Shamanur Statement: ಶಾಮನೂರು ಶಿವಶಂಕರಪ್ಪ ಅಸಮಾಧಾನ ಶಮನಕ್ಕೆ ಈಶ್ವರ್ ಖಂಡ್ರೆ ಹೆಗಲಿಗೆ

ಬೆಂಗಳೂರು: ಲಿಂಗಾಯತರನ್ನ ಕಡೆಗಣಿಸಲಾಗ್ತಿದೆ ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟಾಯ್ತು.. ಹೈಕಮಾಂಡ್ ಅಂಗಳಕ್ಕೆ ಲೆಟರ್ ಕೂಡ ಬರ್ದು ಆಯ್ತು. ಟ್ರ್ಯಾನ್ಸಫರ್ ವಿಚಾರದಲ್ಲಿ ನಮ್ಮದೇನು ನಡೆಯುತ್ತಿಲ್ಲ ಎಂದು ಶಾಸಕರು ಸಚಿವರ ವಿರುದ್ದ ಬಹಿರಂಗವಾಗಿ ಹೇಳಿಕೆ ಕೊಟ್ಟಾಯ್ತು..
ಮೂರು ಡಿಸಿಎಂ ಹುದ್ದೆ ಸೃಷ್ಟಿಸಿ ಎಂದು ಒಬ್ಬರು ಹೇಳಿದ್ರೆ, ಮೂರು ಯಾಕೆ, 6 ಸೃಷ್ಟಿಸಿ ಎಂದು ಮತ್ತೊಬ್ಬ ಕೈ ನಾಯಕರ ಹೇಳಿಕೆಯಿಂದ ಮುಜುಗರಕ್ಕೆ ಈಡಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರು, ಸಚಿವರ ನೋವಿಗೆ ಮುಲಾಮು‌ಹಾಕೋ ಕೆಲಸ ಮಾಡಿದ್ದಾರೆ.

ನಾವು ಲೋಕಸಭಾ ಚುನಾವಣೆಗೆ ಸೈ ಎಂದು ಭಾಗ್ಯಗಳ ಅಸ್ತ್ರ ಹಿಡಿದು ಹೊರಟ ಕೈ ಪಾಳಯಕ್ಕೆ ಸ್ವಪಕ್ಷ ನಾಯಕರ ಹೇಳಿಕೆಗಳೇ ಮುಜುಗರವನ್ನ ಉಂಟುಮಾಡಿದೆ. ಪಕ್ಷದ ವಿರುದ್ಧ ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡೋದ್ರಿಂದ ಮುಜುಗರಕ್ಕೆ ಈಡಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರು, ತಮ್ಮ ಕಾವೇರಿ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ನ್ನ ಆಯೋಜಿಸುವ ಮೂಲಕ ಪಕ್ಷದ ನಾಯಕರ ಅಸಮಧಾನ ಬಗೆಹರಿಸುವ ಕಸರತ್ತು ಮಾಡಿದ್ದಾರೆ.

ಲಿಂಗಾಯತ ಅಧಿಕಾರಿಗಳ ಕಡೆಗಣನೆ ವಿಚಾರ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಸರ್ಕಾರ, ಶಾಮನೂರು ಶಿವಶಂಕರಪ್ಪರನ್ನ ಸಮಾಧಾನ ಮಾಡಲು ಮುಂದಾಗಿದೆ.
ಲಿಂಗಾಯತ ಅಧಿಕಾರಿಗಳ ಕಡೆಗಣನೆ ಮಾಡಲಾಗ್ತಿದೆ ಎಂದು ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ್ದ ಶಾಮನೂರು ಶಿವಶಂಕರಪ್ಪರ ಅಸಮಾಧಾನ ಶಮನ ಮಾಡಲು ಈಶ್ವರ್ ಖಂಡ್ರೆ ಹೆಗಲಿಗೆ ವಹಿಸಲಾಗಿದೆ.

ನಿನ್ನೆ ಸಿಎಂ ನಿವಾಸ ಕಾವೇರಿಯಲ್ಲಿ ನಡೆದ ಭೋಜನ ಕೂಟದಲ್ಲಿ ಶಾಮನೂರು ಹೇಳಿಕೆ ಬಗ್ಗೆ ಸೂಕ್ತವಾಗಿ ಪ್ರತಿಕ್ರಿಯಿಸಲು ವಿಫಲರಾದ ಸಚಿವರ ಬಗ್ಗೆಯೂ ಸಿಎಂ ಬೇಸರ ವ್ಯಕ್ತಪಡಿಸಿದ್ದಾರೆ. ಬಸವರಾಜ ರಾಯರೆಡ್ಡಿ ಕರೆಸಿ ಅವರಿಂದ ಸ್ಪಷ್ಟೀಕರಣ ಕೊಡಿಸುವಂತದ್ದು ಎಷ್ಟು ಸಮಜಂಸ..? ೭ ಜನ ಲಿಂಗಾಯತ ಸಚಿವರಿದ್ದರೂ ಸೂಕ್ತವಾಗಿ, ಸಮರ್ಥವಾಗಿ ಯಾಕೆ ಉತ್ತರ ಕೊಡಲಿಲ್ಲ. ಶಾಮನೂರು ನೇರವಾಗಿ ನನಗೆ ಪೋನ್ ಮಾಡಿ/ ಭೇಟಿ ಮಾಡಿ ಮಾತನಾಡಬಹುದಿತ್ತು ಆದರೆ ಮಾಧ್ಯಮದ ಮುಂದೆ ಹೇಳಿದ್ದು ಸರ್ಕಾರದ ವರ್ಚಸ್ಸಿಗೆ ಡ್ಯಾಮೇಜ್ ಮಾಡಿದೆ ಎಂದು ಸಿಎಂ ಸಚಿವರ ಮುಂದೆ ಅವಲತ್ತುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನ, ಶಾಮನೂರು ಸೂಚಿಸಿದಂತೆ ಡಿಸಿ,ಎಸಿಗಳು, ಪೋಲೀಸ್ ವರಿಷ್ಠಾಧಿಕಾರಿ ಬದಲಾವಣೆಗೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಒಂದು ಅಥವಾ ಎರಡು ಡಿಸಿಪಿಗಳಿಗೆ ಪೋಸ್ಟ್. ರಾಜ್ಯದಲ್ಲಿ ಲಿಂಗಾಯತ ಪ್ರಾಬಲ್ಯದ ಜಿಲ್ಲೆಗಳಲ್ಲಿ ಲಿಂಗಾಯತ ಎಸ್ಪಿ/ಡಿಸಿ/ಸಿಇಓ ಬದಲಾವಣೆ ಸಹಮತ ನೀಡಿದ್ದು, ಇಂದು ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಭೇಟಿ ಮಾಡಿ, ಸಮಾಧಾನ ಮಾಡೋ ಕೆಲಸವನ್ನ ಸಚಿವ ಖಂಡ್ರೆ ಮಾಡಲಿದ್ದಾರೆ.

More News