ಬೆಂಗಳೂರು : ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಶಿವಮೊಗ್ಗ, ಶಿಕಾರಿಪುರ ಪ್ರವಾಸಕ್ಕೆ ತೆರಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ಹಬ್ಬದ ಬಳಿಕ ರಾಜ್ಯ ಪ್ರವಾಸ ಕೈಗೊಳ್ಳಲಾಗುವುದು, ಇದು ಪಕ್ಷಸಂಘಟನೆಯ ಉದ್ದೇಶ ಹೊಂದಿದೆ ಎಂದು ತಿಳಿಸಿದರು.
ಗಣಪತಿ ಹಬ್ಬ ಮುಗಿದ ಮೇಲೆ ನಾನು, ಪಕ್ಷದ ಅಧ್ಯಕ್ಷರು, ಹಾಗೆಯೇ ಸಂಬಂಧಪಟ್ಟ ಸಚಿವರು ಎಲ್ಲರೂ ಕುಳಿತು ಚರ್ಚೆ ಮಾಡಿ ಯಾವ ಜಿಲ್ಲೆಯಿಂದ ಪ್ರವಾಸವನ್ನು ಆರಂಭಿಸಬೇಕು, ಎಷ್ಟು ದಿನಗಳ ಪ್ರವಾಸ ಮಾಡಬೇಕು ಎನ್ನುವುದರ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹಾಗೆಯೇ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿ ಯಾವತ್ತು ಪ್ರವಾಸ ಆರಂಭಿಸಬೇಕು ಎನ್ನುವುದನ್ನು ನಿರ್ಧಾರ ಕೈಗೊಳ್ಳಲಾಗುವುದು, ನಾನು ಒಬ್ಬನೇ ರಾಜ್ಯ ಪ್ರವಾಸಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.