Shikhar Dhawan Divorce: “ಪತ್ನಿಹಿಂಸೆ ಚಿತ್ರಹಿಂಸೆ ತಡೆಯಲಾಗ್ತಿಲ್ಲ”: ಕೋರ್ಟ್ ಮೆಟ್ಟಿಲೇರಿ ವಿಚ್ಚೇದನ ಪಡೆದ ಶಿಖರ್..!

ಬೆಂಗಳೂರು: ಭಾರತ ಕ್ರಿಕೆಟ್ ಜಗತ್ತಿನ ಗಬ್ಬರ್ ಸಿಂಗ್ ಶಿಖರ್ ಧವನ್ ಬದುಕಿನಲ್ಲಿ ನೋವಿನ ಘಟನೆಯೊಂದು ನಡೆದುಬಿಟ್ಟಿದೆ.
ಸೋಷಿಯಲ್ ಮೀಡಿಯಾದಲ್ಲಿ ಸ್ವರ್ಗಕ್ಕೆ ಕಿಚ್ಚು ಹಚ್ಚಿಸಿದಂತೆ ಬದುಕಿದ್ದ ಜೋಡಿ ನಾನೊಂದು ತೀರ ನೀನೊಂದು ತೀರ ಎಂಬಂತಾಗಿದ್ದಾರೆ.

ಕ್ರಿಕೆಟಿಗ ಶಿಖರ್ ಧವನ್‌ ಪತ್ನಿ ಆಯಿಷಾ ಮುಖರ್ಜಿಗೆ ವಿಚ್ಚೇದನ ನೀಡಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ದೆಹಲಿಯ ಪಟಿಯಾಲ ಹೌಸ್ ಕಾಂಪ್ಲೆಕ್ಸ್‌ನಲ್ಲಿರುವ ಕೌಟುಂಬಿಕ ನ್ಯಾಯಾಲಯ ಪತ್ನಿ ಆಯಿಷಾ ಮುಖರ್ಜಿ ಮಾನಸಿಕ ಕ್ರೌರ್ಯಕ್ಕೆ ಶಿಖರ್ ಧವನ್ ಒಳಪಟ್ಟಿದ್ದಾರೆ ಎಂದು ತಿಳಿಸುವ ಮೂಲಕ ವಿಚ್ಚೇದನ ಕ್ಕೆ ಜಡ್ಜ್ ಹರೀಶ್ ಕುಮಾರ್ ಒಪ್ಪಿಗೆ ಸೂಚಿಸಿದ್ದಾರೆ.

ತಮ್ಮ ಪುತ್ರನಿಂದ ವರ್ಷಗಟ್ಟಲೆ ಪ್ರತ್ಯೇಕವಾಗಿ ವಾಸಿಸುವಂತೆ ಒತ್ತಾಯಿಸಿ ಪತ್ನಿ ಆಯಿಷಾ ಧವನ್‌ನನ್ನು ಮಾನಸಿಕ ಯಾತನೆಗೆ ಒಳಪಡಿಸಿದ್ದಾಳೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ದಂಪತಿಯ ಮಗನ ಶಾಶ್ವತ ಕಸ್ಟಡಿಗೆ ಸಂಬಂಧಿಸಿದ ಯಾವುದೇ ಆದೇಶವನ್ನು ನೀಡಲು ನಿರಾಕರಿಸಿದ ನ್ಯಾಯಾಲಯವು ಧವನ್‌ಗೆ ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಸೂಕ್ತ ಅವಧಿಗೆ ತನ್ನ ಮಗನನ್ನು ಭೇಟಿ ಮಾಡಲು ಮತ್ತು ವೀಡಿಯೊ ಕರೆ ಮೂಲಕ ಅವರೊಂದಿಗೆ ಚಾಟ್ ಮಾಡಲು ಭೇಟಿ ನೀಡುವ ಹಕ್ಕುಗಳನ್ನು ನೀಡಿದೆ.

More News