ಬೆಂಗಳೂರು: ಭ್ರಷ್ಟರ ಕೋಟೆಗಳಿಗೆ ಲಗ್ಗೆ ಇಟ್ಟು, ಅಕ್ರಮ ಸಾಮ್ರಾಜ್ಯವನ್ನ ಭೇದಿಸುತ್ತಿರುವ ಇಡಿಗೆ ಬಿಟೌನ್ ಮಂದಿ ಸಿಕ್ಕಿ ಬಿದ್ದಿದ್ದಾರೆ. ತೆರೆ ಮೇಲೆ ಬಂದು ಜನರಿಗೆ ಮೋಡಿ ಮಾಡಿ ಹೋಗ್ತಿದ್ದ ಮಂದಿ ಹಿಂದೆ ದೊಡ್ಡದೊಂದು ಅಕ್ರಮ ಸಾಮ್ರಾಜ್ಯವೇ ಮುಳುಗಿದೆ ಎಂಬ ಶಂಕೆ ಇಡಿಗೆ ಸಿಕ್ಕಿದೆ.
ಛತ್ತೀಸ್ಗಢ ಮತ್ತು ದುಬೈನಿಂದ ನಡೆಯುತ್ತಿರುವ ಕೋಟ್ಯಂತರ ಮೌಲ್ಯದ ಅಕ್ರಮ ಬೆಟ್ಟಿಂಗ್ ಕೇಸ್ನ ಜಾಡು ಹಿಡಿದು ಹೊರಟ ಇ.ಡಿ ಗೆ ಬಿಟೌನ್ ಮಂದಿ ಸಿಕ್ಕಿಬಿದ್ದಿದ್ದಾರೆ. ಆ್ಯಪ್ ವಂಚಕ ಸೌರಭ್ ಚಂದ್ರಕರ್ ನ ದುಬೈನಲ್ಲಿ ನಡೆದ ಅದ್ಧೂರಿ ವಿವಾಹದಲ್ಲಿ ಪೋಸ್ ಕೊಟ್ಟಿದ್ದ ಸಾಲು ಸಾಲು ಬಿಟೌನ್ ನಟ-ನಟಿಯಗೆ ಇ.ಡಿ ಸಂಕಷ್ಠ ಶುರುವಿದ್ದಿದೆ.
ಮಹದೇವ್ ಆನ್ಲೈನ್ ಬೆಟ್ಟಿಂಗ್ ಪ್ರಕರಣದಲ್ಲಿ ರಾಯಪುರ, ಭೋಪಾಲ್, ಮುಂಬೈ, ಕೋಲ್ಕತ್ತಾ ಸೇರಿದಂತೆ 39 ಕಡೆ ರೇಡ್ ಮಾಡಿದ ಅಧಿಕಾರಿಗಳು ಕೋಟ್ಯಾಂತರ ರೂ ಮೊತ್ತದ ದಾಖಲೆಗಳನ್ನ ವಶಕ್ಕೆ ಪಡೆದಿದ್ದರು. ತನಿಖೆ ವೇಳೆ ಇದರ ಜಾಡು ದೊಡ್ಡದಿದೆ ಎಂದರಿತ ಈಡಿ ಅಧಿಕಾರಿಗಳು ಇಷ್ಟಕ್ಕೆ ಸುಮ್ಮನಾಗದೆ ಬೆಟ್ಟಿಂಗ್ ಆ್ಯಪ್ ವಂಚಕ ಸೌರಭ್ ಚಂದ್ರಕರ್ ಮೇಲೊಂದು ಕಣ್ಣಿಟ್ಟಿತ್ತು. ಇದೇ ವೇಳೆ ೨೦೦ ಕೋಟಿ ರೂ ಮೊತ್ತದಲ್ಲಿ ಅದ್ದೂರಿಯಾಗಿ ನಡೆದ ವಿವಾಹದಲ್ಲಿ ೩೦ ಕ್ಕೂ ಹೆಚ್ಚು ಬಿಟೌನ್ ನಟ ನಟಿಯರಿಗೆ ರಾಜಾಥಿತ್ಯಾ ನೀಡಿದ್ದು, ಇಡಿ ಕಣ್ಣಿಗೆ ಬಿದ್ದಿದೆ.

