ಬೆಂಗಳೂರು : ಹಾಸ್ಯ ನಟ ಹಾಗೂ ರಾಜ್ಯ ಸಭೆ ಸದಸ್ಯ ಜಗ್ಗೇಶ್ ಯಾವುದೇ ಕರ್ನಾಟಕ ಬಂದ್ ನಲ್ಲಾಗಲಿ, ಬೆಂಗಳೂರು ಬಂದ್ ನಲ್ಲಾಗಲಿ ಕಾಣಿಸದೇ ಕಾವೇರಿ ನದಿ ನೀರಿನ ಹೋರಾಟದಿಂದ ದೂರವಿದ್ದಾರೆ.

ಅದೇ ರೀತಿಯಲ್ಲೂ ತೋತಾಪುರಿ -2 ಚಿತ್ರ ರಿಲೀಸ್ ಕಾರ್ಯಕ್ರಮದಲ್ಲೂ ಅವರು ಪಾಲ್ಗೊಂಡಿಲ್ಲ. ಹಾಗಾದರೆ. ಜಗ್ಗೇಶ್ ಅವರಿಗೆ ಏನಾಗಿದೆ. ಎಲ್ಲಿದ್ದಾರೆ ಎಂಬ ನೂರಾರು ಪ್ರಶ್ನೆಗಳು ಜಗ್ಗೇಶ್ ಅಭಿಮಾನಿಗಳನ್ನು ಕಾಡುತ್ತಿದೆ.
https://twitter.com/Jaggesh2/status/1707739710997832164?t=bxOd0IgsONr-VFh3Wq1O_g&s=08
ಇದಕ್ಕೆ ಇಂದು ನಟ ಜಗ್ಗೇಶ್ ಅವರು ಟ್ವೀಟ್ ನಲ್ಲಿ ಉತ್ತರ ನೀಡಿದ್ದು, ಅವರು ಆಸ್ಪತ್ರೆ ದಾಖಲಾಗಿದ್ದಾರೆ. ಅವರು ಮಾಡಿರುವ ಟ್ವೀಟ್ ನ ಸಂಪೂರ್ಣ ವಿವರ ಈ ರೀತಿಯಲ್ಲಿದೆ.

L4L5 compression ಆಗಿ ನಡೆದಾಡಲು ಕಷ್ಟವಾಗಿ ಯಾವ ಕಾರ್ಯದಲ್ಲೂ ಭಾಗಿಯಾಗಲು ಸಾಧ್ಯವಾಗಲಿಲ್ಲಾ! 2 ವಾರ pysiyo ಚಿಕಿತ್ಸೆ ಹಾಗೂ bedrest ಕಡ್ಡಾಯ ಎಂದು ಡಾ. ಸಲಹೆ ನೀಡಿದ್ದಾರೆ. ನಿಮ್ಮ ಮಾಹಿತಿಗಾಗಿ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.
L4L5 compression ಎಂದರೆ ಬೆನ್ನುಮೂಳೆಯ ಸಮಸ್ಯೆ ಅವರನ್ನು ಕಾಡುತ್ತಿತ್ತು ಎಂದು ವೈದ್ಯರು ಹೇಳಿದ್ದಾರೆ.




