ISKCON BIGGEST CHEATER: ಇಸ್ಕಾನ್ ಹಸುಗಳನ್ನು ಕಸಾಯಿಖಾನೆಗೆ ಮಾರುತ್ತಿದೆ: ಬಿಜೆಪಿ ಸಂಸದೆ ಮನೇಕಾ ಗಾಂಧಿ ಆರೋಪ – ಅಲ್ಲಗಳೆದ ಇಸ್ಕಾನ್

ನವದೆಹಲಿ: ಗೋವುಗಳನ್ನು ಸಾಕಾಣಿಕೆ ಹೆಸರಿನಲ್ಲಿ ಅವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಮೂಲಕ ದೇಶದಲ್ಲಿ ಅತೀ ದೊಡ್ಡ ವಂಚನೆಯನ್ನು ಇಸ್ಕಾನ್ ನಡೆಸುತ್ತಿದೆ ಎಂದು ಸಂಸದೆ ಮನೇಕಾ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಆದರೆ, ಮನೇಕಾ ಅವರ ಆರೋಪವನ್ನು ಅಂತರಾಷ್ಚ್ರೀಯ ಕೃಷ್ಣ ಪ್ರಜ್ಞಾ ಸಂಘ (ISKCON) ಸಂಪೂರ್ಣವಾಗಿ ತಳ್ಳಿ ಹಾಕಿದ್ದು, ಗೋ ಸಂರಕ್ಷಣೆಯಲ್ಲಿ ಇಸ್ಕಾನ್ ಜಗತ್ತಿದ ವಿವಿಧ ಭಾಗಗಳಲ್ಲಿ ಮಂಚೂಣಿ ಸ್ಥಾನ ಪಡೆದಿದೆ ಎಂದು ಸ್ಪಷ್ಟಪಡಿಸಿದೆ.

https://twitter.com/thetatvaindia/status/1706880593215054241?s=20

ಆಂಧ್ರಪ್ರದೇಶದ ಅನಂತಪುರದಲ್ಲಿರುವ ಇಸ್ಕಾನ್ ಗೋಶಾಲೆಗೆ ಇತ್ತೀಚೆಗೆ ಮನೇಕಾ ಅವರು ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅಲ್ಲಿ ಹಾಲು ನೀಡುವ ಹಸುಗಳಾಗಲಿ, ಕರುಗಳಾಗಲಿ ಇರಲಿಲ್ಲ. ಇದ್ದ ಹಸು ಮತ್ತು ಕರುಗಳನ್ನು ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಇಸ್ಕಾನ್ ಸಂಸ್ಥೆಯ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ ಅವರ ವಿಡಿಯೋವನ್ನು ದಿ ತತ್ವ ತನ್ನ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದು,. ಗೋಶಾಲೆಯಲ್ಲಿನ ಹಸು, ಕರುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡಲಾಗಿದೆ ಹಾಗೆಯೇ ಇವರು ನಡೆಸಿದಷ್ಟು ಬೇರೆ ಯಾರೂ ಈ ವರೆಗೆ ಮಾಡಿಲ್ಲ ಎಂದು ನೇರವಾಗಿ ಆರೋಪಿಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಮನೇಕಾ ಅವರ ಆರೋಪವನ್ನು ಇಸ್ಕಾನ್ ರಾಷ್ಟ್ರೀಯ ವಕ್ತಾರ ಯುದಿಷ್ಟಿರ ಗೋವಿಂದದಾಸ್ ಅವರು ಅಲ್ಲಗಳೆದಿದ್ದು, ಇದು ಸುಳ್ಳು ಮತ್ತು ಆಧಾರ ರಹಿತವಾದ ಆರೋಪವಾಗಿದೆ ಎಂದಿದ್ದಾರೆ. ಮನೇಕಾ ಅವರ ಹೇಳಿಕೆ ತಮಗೆ ಅಚ್ಚರಿ ಮೂಡಿಸಿದೆ. ಎಲ್ಲಿ ದನದ ಮಾಂಸ ಪ್ರಮುಖ ಆಹಾರವಾಗಿದೆಯೇ ಜಗತ್ತಿನ ಅಲ್ಲಿನ ಗೋ ಸಂರಕ್ಷಣಾ ಕಾರ್ಯವನ್ನು ಇಸ್ಕಾನ್ ಯಶ್ಸಸ್ವಿಯಾಗಿ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

More News