ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು 1800 ಮಕ್ಕಳ ವಿದ್ಯಾಭ್ಯಾಸ ವೆಚ್ಚವನ್ನು ಭರಿಸುತ್ತಿದ್ದರು. ಅವರ ನಿಧನದ ನಂತರ ಈಮಕ್ಕಳ ಭವಿಷ್ಯ ಎಲ್ಲಿಮಂಕಾಗಿ ಬಿಡುತ್ತದೆಯೋ ಎಂದು ಅನೇಕರು ಭಾವಿಸಿದ್ದರು. ಆದರೆ, ಹಾಗಾಗಲಿಲ್ಲ.
ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ಅವರು ಈ ವಿದ್ಯಾಭ್ಯಾಸವನ್ನು ಸಂಪೂರ್ಣ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ಮತ್ತೆ ಆ ಮಕ್ಕಳ ವಿದ್ಯಾಭ್ಯಾಸ ಈ ಹಿಂದಿನಂತೆ ಮುಂದುವರೆಯಲಿದೆ.

ವಿಶಾಲ್ ಅಭಿನಯದ ಬಹುನಿರೀಕ್ಷಿತ ಎನಿಮಿ ಚಿತ್ರದ ಬಿಡುಗಡೆಯ ಪೂರ್ವ ಸಮಾರಂಭದಲ್ಲಿ ಪುನೀತ್ ಗೆ ಗೌರವ ಸಲ್ಲಿಸಿ ಅವರು ಮಾತನಾಡಿ, ಅವರು ನೋಡಿಕೊಳ್ಳುತ್ತಿದ್ದ ವಿದ್ಯಾಭ್ಯಾಸವನ್ನು ಮುಂದುವರೆಸಲು ತಗುಲುವ ವೆಚ್ಚವನ್ನು ತಾವು ಭರಿಸುವುದಾಗಿ ತಿಳಿಸಿದ್ದಾರೆ.
ಇದು ನನ್ನ ಮತ್ತು ಪುನೀತ್ ನಡುವಿನ ಸ್ನೇಹ ಸಂಬಂಧಕ್ಕೆ ಕೊಡುತ್ತಿರುವ ಗೌರವ ಎಂದು ವಿಶಾಲ್ ಹೇಳಿದ್ದಾರೆ. ವಿಶಾಲ್ ಅವರ ಈ ಘೋಷಣೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.




