ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಬಹುಶಃ ಬಿಜೆಪಿ ರಾಷ್ಟ್ರೀಯ ನಾಯಕರ ಬಳಿ ಅದೇ ಮಾತಾಡಿಕೊಂಡು ಬಂದಿರಬೇಕು ಎಂದ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ತಿಹಾರ್ ಜೈಲಿಗೆ ಹೋಗಲಿದ್ದಾರೆ ಎಂದು ಎರಡು ದಿನಗಳ ಹಿಂದೆಯಷ್ಟೇ ಹೇಳಿಕೆ ನೀಡಿದ್ದರು. ಈ ಸಂಬಂಧ ಕಾಂಗ್ರೆಸ್ ಮುಖಂಡರು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ,
ರಾಜ್ಯದಲ್ಲಿ ಜಾತಿಗಣತಿ ಮಾಡಬೇಕು, ಮಾಡಬಾರದು ಎಂಬ ಚರ್ಚೆ ಇದೆ, ಅಧಿಕೃತವಾಗಿ ಸಿಎಂ ಹಾಗೂ ಸಂಬಂಧಪಟ್ಟ ಇಲಾಖೆ ಸಚಿವರಿಂದ ಹೇಳಿಕೆ ಬಂದಿಲ್ಲ, ನೋಡೋಣ ಅದರ ಬಗ್ಗೆ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯಲ್ಲಿ ಮೈತ್ರಿ ವಿಚಾರದಲ್ಲಿ ಗೊಂದಲ
ಬಿಜೆಪಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡ ನಂತರ ರಾಜ್ಯದಲ್ಲಿ ಉಂಟಾಗಿರುವ ಗೊಂದಲ ಸಂಬಂಧ ಪ್ರತಿಕ್ರಿಯೆ ನೀಡಿದ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ಮೊದಲಿಗೆ ಆ ಪಕ್ಷದ ಬಗ್ಗೆ ಚರ್ಚೆ ಮಾಡುವುದು ನ್ಯಾಯ ಸಮ್ಮತ ಅಲ್ಲ, ನಾವು ಆ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇವೆ ಎಂದರು.

ಬಿಜೆಪಿ ಸ್ಥಿತಿಗತಿಯನ್ನು ಜನರು ನೋಡುತ್ತಾ ಇದ್ದಾರೆ, ಬಿಜೆಪಿ ಲೀಡರ್ ಲೆಸ್ ಪಾರ್ಟಿ ಆಗಿದೆ, ನಾವಿಯಲ್ಲಿ ಅಂಬಿಗ ಬೇಕಾಗುತ್ತೆ, ಅಂಬಿಗನಿಲ್ಲದ ನಾವು ನದಿಯಲ್ಲಿ ಯಾವ ಕಡೆ ಹೋಗಬೇಕು ಅಂತ ಗೊತ್ತಾಗಲ್ಲ, ಬಿಜೆಪಿ ಯಾವ ದಿಕ್ಕಿಗೆ ಹೋಗೋತ್ತೆ ಗೊತ್ತಿಲ್ಲ, ಬಿಜೆಪಿಯಲ್ಲಿ ಭವಿಷ್ಯ ಇಲ್ಲ ಅಂತ ಬಹಳ ಜನ ಯೋಚನೆ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆ ಬಂದಾಗ ಬಿಜೆಪಿಯವರು ಕಾಂಗ್ರೆಸ್ ಗೆ ಬರ್ತಾರೆ ಎಂದರು.
ಬಹಳಷ್ಟು ಜನ ನನ್ನ ಸ್ನೇಹಿತರು ಸಂಪರ್ಕದಲ್ಲಿ ಇದ್ದಾರೆ, ಅವರನ್ನ ಕರೆದುಕೊಂಡ ಬಂದ ಮೇಲೆ ಅವರ ಸ್ಥಾನಮಾನ ಜವಾಬ್ದಾರಿ ಎಲ್ಲಾ ನಿರ್ಧಾರವಾಗುತ್ತದೆ, ಮುಂದಿನ ಚುನಾವಣೆಯಲ್ಲಿ ಎಲ್ಲಿ ಸ್ಪರ್ಧೆ ಮಾಡಬೇಕು ಎಲ್ಲವನ್ನೂ ಚರ್ಚೆ ಮಾಡಬೇಕು, ದಿಢೀರ್ ಅಂತ ನಿರ್ಧಾರ ಮಾಡೋಕೆ ಆಗಲ್ಲ ಎಂದರು.
ಶಾಸಕ ರಮೇಶ್ ಜಾರಕಿಹೊಳಿ, ಹೆಚ್ ಡಿಕೆ ಭೇಟಿ ಮಾಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಎನಾಗಿದೆ ನಿಮಗೆಲ್ಲ ಗೊತ್ತಿದೆ, ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕ ಆಯ್ಕೆ ಆಗಿಲ್ಲ, ಅಧ್ಯಕ್ಷರ ನೇಮಕ ಆಗಿಲ್ಲ, ಹಂಗಾಮಿ ಅಧ್ಯಕ್ಷರು ಇದ್ದಾರೆ, ಅಧ್ಯಕ್ಷರು ಇಲ್ಲದ ಸಮಯದಲ್ಲಿ ಕುಮಾರಸ್ವಾಮಿ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದೆ. ಬಹುತೇಕ ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ವಿಲೀನ ಆಗಬಹುದು ಎಂದು ಭವಿಷ್ಯ ನುಡಿದರು.
ಬೇರೆ ಬೇರೆ ಜಿಲ್ಲೆಯಲ್ಲಿ ಬೇರೆ ಬೇರೆ ಸಮಸ್ಯೆ ಇದೆ, ಜೆಡಿಎಸ್ ಬಿಜೆಪಿ ಜತೆ ವಿಲೀನ ಆದ್ರೆ ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕ ಎಂದರು.




