ಭಾರತಕ್ಕೆ ಸತತ ಎರಡನೇ ಹೀನಾಯ ಸೋಲು, ತೂಗುಯ್ಯಾಲೆಯಲ್ಲಿ ಟೀಮ್ ಇಂಡಿಯಾ ಭವಿಷ್ಯ

ದುಬೈ : ವಿಶ್ವಕಪ್ ಟಿ-20 ಟೂರ್ನಿಯಲ್ಲಿ ಭಾರತ, ನ್ಯೂಜಿಲ್ಯಾಂಡ್ ಎದುರಿನ ಎರಡನೇ ಪಂದ್ಯದಲ್ಲೂ ಹೀನಾಯ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೋತು ಸುಣ್ಣವಾಗಿದ್ದ ವಿರಾಟ್ ಕೊಯ್ಲಿ ನೇತೃತ್ವದ ತಂಡ, ನ್ಯೂಜಿಲ್ಯಾಂಡ್ ಎದುರಿನ ಪಂದ್ಯದಲ್ಲೂ ಪರಾಭವ ಕಂಡಿದೆ.

ಟಾಸ್ ಗೆದ್ದ ನ್ಯೂಜಿಲ್ಯಾಡ್ ತಂಡ ಫೀಲ್ಡಿಂಗ್ ಅನ್ನು ಆಯ್ಕೆಕೊಂಡಿತು. ಬ್ಯಾಟಿಂಗ್ ಅನ್ನು ಆರಂಭಿಸಿದ ಭಾರತ ತಂಡ ಬ್ಯಾಟರ್ ಗಳ ಕಳಪೆ ಫಾರ್ಮನಿಂದ ಕೇವಲ 110ರನ್ ಬಾರಿಸಿ 111ರನ್ ಗಳ ಗುರಿಯನ್ನು ನೀಡಿತ್ತು. ಆರಂಭಿಕ ಬ್ಯಾಟರ್ ಗಳಾಗಿ ಕ್ರಿಸ್ ಬಂದ ಇಶಾನ್ ಕಿಶನ್ ಹಾಗೂ ಕೆ ಎಲ್ ರಾಹುಲ್ ಯಶಸ್ವಿಯಾಗಲಿಲ್ಲ. ಕೀವಿಸ್ ತಂಡಶಿಸ್ತು ಬದ್ದ ಬೌಲಿಂಗ್ ಎದುರು ಬ್ಲೂ ಬಾಯ್ಸ್ ಕ್ರಿಸ್ ನಲ್ಲಿ ಹೆಚ್ಚು ಹೊತ್ತು ನಿಲ್ಲದೇ ಪೆವೀಲಿನ್ ದಾರಿ ಹಿಡಿದರು.

ಕೇವಲ ನಾಲ್ಕು ರನ್ ಗೆ ಇಶಾನ್ ಕಿಷನ್ ಔಟ್ ಆಗಿ ಪೆವಿಲಿಯನ್ ಸೇರಿದರೆ, 18 ರನ್ ಬಾರಿಸಿ ಕೆ ಎಲ್ ರಾಹುಲ್, 14 ರನ್ ಗಳಿಸಿ ರೋಹಿತ್ ಶರ್ಮಾ, ವಿರಾಟ್ ಕೊಯ್ಲಿ  9, ರಿಷಬ್ ಪಂಥ್ 12, ಶಾರ್ದುಲ್ ಠಾಕೂರ್ ಸೊನ್ನೆಗೆ ಔಟಾದರು. ಹಾರ್ದಿಕ್ ಪಾಂಡ್ಯಾ ಮತ್ತು ರವೀಂದ್ರ ಜಡೇಜ ಸ್ವಲ್ಪ ಹೋರಾಟ ಮಾಡಿ ರನ್ 110 ಮಾಡುವಲ್ಲಿ ಯಶಸ್ವಿಯಾದರು.

ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲ್ಯಾಡ್ ತಂಡ ಕೇವಲ ಎರಡು ವಿಕೆಟ್ ಕಳೆದು ಗುರಿಯನ್ನು ಮುಟ್ಟಿತು. ಇದರಿಂದ ಟಿ-20ವಿಶ್ವಕಪ್ ನಲ್ಲಿ ಇದುವರೆಗೂ ಸೋಲು ಕಾಣದ ದಾಖಲೆಯನ್ನು ಮುಂದುವರೆಸಿದರು. ಮಾರ್ಟಿನ್ ಗುಪ್ಟಿಲ್ 20, ಡೆರಿಲ್ ಮಿಚೆಲ್ 49 ರನ್ ಬಾರಿಸಿ           ಔಟಾದರು. ಆದರೆ, ನಾಯಕ ಕೇನ್ ವಿಲಿಮ್ಸನ್ 33 ಹಾಗೂ ಡೇವಿನ್ ಕಾನವೇ 2 ರನ್ ಬಾರಿಸಿ ಜಯಗಳಿಸುವಂತೆ ಮಾಡಿದರು. ಭಾರತ ಪರವಾಗಿ ಜಸ್ಪ್ರೀತ್ ಬೂಮ್ರಾ ಎರಡು ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದರು.  

ಈ ಸೋಲಿನಿಂದ ಟೀಮ್ ಇಂಡಿಯಾದ ಟಿ-20 ವಿಶ್ವಕಪ್ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಮುಂದಿನ ಮೂರು ಪಂದ್ಯದಲ್ಲಿ ಗೆದ್ದು,ಗರಿಷ್ಠ ರನ್ ರೇಟ್ ಪಡೆಯಬೇಕು. ಹಾಗೆಯೇ ನ್ಯೂಜಿಲ್ಯಾಂಡ್ ತಂಡ ಮುಂದಿನ ಮೂರು ಪಂದ್ಯಗಳಲ್ಲಿ ಯಾವುದಾದರು ಒಂದು ಪಂದ್ಯ ಸೋಲು ಕಂಡಲ್ಲಿ ಮಾತ್ರ  ವಿಶ್ವಕಪ್ ನ ಟಾಪ್ ಫೋರ್ ಗೆ ತೆರಳಬಹುದು.

More News