BIGG BOSS: ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ನೈಜೀರಿಯನ್ ಕನ್ನಡಿಗ ಮೈಖಲ್ ಅಜಯ್

ಬೆಂಗಳೂರು: ಕೂಲ್ ಹೇರ್‌ಸ್ಟೈಲ್‌ನಿಂದಲೇ ಗಮನಸೆಳೆದ ಮೈಖಲ್ ಅಜಯ್‌ಗೆ ರಿಯಾಲಿಟಿ ಶೋದಲ್ಲಿ ಪಾಲ್ಗೊಳ್ಳುವ ಆಸೆ. ನಾಲ್ಕು ವರ್ಷಗಳಿಂದ ಹೇರ್‌ ಸ್ಟೈಲ್ ಬೆಳೆಸುತ್ತಿರುವ ಅಜಯ್‌ ಸ್ನಾನಕ್ಕೆ ನಿಂತರೆ ತಲೆಕೂದಲು ನೆನೆಯಲಿಕ್ಕೆ ಅರ್ಧಗಂಟೆ ಬೇಕಂತೆ!
‘ನೋಡೊದಕ್ಕೆ ವಿಲನ್ ಥರ ಇದ್ದೀನಿ. ಆದ್ರೆ ನಾನು ಒಳ್ಳೆ ಹುಡುಗ’ ಎಂದು ನಗುವ ಅಜಯ್, ‘ಬರೀ ಪಾಸಿಟಿವ್ ಆಗಿದ್ರೆ ಚೆನ್ನಾಗಿರಲ್ಲ, ಸ್ವಲ್ಪ ನೆಗೆಟಿವ್ ಕೂಡ ಇರಬೇಕು’ ಎನ್ನುತ್ತಾರೆ. ಬಾಸ್ಕೆಟ್‌ಬಾಲ್‌ನಿಂದ ಫಿಟ್‌ನೆಸ್‌ ಹವ್ಯಾಸಕ್ಕೆ, ಅಲ್ಲಿಂದ ಮಾಡಲಿಂಗ್ ಕ್ಷೇತ್ರಕ್ಕೆ ಜಿಗಿದಿರುವ ಅಜಯ್ ಅವರು ಈಗ ಬರ್ಗರ್ ಶಾಪ್ ನಡೆಸುತ್ತಿದ್ದಾರೆ. ‘ಕನ್ನಡ ಇಂಡಸ್ಟ್ರಿಯಲ್ಲಿ ವಿಲನ್ ರೋಲ್ ಸಿಕ್ತು ಅಂದ್ರೆ ಚೆನ್ನಾಗಿರತ್ತೆ’ ಎನ್ನುವ ಅಜಯ್ ಬದುಕನ್ನು ಎಂದಿಗೂ ದೂಷಿಸುವುದಿಲ್ಲ ಎನ್ನುತ್ತಾರೆ.
‘ಹೀರೊ ನೋಡಿದ್ರೆ ಅನ್‌ರಿಯಲಿಸ್ಟಿಕ್ ಫೀಲ್ ಬರುತ್ತದೆ; ವಿಲನ್ ರೋಲ್ ರಿಯಲಿಸ್ಟಿಕ್ ಆಗಿರುತ್ತದೆ’ ಎಂಬುದು ಅಜಯ್‌ ಅಂಬೋಣ.
‘ನನ್ನನ್ನು ಮನೆಯೊಳಗೆ ಕಳಿಸಿದರೆ ಜನರಿಗೆ ನನ್ನಿಂದ ಒಂದು ಯೂನಿಕ್ ಕನ್ನಡ ಸಿಗುತ್ತದೆ’ ಎಂಬ ಅಜಯ್ ಮನವಿಗೆ 81% ವೋಟ್ ಮಾಡಿ ಮನೆಯೊಳಗೆ ಕಳಿಸಿದ್ದಾರೆ.

More News