Bigg Boss Season 10: ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಖ್ಯಾತ ಪತ್ರಕರ್ತ ಗೌರೀಶ ಅಕ್ಕಿ

ಕೊಪ್ಪಳ ಜಿಲ್ಲೆಯ ಮುಧೋಳ ಮೂಲದ ಗೌರೀಶ್ ಅಕ್ಕಿ ಮೊದಲು ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದರು. ಬಳಿಕ ಮಾಧ್ಯಮ ಲೋಕಕ್ಕೆ ಎಂಟ್ರಿಕೊಟ್ಟರು. ವರ್ಷಗಳ ಕಾಲ ಸುದ್ದಿವಾಹಿನಿಗಳಲ್ಲಿ ಕೆಲಸ ಮಾಡಿದ ಗೌರೀಶ್ ಅಕ್ಕಿ ಆನಂತರ ಡೈರೆಕ್ಟರ್ ಕ್ಯಾಪ್ ತೊಟ್ಟರು. 2016ರಲ್ಲಿ ತೆರೆಗೆ ಬಂದ ‘ಸಿನಿಮಾ ಮೈ ಡಾರ್ಲಿಂಗ್’ ಚಿತ್ರವನ್ನ ಗೌರೀಶ್ ಅಕ್ಕಿ ನಿರ್ದೇಶಿಸಿದರು. ‘ಕೆಂಗುಲಾಬಿ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು. ‘ಚಾರ್ಮಿನಾರ್’, ‘ಲೂಸಿಯಾ’, ‘ಸಿಪಾಯಿ’, ‘3000’ ಮುಂತಾದ ಚಿತ್ರಗಳಲ್ಲಿ ಗೌರೀಶ್ ಅಕ್ಕಿ ಕಾಣಿಸಿಕೊಂಡಿದ್ದಾರೆ. ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಆಲ್ಮಾ ಮೀಡಿಯಾ ಸ್ಕೂಲ್ ನಡೆಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ತಮ್ಮದೇ ಯೂಟ್ಯೂಬ್‌ ವಾಹಿನಿ ಮೂಲಕ ವಿಶೇಷ ವಿಡಿಯೊಗಳನ್ನ ಗೌರೀಶ್ ಅಕ್ಕಿ ತಯಾರಿಸುತ್ತಿದ್ದಾರೆ. 

ಬಿಗ್‌ಬಾಸ್‌ ಅರ್ಥ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಬಂದಿದ್ದಾರೆ ಗೌರೀಶ ಅಕ್ಕಿ. ‘ಪಬ್ಲಿಕ್ ಲೈಫ್ ಮತ್ತು ಪರ್ಸನಲ್ ಲೈಫ್‌ಗಳ ನಡುವಿನ ಗೆರೆ ಬ್ಲರ್ ಆಗುವುದು ಬಿಗ್‌ಬಾಸ್‌ ಮನೆಯಲ್ಲಿ. ನನ್ನೊಳಗೆ ನಿಜವಾಗಲೂ ಹೇಗಿದ್ದೇನೋ ಅದು ಬಿಗ್‌ಬಾಸ್‌ ಮನೆಯಲ್ಲಿ ಹೊರಗೆ ಬರುತ್ತದೆ. ನನ್ನನ್ನು ನಾನು ಅರ್ಥಮಾಡಿಕೊಳ್ಳಲಿಕ್ಕೆ ಮತ್ತು ಜನರನ್ನು ಅರ್ಥಮಾಡಿಕೊಳ್ಳಲಿಕ್ಕೆ ಬಿಗ್‌ಬಾಸ್‌ ಮನೆಗಿಂತ ಒಳ್ಳೆಯ ವೇದಿಕೆ ಯಾವುದಿದೆ?’ ಎಂದು ಪ್ರಶ್ನಿಸುವ ಗೌರೀಶ ಅಕ್ಕಿ, ಮನೆಯೊಳಗಿನ ವಿಮರ್ಶೆಗಳಿಗೆ ಮಾನಸಿಕವಾಗಿ ಸಿದ್ಧರಾಗಿಯೇ ಇದ್ದಾರೆ.
‘ಒಂದು ತಿಂಗಳು ಮನೆಯೊಳಗಿದ್ದು ಬಿಗ್‌ಬಾಸ್‌ ಶೋ ದ ಎಸೆನ್ಸ್ ಅರ್ಥ ಮಾಡಿಕೊಳ್ಳಬೇಕು’ ಎನ್ನುವ ಆಸೆಯನ್ನು ಹೊತ್ತುಬಂದಿರುವ ಗೌರಿಶ ಅಕ್ಕಿ ಅವರಿಗೆ ಜನರು 82%ವೋಟ್ ಮಾಡಿ ಮನೆಯೊಳಗೆ ಕಳಿಸಿದ್ದಾರೆ.

More News