ಬೆಂಗಳೂರು: ಬೆಟ್ಟಿಂಗ್, ಕ್ಯಾಸಿನೋ, ಜೂಜು ಕುದುರೆ ರೇಸಿಂಗ್, ಲಾಟರಿ, ಆನ್ ಲೈನಚ ಮನಿ ಗೇಮಿಂಗ್ ಗಳನ್ನು ಸರಕು ಮತ್ತು ಸೇವಾ ತೆರಿಗೆ ( ಜಿಎಸ್ಟಿ) ವ್ಯಾಪ್ತಿಗೆ ತರಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.
ಎಲ್ಲಾ ಬಗೆಯ ಆನ್ ಲೈನ್ ಗೇಮ್ ಗಳಿಗೆ ಶೇ ೨೮% ತೆರಿಗೆ ವಿಧಿಸಲು ಜಿಎಸ್ಟಿ ಕೌನ್ಸಿಲ್ ನಿರ್ಧಾರ ಮಾಡಿದೆ.
ಆನ್ ಲೈನ್ ಗೇಮಿಂಗ್ ಗೆ ಶೇ. 28ರಷ್ಟು ಜಿಎಸ್ಟಿ ವಿಧಿಸುವ ಸರ್ಕಾರದ ನಿರ್ಧಾರದಿಂದ ತೆರಿಗೆ ಸಂಗ್ರಹದಲ್ಲಿ ಭಾರೀ ಹೆಚ್ಚಳ ನಿರೀಕ್ಷಿಸಲಾಗಿದೆ. ಜಿಎಸ್ಟಿ ತೆರಿಗೆ ವಿಧಿಸಿದ ಬಳಿಕವೂ ಆನ್‌ಲೈನ್ ಗೇಮಿಂಗ್ ಉದ್ಯಮ ಇದೇ ವೇಗದಲ್ಲಿ ಮುಂದುವರಿದರೆ ಎಂದು ಅಂದಾಜಿಸಲಾಗಿದ್ದು, ಈ ಹಣಕಾಸು ವರ್ಷದಲ್ಲಿ 12 ಪಟ್ಟು ತೆರಿಗೆ ಸಂಗ್ರಹ ಹೆಚ್ಚಾಗಬಹುದು ಎಂದು ಸರ್ಕಾರ ಭಾವಿಸಿದೆ.
ಆಗಸ್ಟ್ ನಲ್ಲಿ ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ, ಕ್ಯಾಸಿನೋ, ಹಾರ್ಸ್ ರೇಸಿಂಗ್ನಂತೆ ಆನ್‌ಲೈನ್ ಗೇಮಿಂಗ್ಗೂ ಶೇ. 28ರಷ್ಟು ಜಿಎಸ್ಟಿ ವಿಧಿಸಲು ನಿರ್ಧರಿಸಲಾಯಿತು. ಆನ್ ಲೈನ್ ಗೇಮಿಂಗ್ ಪ್ಲಾಟ್ಫಾರ್ಮ್ಗೆ ಪಾವತಿಸಲಾಗುವ ಪ್ರವೇಶ ಶುಲ್ಕ 18% ರ ಜೊತೆಗೆ ಶೇ. 28ರಷ್ಟು ಜಿಎಸ್ಟಿ ಹಾಕಲು ಚಿಂತಿಸಲಾಗಿತ್ತು. ಇದೀಗ ಆದೇಶ ಅಧಿಕೃತವಾಗಿ ಪ್ರಕಟಗೊಂಡಿದ್ದು, ಇದೇ ಭಾನುವಾರ ಅಂದರೆ ಆಕ್ಟೋಬರ್ ೧ ರಿಂದ ಈ ಕಾಯ್ದೆ ಜಾರಿಗೆ ಬರಲಿದ್ದು, ಎಲ್ಲಾ ರಾಜ್ಯಗಳು ಜಿಎಸ್ಟಿ ಕಾಯ್ದೆಗೆ ತಿದ್ದುಪಡಿ ತರುವಂತೆ ಜಿಎಸ್ಟಿ ಮಂಡಳಿ ಸೂಚನೆ ನೀಡಿದೆ.

