Cauvery Water Dispute: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಮತ್ತೊಮ್ಮೆ ವಾದ ಮಂಡಿಸಲು ರಾಜ್ಯ ಸರ್ಕಾರ ನಿರ್ಧಾರ

ಬೆಂಗಳೂರು: ಹೋರಾಟಗಳಾಯ್ತು, ಬಂದ್ ಕೂಡ ಆಯ್ತು.. ಯಾವ್ದೇ ಕಾರಣಕ್ಕೂ ನೀರು ಬಿಡಬಾರ್ದು ಎಂದು ಪಟ್ಟು ಹಿಡಿದ್ರೂ ವಾಪಸ್ 3000 ಕ್ಯೂಸೆಕ್ ನೀರು ಬಿಡಲು CWRC ಆದೇಶಿದ್ದು, ಕರ್ನಾಟಕ ಕ್ಕೆ ಕಾವೇರಿ ವಿಚಾರದಲ್ಲಿ ಮತ್ತೊಮ್ಮೆ ಶಾಕ್ ಎದುರಾಗಿದೆ.

ನಾಲ್ಕು ಜಲಾಶಯಗಳ ಒಳ ಹರಿವಿನ ಪ್ರಮಾಣ 53% ಕಡಿಮೆಯಾಗಿದೆ. ರಾಜ್ಯದ 161 ತಾಲೂಕು ತೀವ್ರ ಬರಗಾಲ ಪರಿಸ್ಥಿತಿ ಎದುರಿಸುತ್ತಿದೆ. ಅದರಲ್ಲಿ 32 ತಾಲೂಕು ಕಾವೇರಿ ಜಲಾನಯನ ಭಾಗದಲ್ಲಿ ಬರುತ್ತದೆ.
ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಕರ್ನಾಟಕ ವಾದ ಮಂಡಿಸಿದರೂ, CWRC ಮುಂದಿನ 18 ದಿನಗಳ ಕಾಲ ತಮಿಳು ನಾಡಿಗೆ ನೀರು ಬಿಡಬೇಕೆಂದು ಆದೇಶ ಹೊರಡಿಸಿದೆ.

ದೆಹಲಿಯ ಕಾವೇರಿ ನೀರು ನಿಯಂತ್ರಣ ಸಮಿತಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕಕ್ಕೆ ಆದೇಶ ನೀಡಿರುವ ಸಿಡಬ್ಲ್ಯೂಆರ್‌ಸಿ ಸೆಪ್ಟೆಂಬರ್‌ 28ರಿಂದ ಅಕ್ಟೋಬರ್‌ 15ರವರೆಗೆ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ಆದೇಶ ಹೊರಡಿಸಿದೆ. ಬಿಳಿಗುಂಡ್ಲು ಜಲ ಮಾಪನ ಕೇಂದ್ರದ ಮೂಲಕ ಪ್ರತಿದಿನ 3000 ಕ್ಯೂಸೆಕ್ಸ್ ನೀರು ತಮಿಳುನಾಡಿಗೆ ಹರಿದು ಹೋಗಬೇಕು ಎಂದು ಸೂಚನೆ ನೀಡಿದೆ‌.

CWRC 3 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಪ್ರಶ್ನೆ ಮಾಡಲು ಮುಂದಾಗಿದೆ. ನಿರ್ವಹಣಾ ಪ್ರಾಧಿಕಾರದಲ್ಲಿ ಮತ್ತೊಮ್ಮೆ ವಾದ ಮಂಡಿಸಲಿದ್ದು, ನಿರ್ವಹಣಾ ಪ್ರಾಧಿಕಾರ ಕೊಡೋ ನಿರ್ಣಯವೇ ಅಂತಿಮ ಆಗಲಿದೆ.

ರಚನೆಯಾಗ್ಬೇಕಿದೆ ಸಂಕಷ್ಠ ಸೂತ್ರ..

ಕಾವೇರಿ ನೀರು ಪ್ರತೀ ಬಾರಿ ಸಂಕಷ್ಟವನ್ನೇ ಹೊತ್ತು ತರುತ್ತಿದೆ. ಹೀಗಾಗಿ ಕರ್ನಾಟಕ ಕ್ಕೆ ಪದೇ ಪದೇ ಹಿನ್ನಡೆಯಾಗ್ತಿರೋದ್ಯಾ..? ಎಂಬ ನಿಟ್ಟಿನಲ್ಲಿ ಚರ್ಚೆ ಆಗಬೇಕಿರೋ ಅಗತ್ಯ ಬಹಳ ಇದೆ. ಮುಖ್ಯವಾಗಿ ಕಾವೇರಿ ಸಮಸ್ಯೆ ಬಗೆಹರಿಸಲು ಸಂಕಷ್ಟದ ಸೂತ್ರ ರಚನೆ ಆಗ್ಬೇಕಿದೆ. ಮಳೆ ಬಂದಾಗ ನೀರು ಬಿಡೋದು ಸರಿ, ಆದ್ರೆ ಮಳೆಯೇ ಇಲ್ಲದ ಸಂದರ್ಭದಲ್ಲಿ ನೀರು ಬಿಡಬೇಕಾ..? ಬಿಟ್ಟರೆ ಎಷ್ಟು ಬಿಡಬೇಕೆಂಬ ಸಂಕಷ್ಟದ ಸೂತ್ರ ರಚಿಸಬೇಕಿದೆ. ಹೆಚ್ಚುವರಿ ನೀರು ಹರಿದು ಹೋಗದಂತೆ ತಡೆಯಲು ಮೇಕೆದಾಟು ಯೋಜನೆ ಜಾರಿ ಅಗತ್ಯ ವಿದೆ. ಕಾವೇರಿ ನೀರಿನ ಅವಲಂಬಿತ ಕಡಿಮೆ ಮಾಡಿ ಬೇರೆ ಜಲ ಮೂಲದ ಆಶ್ರಯ ಹೇಗೆ ಪಡೆಯಬಹುದೆಂಬ ಚರ್ಚೆ ಆಗ್ಬೇಕಿದೆ.

More News