ಇಂದು ಭಾರತ – ನ್ಯೂಜಿಲ್ಯಾಂಡ್ ಪಂದ್ಯ, ಉಭಯ ತಂಡಗಳಿಗೆ ಮಾಡು ಇಲ್ಲವೆ ಮಡಿ ಕ್ರಿಕೆಟ್ ಪಂದ್ಯ

ದುಬೈ: ಟೆಂಟ್ವಿ -20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಅತಿಥೇಯ ತಂಡವಾಗಿರುವ ಭಾರತಕ್ಕೆ ಸೆಮಿಫೈನಲ್ ಪ್ರವೇಶದ ಕನಸು ಜೀವಂತವಾಗಿರಬೇಕಾದರೆ ಇಂದಿನ ನ್ಯೂಜಿಲ್ಯಾಂಡ್ ಎದುರಿನ ಪಂದ್ಯವನ್ನು ಜಯಿಸಲೇಬೇಕಾಗಿದೆ. ನ್ಯೂಜಿಲ್ಯಾಂಡ್ ತಂಡಕ್ಕೂ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಇಲ್ಲಿ ಸೋತವರಿಗೆ ನಾಲ್ಕರ ಘಟದ ಬಾಗಿಲು ಮುಚ್ಚುವ ಸಾಧ್ಯತೆಗಳಿವೆ. ಇದರ ಜತೆಯಲ್ಲಿಯೇ ವಿರಾಟ್ ಕೊಯ್ಲಿಯ ವೃತ್ತಿ ಜೀವನದ ಅತ್ಯಂತ ಕಠಿಣ ದಿನಗಳನ್ನು ಎದುರಿಸುತ್ತಿದ್ದಾರೆ.
ಉಭಯ ತಂಡಗಳು ಪಾಕಿಸ್ತಾನದ ಎದುರಿನ ಪಂದ್ಯದಲ್ಲಿ ಸೋತಿರುವುದರಿಂದ ಮುಂದಿನ ದಾರಿ ಕಠಿಣವಾಗಿದೆ. ಆದ್ದರಿಂದ ವಿರಾಟ್ ಕೊಯ್ಲಿ ಮತ್ತು ಕೇನ್ ವಿಲಿಯಮ್ಸ್ ನಡುವೆ ರೋಚಕ ಹಣಾಹಣಿ ನಡೆಯುವ ಸಾಧ್ಯತೆಗಳಿವೆ.
ಒಂದು ವೇಳೆ ಇಲ್ಲಿ ಸೋತ ತಂಡವು ಮುಂಬರುವ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಲೇ ಬೇಕಾಗಿದೆ. ಇಲ್ಲವಾದ್ದಲ್ಲಿ ಟೂರ್ನಿಯಿಂದ ಹೊರನಡೆಯಬೇಕಾಗುತ್ತದೆ. ಇದುವರೆಗೂ ನಡೆದ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಮೇಲುಗೈ ಸಾಧಿಸಿಲ್ಲ ಎಂಬುದೇ ಭಾರತ ತಂಡಕ್ಕಿರುವ ಮೈನಸ್ ಪಾಯಿಂಟ್ ಆಗಿದೆ.
ಮೊದಲ ಪಂದ್ಯದಲ್ಲಿ ಪಾಕಿಸ್ತಾನೆದೆದುರು ಸೋತಿರುವ ಭಾರತ ಈ ಪಂದ್ಯದಲ್ಲ ಭಾರೀ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಅಲ್ಲದೆ, ಪ್ರತಿಯೊಬ್ಬ ಆಟಗಾರರು ತಮ್ಮ ನೈಜ ಪ್ರತಿಭೆ ಪ್ರದರ್ಶಿಸಿದ್ದಲ್ಲಿ ಮಾತ್ರ ಮುಂದಿನ ದಾರಿ ಸುಗಮವಾಗಲಿದೆ.
ಪಾಕ್ ಎದುರಿನ ಪಂದ್ಯದಲ್ಲಿ ವಿರಾಟ್ ಕೊಯ್ಲಿ ಒಬ್ಬರೆ ಅರ್ಧ ಶತಕ ಬಾರಿಸಿದ್ದರು. ಆರಂಭಿಕ ಜೋಡಿ ರೋಹಿತ್ ಮತ್ತು ರಾಹುಲ್ ವೈಫಲ್ಯ ಅನುಭವಿಸಿದ್ದರು. ಉಳಿದಂತೆ ಹಾರ್ದಿಕ್ ಪಾಂಡ್ಯ ಲಯ ಕಂಡುಕೊಳ್ಳಬೇಕಾಗಿದೆ. ಬೌಲರ್ ಗಳು ತಮ್ಮ ನೈಜ ಪ್ರದರ್ಶನ ತೋರಿದರೆ ಗೆಲುವು ಕಾಣಬಹುದು.

More News