Jaggesh: ಜಾತಿ ಮೀರಿ ಮದುವೆ ಆಗಿ: ನಟ ಜಗ್ಗೇಶ್ ಕಿವಿ ಮಾತು

ಬೆಂಗಳೂರು: ಸಮುದಾಯ, ಸಮಾಜಕ್ಕೆ ಕೇರ್ ಮಾಡ್ಬೇಡ. ನಿನ್ನ ಮನಸ್ಸಿಗೆ ಇಚ್ಛೇ ಇದ್ಯಾ..? ಜಾತಿ ಮೀರಿ ಮದುವೆ ಆಗಿ ಎಂದು ನಟ ಜಗ್ಗೇಶ್ ಯುವ ಸಮುದಾಯಕ್ಕೆ ಕಿವಿ ಮಾತು ನೀಡಿದ್ದಾರೆ.

ಸಂದರ್ಶನ ವೊಂದರಲ್ಲಿ ಮಾತನಾಡಿದ ನಟ ಜಗ್ಗೇಶ್, ತಮ್ಮ ಬದುಕಿನಲ್ಲಿ ನಡೆದ ಘಟನೆ ಕುರಿತು ಮೆಲುಕು ಹಾಕಿದ್ದಾರೆ. ನಾವು ಜಾತ್ಯಾತೀತ.. ನಮ್ಮದು ಜಾತಿ ಮುಕ್ತ ರಾಷ್ಟ್ರ ಎಂದು ಡೋಂಗಿ ಹೊಡೆಯಬಹುದೇ ವಿನಹ ಜಾತಿ ಬಿಟ್ಟು ಬದುಕುವ ಧೈರ್ಯ ಯಾರಿಗೂ ಇಲ್ಲ. ನನಗೆ ನನ್ನ ನಿರ್ಧಾರದ ಬಗ್ಗೆ ಹೆಮ್ಮೆ ಇದೆ. ನಲವತ್ತು ವರ್ಷಗಳ ಕೆಳಗೆ ಜಾತಿ ಮೀರಿ ಮದುವೆ ಆದೆ ನಾನು. ಆದ್ರೆ ಆ ಸಮಯದಲ್ಲಿ ನನಗೆ ಬಹಳ ತೊಂದರೆ ಆಯ್ತು.. ನನ್ನ ಸಂಬಂಧಿಕರು, ನಮ್ಮ ಮನೆಯವರು ನನ್ನನ್ನು ಬಹಳ ಕೀಳಾಗಿ ನೋಡಿದರು. ಸುಮಾರು 14 ವರ್ಷಗಳ ಕಾಲ ನನ್ನನ್ನಾಗಲಿ, ನನ್ನ ಹೆಂಡತಿಯನ್ನಾಗಲಿ, ಒಬ್ಬರೂ ಕೂಡ ಹಲೋ ಹೇಳಲಿಲ್ಲ. ಒಬ್ಬರು ಕೂಡ ಮಾತನಾಡಲಿಲ್ಲ‌ . ಇಂದಿಗೂ ಕೂಡ ನನ್ನ ಹೆಂಡತಿಗೆ ನನ್ನ ಬಂಧುಗಳ ಪರಿಚಯವೇ ಇಲ್ಲ ಎಂಬ ಹೃದಯ ವಿದ್ರಾಹಕ ಘಟನೆಯನ್ನ ಮೆಲುಕು ಹಾಕಿದರು‌

ನನ್ನಾಕೆಗೆ 56 ವರ್ಷ ವಯಸ್ಸು, ನನ್ನೊಂದಿಗೆ ನಲವತ್ತು ವರ್ಷಗಳ ಕಾಲ ಜೀವಿಸಿದ್ದಾಳೆ‌. ಆದರೆ ಆಕೆಗೆ ನನ್ನ ಮನೆಯವರು ಯಾರು ಎಂಬ ಬಗ್ಗೆ ಗೊತ್ತೇ ಇಲ್ಲ. ಅವ್ಳಿಗೆ ಪರಿಚಯವೇ ಇಲ್ಲ. ನಮಗೆ ಅವಕಾಶವೇ ಕೊಡಲಿಲ್ಲ. ಇಂಥ ಕೆಟ್ಟ ಸಮಾಜದಲ್ಲಿ ನಾವು ಬದುಕ್ತಿದ್ದೇವೆ. ಅಂತರ್ ಜಾತಿ ವಿವಾಹ ಆಗೋಕು ಆಗದ ಸಮಾಜದಲ್ಲಿ ನಾವು ಬದುಕಿದ್ದೇವೆ ಎಂದರೆ ನಾಚಿಕೆ ಕೇಡು ಎಂದು ದೂರಿದರು.

ಸಮುದಾಯ, ಸಮಾಜಕ್ಕೆ ಕೇರ್ ಮಾಡ್ಬೇಡ. ನಿನ್ನ ಮನಸ್ಸಿಗೆ ಇಚ್ಛೇ ಇದ್ಯಾ..? ಜಾತಿ ಮೀರಿ ಮದುವೆ ಆಗಿ ಎಂದು ನಾನು ನನ್ನ ಮಗನಿಗೇ ಹೇಳಿದ್ದೇನೆ. ಎಲ್ಲಾ ಉಪನಿಷತ್ ಹೇಳುವುದು ನೀನು ದೇಹ ಅಲ್ಲ, ಆತ್ಮ ಎಂದು ಹೇಳುತ್ತದೆ. ಮನ್ಷ ಹುಟ್ಟುತ್ತಾ ಕೊಳಚೆ ಪ್ರದೇಶದಿಂದ ಬರ್ತಾನೆ. ತಾಯಿ ಗರ್ಭದಲ್ಲಿ ಒಂದು ಅಣುವಾಗಿ ಸೃಷ್ಟಿಯಾಗೋ ಮನ್ಷ, ಹೊರ ಬರುತ್ತಿದ್ದಂತೇ ಜಾತಿ ಸೃಷ್ಟಿಯಾಗುತ್ತೆ. ಆದ್ರೆ ನಿಮಗಾಗಿ ನೀವು ಬದ್ಕಿ ಎಂದು ಕಿವಿ ಮಾತು ಹೇಳಿದರು‌.

More News