ಮಹದೇವ್ ಬೆಟ್ಟಿಂಗ್ ಆ್ಯಪ್ನ ದಂಧೆಯಲ್ಲಿ ಪಡೆದ ಹಣದಲ್ಲಿ ಬಾಲಿವುಡ್ ಸ್ಟಾರ್ಸ್ಗೆ ದುಬಾರಿ ಗಿಫ್ಟ್ಗಳನ್ನ ವಂಚಕ ಸೌರಭ್ ಚಂದ್ರಕರ್ ನೀಡಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಲಭ್ಯವಾಗಿದೆ. ಇದಷ್ಟೇ ಅಲ್ಲದೇ, ಹಲವಾರು ಗಾಯಕರು, ಬಾಲಿವುಡ್ನ ನಂಟಿರೋ ವ್ಯಕ್ತಿಗಳು ಸೌರಭ್ನ ಜಾಲದಲ್ಲಿ ಮುಳುಗಿರೋ ಬಗ್ಗೆ ಮಾಹಿತಿ ತನಿಖೆಯಲ್ಲಿ ತಿಳಿದುಬಂದ ಬೆನ್ನಲ್ಲೇ ಐದು ಮಂದಿ ಬಾಲಿವುಡ್ ತಾರೆಯರಿಗೆ ಸಮನ್ಸ್ ನೀಡಿತ್ತು. ಇದೀಗ ಇಡಿ ಮತ್ತಷ್ಟು ಸ್ಟಾರ್ಗಳಿಗೆ ಶಾಕ್ ನೀಡಲು ಸಜ್ಜಾಗಿದೆ. ಇ.ಡಿ ಬಾಲಿವುಡ್ ನಟ ರಣಬೀರ್ ಕಪೂರ್ಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಇದರ ಬೆನ್ನಲ್ಲೇ ಬೆಟ್ಟಿಂಗ್ ಆ್ಯಪ್ ಕೇಸ್ನಲ್ಲಿ ಕಪಿಲ್ ಶರ್ಮಾ, ನಟಿಯರಾದ ಶ್ರದ್ಧಾ ಕಪೂರ್, ಹುಮಾ ಖುರೇಶಿ, ಹಿನಾ ಖಾನ್ಗೆ ಇ.ಡಿ ಸಮನ್ಸ್ ಜಾರಿ ಮಾಡಿತ್ತು.
ಇದೀಗ ಮತ್ತಷ್ಟು ನಟ ನಟಿಯರ ಲಿಸ್ಟ್ ನ್ನ ತಯಾರಿಸಿರುವ ಇಡಿ, ೩೦ ಕ್ಕೂ ಹೆಚ್ಚು ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಂಜಯ್ ದತ್, ಟೈಗರ್ ಶ್ರಾಫ್, ಸೋನು ಸೂದ್, ಸುನಿಲ್ ಶೆಟ್ಟಿ, ಸನ್ನಿಲಿಯೋನ್, ನೋರಾ ಫತೇಹಿ, ಡೈಸಿ ಶಾ, ಊರ್ವಶಿ ರೌಟೇಲಾ, ನರ್ಗಿಸ್ ಫಕ್ರಿ, ಮಲೈಕಾ ಅರೋರಾ, ಸಾರಾ ಅಲಿ ಖಾನ್, ಸುಖವಿಂದರ್ ಸಿಂಗ್, ಶಮಿತಾ ಶೆಟ್ಟಿ, ನೇಹಾ ಶರ್ಮಾ, ಇಶಿತಾ ರಾಜ್, ಸೋನಾಲಿ ಸೆಹಗಲ್ ಗೆ ನೋಟಿಸ್ ನೀಡಲು ಸಜ್ಜಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.




