ಬೆಂಗಳೂರು: ಹಾವುಗಳ ಜೊತೆ ಸರಸವಾಡುವುದನ್ನೇ ವೃತ್ತಿ-ಪ್ರವೃತ್ತಿಯನ್ನಗಿಸಿಕೊಂಡಿರುವ ಸ್ನೇಕ್ ಶ್ಯಾಮ್ ತಮ್ಮ ವಿಶಿಷ್ಟ ಕಾಸ್ಟ್ಯೂಮ್‌ನಿಂದಲೇ ಜನರ ಗಮನ ಸೆಳೆಯುತ್ತಾರೆ.
‘ಡಿಫರೆಂಟ್ ಆಗಿದ್ದರೆ ಮಾತ್ರ ಜನ ಗುರ್ತಿಸುವುದು’ ಎನ್ನುವ ಶ್ಯಾಮ್ ತಮ್ಮ ಪ್ರಸಿದ್ಧಿಗೆ ಆ ಶಿವಪ್ಪನ ಕತ್ತಲ್ಲಿರುವ ಹಾವೇ ಕಾರಣ ಎನ್ನುತ್ತಾರೆ. ವಿಷದ ಹಾವು ಹಿಡಿಯುತ್ತಲೇ ಜನರಲ್ಲಿ ಸಂತೋಷದ ನಗು ಉಕ್ಕಿಸುವ ಹವ್ಯಾಸವಾಗಿಸಿಕೊಂಡಿರುವ ಶ್ಯಾಮ್‌ಗೆ ಸೆಲೆಬ್ರಿಟಿ ಆಗುವುದಕ್ಕಿಂತ ಜನರ ಸ್ನೇಹಿತರಾಗಿ ಇರುವುದೇ ಇಷ್ಟ.
ಆಟೊ ಓಡಿಸುವವನ ಮಗನಾಗಿ ಬೆಳೆದ ಶ್ಯಾಮ್‌ಗೆ ಹಸುಗಳನ್ನು ಅಕ್ಕರೆಯಿಂದ ಸಾಕುವವರು. ಅದೃಷ್ಟ ಒಮ್ಮೆ ಮಾತ್ರ ಬಾಗಿಲು ತಟ್ಟುವುದು. ನಾವು ಬಾಗಿಲು ತೆರೆಯದಿದ್ದರೆ ಪಕ್ಕದ ಮನೆಗೆ ಹೋಗಿಬಿಡುತ್ತದೆ ಎಂದು ತಮಾಷೆಯಗಿಯೇ ಹೇಳುವ ಸ್ನೇಕ್ ಶ್ಯಾಮ್, ‘ನಗಿಸುವುದು ನನ್ನ ಧರ್ಮ; ನಗುವುದು ಬಿಡುವುದು ಅವರ ಕರ್ಮ’ ಎನ್ನುತ್ತಾರೆ.
ಚಿಕ್ಕಂದಿನಲ್ಲಿ ‘ನಾಯಿ ಶ್ಯಾಮ’ನಾಗಿದ್ದ ಅವರು ಸ್ನೇಕ್ ಶ್ಯಾಮ್ ಆಗಿದ್ದೇ ಒಂದು ಸ್ಫೂರ್ತಿದಾಯಕ ಕಥನ. ‘ನಿಜವಾದ ದೇವರು ಇರುವುದು ಗುಡಿಯಲ್ಲಲ್ಲ, ನಮ್ಮ ಸಮಾಜವನ್ನು ಸ್ವಚ್ಛಮಾಡುವ ಪೌರಕಾರ್ಮಿಕರು ದೇವರು’ ಎನ್ನುವ ಸ್ನೇಕ್ ನಾಗ ಆಕಸ್ಮಿಕವಾಗಿ ಕಂಡ ಹಾವನ್ನು ರಕ್ಷಿಸಿ ಬಿಟ್ಟವರು. ನಂತರ ಅದೇ ಹವ್ಯಾಸವಾಗಿತ್ತು.
1998ರಿಂದ ಇಲ್ಲಿಯವರೆಗೆ ಸುಮಾರು 58000 ಹಾವುಗಳನ್ನು ಹಿಡಿದಿರುವ ಸ್ನೇಕ್ ಶ್ಯಾಮ್ ಅವರಿಗೆ ಜನರು 86% ವೋಟ್ ಹಾಕಿ ಮನೆಯೊಳಗೆ ಕಳಿಸಿದ್ದಾರೆ.




