಂತೆ ಆದೇಶ ನೀಡಿರುವ ಹಿನ್ನಲೆ ಆರೋಪಿಗಳಿಗೆ ಕೈದಿ ನಂಬರ್ ನ್ನ ಜೈಲಿನ ಅಧಿಕಾರಿಗಳು ನೀಡಿದ್ದಾರೆ.
ಚೈತ್ರಗೆ 9737 ನಂಬರ್ ನೀಡಿದ ಜೈಲಾಧಿಕಾರಿಗಳು, ಆರೋಪಿ ಮೋಹಮ್ ಕುಮಾರ್-9738, ಆರೋಪಿಗಳಾದ ರಮೇಶ್-9739, ಚೆನ್ನಾನಾಯ್ಕ-9740,
ಧನರಾಜ್-9741 ಗೆ ನಂಬರ್ ನ್ನ ನೀಡಲಾಗಿದೆ.
ಇನ್ನು ಈಗಾಗಲೇ ಆರೋಪಿಗಳ ಜೊತೆಗೆ ಅನೇಕ ಸುತ್ತಿನ ವಿಚಾರಣೆ ನಡೆಸಿರುವ ಸಿಸಿಬಿ ಪೊಲೀಸರು ಶೇ 80 ರಷ್ಟು ಹಣವನ್ನು ರಿಕವರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಚೈತ್ರಾ ಕುಂದಾಪುರಳಿಂದ 81 ಲಕ್ಷ ನಗದು, 23 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಸಹಕಾರಿ ಬ್ಯಾಂಕ್‌ನಲ್ಲಿ 1.08 ಕೋಟಿ ಮೌಲ್ಯದ ಎಫ್ ಡಿ ಜೊತೆಗೆ 12 ಲಕ್ಷ ಮೌಲ್ಯದ ಕಿಯಾ ಕಾರನ್ನು ವಶಪಡಿಸಿಕೊಂಡಿದ್ದಾರೆ. ಇತರೆ ಆರೋಪಿಗಳಾದ ಗಗನ್ ಕಡೂರ್, ಧನರಾಜ್ ರಮೇಶ್ ರಿಂದ 26 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಅಭಿನವ ಹಾಲಾಶ್ರೀ ಬಳಿ 56 ಲಕ್ಷ ನಗದು, 25 ಲಕ್ಷ ಮೌಲ್ಯದ ಕಾರು ಜಪ್ತಿ ಮಾಡಲಾಗಿದ್ದು, ಬಾಕಿ ಹಣದ ಕುರಿತು ತನಿಖಾಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.