“ಆನ್‌ಲೈನ್ ಮತ್ತು ವಿದ್ಯುನ್ಮಾನ ಸಂಪರ್ಕ ಜಾಲದಲ್ಲಿ ಆಟವಾಡಲು ಆಹ್ವಾನಿಸುವುದೂ ಸೇರಿದಂತೆ ಎಲ್ಲ ಆನ್‌ಲೈನ್ ಗೇಮಿಂಗ್ ಚಟುವಟಿಕೆಗಳು ಇನ್ನು ಮುಂದೆ ಜಿಎಸ್‌ಟಿ ವ್ಯಾಪ್ತಿಗೆ ಬರಲಿವೆ. ಆಟವು ಕೌಶಲ ಅಥವಾ ಕಾರ್ಯಕ್ಷಮತೆಯನ್ನು ಆಧರಿಸಿರಲಿ ಅಥವಾ ಆಧರಿಸದೇ ಇರಲಿ ಎಲ್ಲವೂ ತೆರಿಗೆ ವ್ಯಾಪ್ತಿಗೆ ಬರುತ್ತವೆ. ವರ್ಚ್ಯುಯಲ್ ಡಿಜಿಟಲ್ ಕರೆನ್ಸಿಯೂ ಸೇರಿದಂತೆ ಹಣ ಅಥವಾ ಹಣದ ಮೌಲ್ಯವನ್ನು ಗೆಲ್ಲುವ ನಿರೀಕ್ಷೆಯಲ್ಲಿ ಹಣ ಅಥವಾ ಹಣದ ಮೌಲ್ಯವನ್ನು ಪಾವತಿಸಿ ಅಥವಾ ಠೇವಣಿಯಾಗಿಟ್ಟು ಆಡುವ ಆನ್‌ಲೈನ್‌ನ ಆಟಗಳು ತೆರಿಗೆ ವ್ಯಾಪ್ತಿಗೆ ಬರಲಿವೆ” ಎಂದು ಸುಗ್ರೀವಾಜ್ಞೆಯಲ್ಲಿ ತಿಳಿಸಲಾಗಿದೆ.

ಯಾವುದೆಲ್ಲಾ ಗೇಮ್ ಜಿಎಸ್ ಟಿ ವ್ಯಾಪ್ತಿಗೆ ಬರಲಿದೆ..?
ಆನ್ ಲೈನ್ ಗೇಮ್,ವಿದ್ಯುನ್ಮಾನ ಸಂಪರ್ಕದ ಮೂಲಕ ಆಟ ಆಡುವುದು, ಬೇರೆಯವರನ್ನು ಆಹ್ವಾನಿಸುವುದು,ಎಲ್ಲಾ ಬಗೆಯ ಗೇಮಿಂಗ್ ಇದರ ವ್ಯಾಪ್ತಿಗೆ ಬರಲಿದೆ. ಕೌಶಲ್ಯ ಮತ್ತು ಕಾರ್ಯಕ್ಷಮತೆ ಆಧರಿಸಿ/ ಆಧರಿಸದೆ ಇರುವ ಆಟಗಳು ಇದರ ವ್ಯಾಪ್ತಿಗೆ ಬರಲಿದೆ. ವರ್ಚುವಲ್ ಕರೆನ್ಸಿ,ಡಿಜಿಟಲ್ ಕರೆನ್ಸಿ,ಹಣ ಅಥವಾ ಹಣದ ಮೌಲ್ಯ ಗೆಲ್ಲುವ ನಿರೀಕ್ಷೆಯಲ್ಲಿ ಠೇವಣಿ,ಹೂಡಿಕೆ,ಸ್ಪರ್ಧೆಗೆ ಒಡ್ಡುವ ಹಣವೂ ಗೆ ತೆರಿಗೆ ವ್ಯಾಪ್ತಿಗೆ ಬರಲಿದೆ. ದೇಶದ ಹೊರಗಿನಿಂದ ನಡೆಸುವ ಆಟಗಳಿಗೂ ಈ ತಿದ್ದುಪಡಿ ಅನ್ವಯವಾಗಲಿದೆ.
ಇನ್ನು ಈಗಾಗಲೇ ಜಾರಿಯಲ್ಲಿರುವ ಯಾವುದೇ ಆನ್ ಲೈನ್ ಗೇಮ್, ಜೂಜು,ಬೆಟ್ಟಿಂಗ್ ನಿಷೇಧಿಸುವ ಕಾಯ್ದೆಗಳಿಗೆ ಇದು ಅಡ್ಡಿಯಾಗುವುದಿಲ್ಲ.




