BJP-JDS Alliance: ಕಾಂಗ್ರೆಸ್ ಶಿವಸೇನೆ ಮೈತ್ರಿ‌‌ ಓಕೆ, ಬಿಜೆಪಿ – ಜೆಡಿಎಸ್ ಬೇಡ ಏಕೆ? ಜಫ್ರುಲ್ಲಾ ಖಾನ್

ಬೆಂಗಳೂರು: ಭಿನ್ನ ಸಿದ್ದಾಂತದ ಕಾಂಗ್ರೆಸ್ ಹಾಗೂ ಶಿವಸೇನೆ ಜೊತೆಗೆ ಮೈತ್ರಿ‌‌ಯಾದರೆ ಅದು ಓಕೆ. ಆದರೆ ಬಿಜೆಪಿ – ಜೆಡಿಎಸ್ ನಡುವೆ ಮೈತ್ರಿ ಬೇಡ ಏಕೆ? ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ಪ್ರಶ್ನಿಸಿದರು.

ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಜೆಪಿ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮತನಾಡಿದ ಅವರು,‌ದೇವೇಗೌಡರು ನನ್ನನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ.‌ಅಂದೇ ಪ್ರಮಾಣ ಮಾಡಿದ್ದೇನೆ, ನಾನು ಪಕ್ಷಕ್ಕೆ ನಿಷ್ಠೆ ಯಿಂದ ಇರ್ತೀನಿ ಎಂದು ಹೇಳಿದರು.

ನಾನು ಕಪ್ಪೆ ತರ ನಾನು ಹಾರಾಟ ಮಾಡಿಲ್ಲ. ಅಧಿಕಾರ ಪಡೆಯಲು ಯಾರು ನನ್ನ ಹಣೆಬರಹ ಬರೆದಿಲ್ಲ.

ನಾನು ಸಾಮಾನ್ಯ ಕುಟುಂಬದಿಂದ ಬಂದವನು. ನಾನು ಅಧಿಕಾರಕ್ಕೆ ಬಂದರೆ ಜನರಿಗೆ ಅನುಕೂಲ ಮಾಡಬೇಕು. ನಾವು ಮೈತ್ರಿ ಸಾವಿರಾರು ಜನರ ಬಳಿ ಮಾಡಿಕೊಳ್ಳಬಹುದು.ಆದರೆ ಸಿದ್ದಾಂತ ಯಾವುದೇ ಕಾರಣಕ್ಕೂ ಬಿಟ್ಟಿಲ್ಲ ಎಂದರು.

ಅಸಮಾಧಾನ ಆಗಿರುವವರನ್ನು ಸಮಾಧಾನ ಮಾಡೋ ಕೆಲಸ ಮಾಡ್ತೀನಿ. ಗಡಿಯಾರದ ಮುಳ್ಳು 12 ಕ್ಕೆ ಬಂದು ಸೇರಿದ್ರೆ ಸಮಯ ಮುಗಿದೋಯ್ತು ಅಂತಲ್ಲ. ಒಂದಿಷ್ಟು ಜನರಿಗೆ ಅಸಮಾಧಾನ ಇರಬಹುದು.‌ಗ್ಯಾರಂಟಿ ಮೇಲೆ ಅವರು ಮತ ಪಡೆದಿದ್ದಾರೆ ಅಷ್ಟೇ ಎಂದು ಕಾಂಗ್ರೆಸ್ ವಿರುದ್ಧ ತಿರುಗೇಟು ನೀಡಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ‌
ಇಬ್ರಾಹಿಂ ಅಸಮಾಧಾನ ವಿಚಾರವಾಗಿ, ಅವರು ವಿಷಕಂಠನಾಗಿ ಕೆಲಸ ಮಾಡಿದ್ದರೆ, ಪಕ್ಷದ ಎಲ್ಲಾ ವಿಚಾರ ಅವರಿಗೆ ಗೊತ್ತಿರಬೇಕಿತ್ತು. ಅವರು ಯಾವ ರೀತಿ ಕೆಲಸ ಮಾಡಿದ್ದಾರೆ ಗೊತ್ತಾಗಬೇಕು.‌ಸೆಕ್ಯುಲರ್ ಅಂತ ಕಾಂಗ್ರೆಸ್ ಬಡ್ಕೊಳ್ಳುತ್ತಲ್ಲಾ,‌ ಶಿವಸೇನೆಯಿಂದ ಮೈತ್ರಿ ಕಿತ್ತಾಕಿ ಹಾಗಾದ್ರೆ ಎಂದು ಸವಾಲು ಹಾಕಿದರು.

ನಮ್ಮ ಬಗ್ಗೆ ತಪ್ಪು ಅಂತ ಹೇಳೋಕೆ ಏನಿದೆ? ಅಷ್ಟು ಇರೋವವರು ಮೊದಲು ಶಿವಸೇನೆಯಿಂದ ಮೈತ್ರಿಯಿಂದ ಹೊರ ಬನ್ನಿ ಎಂದು ಸವಾಲು ಹಾಕಿದರು.

More News