ಬೆಂಗಳೂರು : ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಸರ್ಕಾರವನ್ನೇ ಉರುಳಿಸುವ ಮಾತನಾಡಿದ್ದಾರೆ. ಹಳಿ ತಪ್ಪಿದ ಕಾಂಗ್ರೆಸ್ ಸರ್ಕಾರ ಅಪಾಯದಲ್ಲಿರುವುದು ಗ್ಯಾರಂಟಿ..! ಎಂದು ಬಿಜೆಪಿ ರಾಜ್ಯ ಘಟಕ ಟ್ವೀಟ್ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಶಾಮನೂರು ಅವರು ಸಿಡಿದೇಳಲು ಕಾರಣಗಳನ್ನು ನೀಡಿದೆ. ಇದು ಲಿಂಗಾಯತ ಸಮುದಾಯದ ವಿರುದ್ಧ ಅವರು ತಾಳಿರುವ ಧೋರಣೆ ಎಂದು ಕಿಡಿಕಾರಿದೆ. ಹಾಗಾದರೆ ಬಿಜೆಪಿ ಸರ್ಕಾರವಿದ್ದಾಗ ಲಿಂಗಾಯತ ಸಮುದಾಯ ಮತ್ತು ಮುಖಂಡರನ್ನು ಸರಿಯಾಗಿ ನಡೆಸಿಕೊಂಡಿತ್ತೆ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಕಾಂಗ್ರೆಸ್ಸಿನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು @siddaramaiah ಅವರ ಸರ್ಕಾರದ ವಿರುದ್ಧ ಸಿಡಿದೇಳಲು ಕಾರಣವಾದ ಅಂಶಗಳು:
— BJP Karnataka (@BJP4Karnataka) October 4, 2023
✔️ ವೀರಶೈವ-ಲಿಂಗಾಯತ ಶಾಸಕರು, ಮಂತ್ರಿಗಳನ್ನು ಕಾಲ ಕಸದಂತೆ ಕಾಣುತ್ತಿರುವುದು..!
✔️ ವೀರಶೈವ-ಲಿಂಗಾಯತ ಅಧಿಕಾರಿಗಳನ್ನು ಮೂಲೆಗುಂಪು ಮಾಡುತ್ತಿರುವುದು..!
✔️ ಹಿರಿಯ ನಾಯಕರಿಗೆ ಸಿದ್ದರಾಮಯ್ಯ ಅವರು ಕ್ಯಾರೆ…
ಅನೇಕ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನೇ ನಡೆಸಿಕೊಂಡ ರೀತಿಯಿಂದ ಸಮುದಾಯವನ್ನು ಹೇಗೆ ನಡೆಸಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ ಎಂದು ಪ್ರತಿಕ್ರಯಿಸಿದ್ದಾರೆ. ಬಿಜೆಪಿ ರಾಜ್ಯ ಘಟಕದ ಟ್ವೀಟ್ ನ ಸಂಪೂರ್ಣ ವಿವರ ಇಲ್ಲಿದೆ.
ಕಾಂಗ್ರೆಸ್ಸಿನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು @siddaramaiah ಅವರ ಸರ್ಕಾರದ ವಿರುದ್ಧ ಸಿಡಿದೇಳಲು ಕಾರಣವಾದ ಅಂಶಗಳು:
✔️ ವೀರಶೈವ-ಲಿಂಗಾಯತ ಶಾಸಕರು, ಮಂತ್ರಿಗಳನ್ನು ಕಾಲ ಕಸದಂತೆ ಕಾಣುತ್ತಿರುವುದು..!
✔️ ವೀರಶೈವ-ಲಿಂಗಾಯತ ಅಧಿಕಾರಿಗಳನ್ನು ಮೂಲೆಗುಂಪು ಮಾಡುತ್ತಿರುವುದು..!
✔️ ಹಿರಿಯ ನಾಯಕರಿಗೆ ಸಿದ್ದರಾಮಯ್ಯ ಅವರು ಕ್ಯಾರೆ ಎನ್ನದೆ ಇರುವುದು..!
✔️ ದಶಕಗಳಿಂದಲೂ ಕಾಂಗ್ರೆಸ್ ವೀರಶೈವ-ಲಿಂಗಾಯತರನ್ನು ಮುಖ್ಯಮಂತ್ರಿ ಮಾಡದಿರುವುದು..!
✔️ ವೀರಶೈವ-ಲಿಂಗಾಯತರಿಗೆ ಸಿದ್ದರಾಮಯ್ಯರವರ ಸರ್ಕಾರ ಅವಮಾನ ಮಾಡುತ್ತಿರುವುದು..!
ಶಿವಶಂಕರಪ್ಪ ಅವರ ಎಚ್ಚರಿಕೆಯ ನಡುವೆಯೂ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರು ಲಿಂಗಾಯತರಿಗೆ ಗೌರವ ನೀಡದೆ ಅವಮಾನಿಸುವುದನ್ನು ಮುಂದುವರಿಸಿದ್ದಾರೆ. ಹೀಗಾಗಿ ಶಾಮನೂರು ಶಿವಶಂಕರಪ್ಪ ಅವರು ಸರ್ಕಾರವನ್ನೇ ಉರುಳಿಸುವ ಮಾತನಾಡಿದ್ದಾರೆ. ಹಳಿ ತಪ್ಪಿದ ಕಾಂಗ್ರೆಸ್ ಸರ್ಕಾರ ಅಪಾಯದಲ್ಲಿರುವುದು ಗ್ಯಾರಂಟಿ..! ಎಂದು ಆಕ್ರೋಶ ವ್ಯಕ್ತಪಡಿಸಿದೆ.




