Bigg Boss Kannada: ಕಾಮಿಡಿ ಕಿಲಾಡಿ ಖ್ಯಾತಿಯ ತುಕಾಲಿ ಸಂತೋಷ್ ಬಿಗ್ ಬಾಸ್ ಸ್ಪರ್ಧಿ

ಬೆಂಗಳೂರು: ಡಿಫರೆಂಟ್ ಆಗಬೇಕು ಎಂಬ ಹಂಬಲದಲ್ಲಿ ‘ತುಕಾಲಿ’ ಎಂಬುದನ್ನು ತಮ್ಮ ಹೆಸರಿಗೇ ಅಂಟಿಸಿಕೊಂಡಿರುವ ಸಂತೋಷ್‌ ಅವರು ಬಿಗ್‌ಬಾಸ್‌ ಮನೆಯೊಳಗೆ ಸಂತೋಷದ ನಗುವನ್ನು ಹರಡುವ ಆಸೆಯಿಂದ ಹೊರಡುತ್ತಿದ್ದಾರೆ. ತುಕಾಲಿ ಎಂಬ ಬೈಗುಳವನ್ನು ಹೆಮ್ಮೆಯಿಂದ ಸ್ವೀಕರಿಸುವ ಸಂತೋಷ್‌ ಅವರು ಹೆಂಡತಿಯನ್ನು ಬಿಟ್ಟು, ಸಿಂಗಲ್ ಆಗಿ ಮನೆಯೊಳಗೆ ಕಾಲಕಳೆಯುವ ಹಂಬಲದಿಂದ ಬಂದಿದ್ದರು. ಗಂಡ-ಹೆಂಡತಿ ಇಬ್ಬರ ಕಾಲೆಳೆಯುವ ಖುಷಿಯನ್ನು ನೋಡಲು ಕಿಚ್ಚ ಆಸೆಪಟ್ಟರು. ಅದಕ್ಕೂ ಜನತಾ ವೋಟಿಂಗ್ ಅನ್ನು ಅಪೇಕ್ಷಿಸಿದ ಕಿಚ್ಚ ಅವರ ಊಹೆಯಂತೆ ಜನರೂ ಸಂತೋಷ್ ದಂಪತಿ ಒಟ್ಟಿಗೆ ಮನೆಯೊಳಗೆ ಹೋಗಬೇಕು ಎಂದು ಆಸೆಪಟ್ಟರು. ಇದಕ್ಕೆ ಪ್ಯಾನಲಿಸ್ಟ್‌ ಕೂಡ ಅನುಮೋದನೆ ಕೊಟ್ಟರು.
ಸ್ಟೇಜ್‌ ಮೇಲೆಯೇ ಕಿಚ್ಚ ಕೊಟ್ಟ ಟಾಸ್ಕ್‌ನಲ್ಲಿ ಗೆದ್ದ ಸಂತೋಷ್, ಹೆಂಡತಿಯನ್ನು ಹೊರಗಡೆಯೇ ಬಿಟ್ಟು ಮನೆಯೊಳಗೆ ಹೋಗುತ್ತಿದ್ದಾರೆ. ಇದುವರೆಗಿನ ಸ್ಪರ್ಧಿಗಳಲ್ಲಿ ಜನರಿಂದ ಅತಿ ಹೆಚ್ಚು ಅಂದರೆ, 93% ಪಡೆದು, ಹೆಂಡತಿಯಿಂದ ಬೀಳ್ಕೊಟ್ಟು ಮನೆಯೊಳಗೆ ಅಡಿಯಿಟ್ಟಿದ್ದಾರೆ. ಮನೆಯೊಳಗೆ ನಗೆಹೊನಲನ್ನು ಹರಿಸಲು ಸಂತೋಷ್‌ ರೆಡಿಯಾಗಿದ್ದಾರೆ.

More News